ನ್ಯಾಮತಿ ತಾಲೂಕಿನ ಗಂಜೀನಹಳ್ಳಿ ಶ್ರೀ ವೀರಭದ್ರೇಶ್ವರ ಸ್ವಾಮಿಯ ಕೆಂಡಾರ್ಚನೆ ಮಂಗಳವಾರ ಭಕ್ತ ಸಮ್ಮುಖದಲ್ಲಿ ಜರುಗಿತು. 
ದಾವಣಗೆರೆ

ವೀರಭದ್ರೇಶ್ವರ ಸ್ವಾಮಿ ಕೆಂಡಾರ್ಚನೆ ಸಂಪನ್ನ

ಪ್ರಮುಖ ಮುಖ್ಯಾಂಶಗಳು

  • ಗಂಜೀನಹಳ್ಳಿ ಶ್ರೀ ವೀರಭದ್ರೇಶ್ವರ ಸ್ವಾಮಿಯ ಕೆಂಡಾರ್ಚನೆ
ನ್ಯಾಮತಿ: ತಾಲೂಕಿನ ಗಂಜೀನಹಳ್ಳಿ ಶ್ರೀ ವೀರಭದ್ರೇಶ್ವರ ಸ್ವಾಮಿಯ ಕೆಂಡಾರ್ಚನೆ ನೂರಾರು ಭಕ್ತರ ಸಮ್ಮುಖದಲ್ಲಿ ಮಂಗಳವಾರ ಜರುಗಿತು.
ಕೆಂಡಾರ್ಚನೆಯ ಅಂಗವಾಗಿ ವೀರಭದ್ರೇಶ್ವರ ಸ್ವಾಮಿ ದೇಗುಲ ಹಾಗೂ ಹಳ್ಳದ ಬಳಿಯ ಹಳೆಯ ದೇಗುಲದಲ್ಲಿ ಮುಂಜಾನೆಯಿಂದ ಸ್ವಾಮಿಗೆ ಹಾಗೂ ಪರಿವಾರದ ದೇವರಿಗೆ ಪೂಜಾ ಕೈಂಕರ್ಯ ನಡೆದವು. ಸ್ವಾಮಿಯ ಉತ್ಸವಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಗ್ರಾಮದ ಹೊರ ವಲಯದಲ್ಲಿರುವ ದೇವಾಲಯದ ಪ್ರಾಂಗಣಕ್ಕೆ ತರಲಾಯಿತು.
ಸಿದ್ಧಪಡಿಸಿದ್ದ ಅಗ್ನಿಕುಂಡಕ್ಕೆ ಪೂಜೆ ಸಲ್ಲಿಸಿ ನೈವೇದ್ಯ ಅರ್ಪಿಸಲಾಯಿತು. ಬಳಿಕ ಸ್ವಾಮೀಜಿ, ಮಠದ ಮನೆಯ ಜಂಗಮ ವಟು, ಗಂಜೀನಹಳ್ಳಿ, ನ್ಯಾಮತಿ, ದೊಡ್ಡೆತ್ತಿನಹಳ್ಳಿ ಗ್ರಾಮಗಳಭಕ್ತರು ವೀರಭದ್ರ ಸ್ವಾಮಿ ಪಲ್ಲಕ್ಕಿ, ಆಂಜನೇಯ ಸ್ವಾಮಿ ಉತ್ಸವ ಮೂರ್ತಿ ಹೊತ್ತು ಕೆಂಡ ಹಾಯ್ದರು.ಕೆಂಡಾರ್ಚನೆ ಪ್ರಯುಕ್ತ ಶುಕ್ರವಾರ ಅಂಕುರಾರ್ಪಣೆ, ಕಂಕಣ ಧಾರಣೆ ಮಾಡಲಾಗಿತ್ತು. ಸೋಮವಾರ ವೀರಭದ್ರೇಶ್ವರ ಸ್ವಾಮಿ ಹಾಗೂ ಪರಿವಾರ ದೇವರುಗಳಿಗೆ ರಾಂಪುರ ಶ್ರೀಹಾಲಸ್ವಾಮೀಜಿ ಮಠದ ಶಿವಕುವಾರ ಸ್ವಾಮೀಜಿ ಸಮ್ಮಖದಲ್ಲಿ ಗಂಗಾಪೂಜೆ, ಗಣಪತಿ ಪೂಜೆ, ಪುಣ್ಯಾಹ, ಪಂಚಕಲಸ ಪೂಜೆ, ರುದ್ರಾಭಿಷೇಕ, ಬಿಲ್ವಾರ್ಚನೆ ಮಂಗಳಾರತಿ ನಡೆಯಿತು. ಬುಧವಾರ ಸ್ವಾಮಿಯ ರಥೋತ್ಸವ ಜರುಗಲಿದೆ.