ಜಗಳೂರು ಪಟ್ಟಣದ ತಾಪಂ ಸಭಾಂಗಣದಲ್ಲಿ ಮಂಗಳವಾರ ಕೃಷಿ ಇಲಾಖೆಯಿಂದ ಆಯೋಜಿಸಲಾಗಿದ್ದ ರೈತರ ಕುಂದುಕೊರತೆ ಸಭೆಯಲ್ಲಿ ಶಾಸಕ ಬಿ. ದೇವೇಂದ್ರಪ್ಪ ಅಧ್ಯಕ್ಷತೆವಹಿಸಿ ವಾತನಾಡಿದರು. ಭಾರತಮ್ಮ, ಜಿಯಾ ವುಲ್ಲಾ, ಮಂಜಾನಂದ, ಸಿದ್ದರಾಮಯ್ಯ ಇತರರಿದ್ದರು. Negligence
- ಶಾಸಕ ಬಿ. ದೇವೇಂದ್ರಪ್ಪ ಎಚ್ಚರಿಕೆ
- ಕುಂದುಕೊರತೆ ಸಭೆ
ಜಗಳೂರು: ಬೆಳೆ ಬೆಳೆಯುವ ರೈತಾಪಿ ವರ್ಗಕ್ಕೆ ಸೂಕ್ತ ಸಮಯಕ್ಕೆ ಬಿತ್ತನೆ ಬೀಜ, ಗೊಬ್ಬರ ಸಮರ್ಪವಾಗಿ ವಿತರಣೆ ವಾಡಬೇಕು. ಅಧಿಕಾರಿಗಳು, ವರ್ತಕರು ನಿರ್ಲಕ್ಷ್ಯ ತೋರಿದರೆ ಸಹಿಸುವುದಿಲ್ಲವೆಂದು ಶಾಸಕ ಬಿ. ದೇವೇಂದ್ರಪ್ಪ ಎಚ್ಚರಿಸಿದರು.
ತಾಲೂಕು ಪಂಚಾಯಿತಿಯಲ್ಲಿ ಮಂಗಳವಾರ ಕೃಷಿ ಇಲಾಖೆಯಿಂದ ಆಯೋಜಿಸಿದ್ದ ರೈತರ ಕುಂದುಕೊರತೆಗಳ ಸಭೆ ಅಧ್ಯಕ್ಷತೆವಹಿಸಿ ವಾತನಾಡಿದರು. Negligence
ಉತ್ತಮ ಮಳೆಯಾಗಿದ್ದು ಜೂನ್ ಮೊದಲ ವಾರದಲ್ಲಿ ಬಿತ್ತನೆ ಕಾರ್ಯ ಆರಂಭಿಸಲಿದ್ದಾರೆ. ರೈತರಿಗೆ ತೊಂದರೆಯಾಗದಂತೆ ಬಿತ್ತನೆ ಬೀಜ, ಗೊಬ್ಬರ ವಿತರಣೆ ವಾಡಬೇಕು. ಲೋಪವಾಗದಂತೆ ಜಾಗ್ರತೆ ವಹಿಸಬೇಕು ಎಂದು ಸೂಚಿಸಿದರು.
ಎಲ್ಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಗಳಲ್ಲಿ (ವಿಎಸ್‌ಎಸ್‌ಎನ್) ಕಡ್ಡಾಯವಾಗಿ ರಸಗೊಬ್ಬರ ವಾರಾಟಕ್ಕೆ ಕ್ರಮ ಕೈಗೊಳ್ಳಬೇಕು. ನಿಯವಾವಳಿಗಳ ನೆಪ ಒಡ್ಡಿ ರಸಗೊಬ್ಬರ ವಾರಾಟ ಪರವಾನಗಿ ನಿರಾಕರಿಸಬೇಡಿ. ಅಗತ್ಯ ತರಬೇತಿ ನೀಡಿ ಸ್ಥಳೀಯವಾಗಿ ರಸಗೊಬ್ಬರ ಮಾರಾಟ ಮಾಡಲು ಅವಕಾಶ ಕಲ್ಪಿಸಿ ಎಂದು ಕೃಷಿ ಅಧಿಕಾರಿಗಳಿಗೆ ತಿಳಿಸಿದರು.
ಅಧಿಕಾರಿಗಳಾಗಲಿ, ವ್ಯಾಪಾರಿಗಳಾಗಲಿ ರೈತರ ಜೀವನದಲ್ಲಿ ಚೆಲ್ಲಾಟವಾಡಬೇಡಿ. ಅಗತ್ಯ ಬೀಜ, ಗೊಬ್ಬರ ಒದಗಿಸಿ ಎಂದರು.
ಖಾಸಗಿ ಅಂಗಡಿಗಳಲ್ಲಿ ಬಿತ್ತನೆ ಬೀಜ ಮತ್ತು ಗೊಬ್ಬರ ಖರೀದಿಗೆ ಅಧಿಕೃತ ರಶೀದಿ ನೀಡದೇ ಬಿಳಿ ಹಾಳೆ ಮೇಲೆ ಬರೆದು ಕೊಟ್ಟು ರೈತರಿಗೆ ವಂಚಿಸಲಾಗುತ್ತಿದೆ, ಬಡ ರೈತರು ಮತ್ತು ದೊಡ್ಡ ರೈತರ ಮಧ್ಯೆ ತಾರತಮ್ಯ ಮಾಡಲಾಗುತ್ತಿದೆ ಎಂದು ಗೌರಿಪುರ ಸತ್ಯಮೂರ್ತಿ, ರೈತ ಸಂದ ಅಧ್ಯಕ್ಷ ಕುವಾರ್ ದೂರಿದರು.
ರೈತ ಮುಖಂಡರಾದ ರಾಜು, ಆರ್. ಓಬಳೇಶ್, ಶಿವಕುವಾರ್ ಸ್ವಾಮಿ, ಕೃಷಿ ಇಲಾಖೆಯ ಜಂಟಿ ಉಪ ನಿರ್ದೇಶಕ ಜಿಯಾ ವುಲ್ಲಾ, ಉಪ ನಿರ್ದೇಶಕಿ ಭಾರತಮ್ಮ, ಉಪ ತಹಸೀಲ್ದಾರ್ ಮಂಜಾನಂದ, ಸಿಪಿಐ ಸಿದ್ದರಾಮಯ್ಯ, ಪರಿಕರ ವಾರಾಟಗಾರರ ಸಂ ಅಧ್ಯಕ್ಷ ಸಿದ್ದೇಶ್, ಎಡಿಎ ಎಚ್. ಶ್ವೇತಾ, ಜೀವಿತಾ, ರೇಣುಕುವಾರ್ ಇತರರು ಇದ್ದರು.