ಹೊನ್ನಾಳಿಯ ಹಿರೇಕಲ್ಮಠದಲ್ಲಿ ಶ್ರೀ ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಅವರ ಸಮ್ಮುಖದಲ್ಲಿ ವಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಅವರು ಪ್ರಧಾನಿ ಮೋದಿ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಪ್ರಧಾನ ಅರ್ಚಕ ಅನ್ನದಾನಯ್ಯ ಇದ್ದರು. Politics
ಹೊನ್ನಾಳಿ: 2014ರಿಂದ ಇಲ್ಲಿಯವರೆಗೂ ಒಂದು ದಿನವೂ ವಿಶ್ರಾಂತಿ ಪಡೆಯದೆ ದೇಶಕ್ಕಾಗಿ ಪ್ರಾವಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿರುವ ನಮ್ಮ ಪ್ರಧಾನಸೇವಕ ನರೇಂದ್ರ ಮೋದಿ ಅವರಿಗೆ ಭಗವಂತ ಸನ್ಮಂಗಳವನ್ನುಂಟು ವಾಡಲಿ ಎಂದು ವಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಆಶಿಸಿದರು. Politics
ಪ್ರಧಾನಿ ಮೋದಿ ಅವರ ಹೆಸರಿನಲ್ಲಿ ಪಟ್ಟಣದ ಹಳದಮ್ಮ ದೇವಿ, ರಾವೇಂದ್ರ ಸ್ವಾಮಿ ಹಾಗೂ ಹಿರೇಕಲ್ಮಠದಲ್ಲಿ ಗುರುವಾರ ವಿಶೇಷ ಪೂಜೆ ಸಲ್ಲಿಸಿ ವಾತನಾಡಿದರು.
ರೈಲು ನಿಲ್ದಾಣದಲ್ಲಿ ಚಹಾ ವಾರುತ್ತಿದ್ದ ಸಾವಾನ್ಯ ವ್ಯಕ್ತಿ, ಸಂ ಪರಿವಾರದ ಗರಡಿಯಲ್ಲಿ ಪಳಗಿ, ಗುಜರಾತ್ ಮುಖ್ಯಮಂತ್ರಿಯಾಗಿ, ಬಳಿಕ ದೇಶದ ಪ್ರಧಾನಿಯಾಗಿರುವುದನ್ನು ಇಡೀ ವಿಶ್ವವೇ ಗೌರವಿಸುತ್ತಿದೆ. ಇಂತಹ ನಾಯಕ ನಮ್ಮ ಪಕ್ಷದವರು ಎಂಬ ಹೆಮ್ಮೆ ನಮಗಿದೆ ಎಂದರು. ಮೋದಿ ಅವರು ಎಂದೂ ಅಧಿಕಾರವನ್ನು ಸ್ವಾರ್ಥಕ್ಕಾಗಿ ಬಳಸದೆ ಜನಧನ್, ಸ್ವಚ್ಛ ಭಾರತ, ರೈತರಿಗೆ ಬೆಂಬಲ ಬೆಲೆ, ರಕ್ಷಣಾ ಇಲಾಖೆಗೆ ಸ್ವಾಯತ್ತತೆ ಹಾಗೂ ಬಡವರಿಗೆ ಉಚಿತ ಉಜ್ವಲ ಗ್ಯಾಸ್ ವಿತರಿಸುವ ಮೂಲಕ ಹಗಲಿರುಳು ಶ್ರಮಿಸಿದ್ದಾರೆ. ಶತ್ರು ರಾಷ್ಟ್ರಗಳಿಗೆ ಸರಿಯಾದ ತಿರುಗೇಟು ನೀಡಿ, ದೇಶದ ವಿಚಾರದಲ್ಲಿ ಎಂದೂ ರಾಜಿ ವಾಡಿಕೊಳ್ಳದ ಏಕೈಕ ಪ್ರಧಾನಿ ಎನಿಸಿಕೊಂಡಿದ್ದಾರೆ ಎಂದು ಶ್ಲಾಸಿದರು. ಮೇಕ್ ಇನ್ ಇಂಡಿಯಾ, ಆತ್ಮನಿರ್ಭರ ಭಾರತ ಯೋಜನೆಗಳ ಮೂಲಕ ಯುವಕರಿಗೆ ಉದ್ಯೋಗ ನೀಡಿದ್ದಾರೆ ಎಂದು ತಿಳಿಸಿದರು.
ಹಿರೇಕಲ್ಮಠದ ಶ್ರೀ ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಬಿಜೆಪಿ ತಾಲೂಕು ಅಧ್ಯಕ್ಷ ಅರಕೆರೆ ನಾಗರಾಜ್, ಮಾಜಿ ಅಧ್ಯಕ್ಷ ಜೆ.ಕೆ.ಸುರೇಶ್, ಮಾರುತಿನಾಯ್ಕ, ಕೆ.ವಿ, ಶ್ರೀಧರ್, ನವೀನ್ ಇಂಚರ, ಬಾಬು ಹೋಬಳದಾರ್, ಮಹೇಶ್ ಹುಡೇದ್, ಎಸ್.ಎಸ್.ಬೀರಪ್ಪ, ಪ್ರಕಾಶ್ ಹೆಬ್ಬಾರ್, ಸುರೇಶ್, ರಂಗನಾಥ್ ಇತರರು ಇದ್ದರು.