ಕುರಿಗೆ ಲಸಿಕೆ ನೀಡುತ್ತಿರುವ ಪಶು ವೈದ್ಯಕೀಯ ಪರೀಕ್ಷಕ 
ದಾವಣಗೆರೆ

ಪಿಪಿಆರ್ ರೋಗಕ್ಕೆ ಲಸಿಕಾಕರಣ ಶುರು

ಡಿ. ಎಂ. ಮಹೇಶ್

ಪ್ರಮುಖ ಮುಖ್ಯಾಂಶಗಳು

  • ದಾವಣಗೆರೆ ಜಿಲ್ಲೆಯ 3,12,127 ಕುರಿ-ಮೇಕೆಗಳ ಗುರಿ
  • ಮಂದೆ ಭೇಟಿಗೆ ಪಶುಪಾಲನಾ ಇಲಾಖೆ ತಂಡ ಸಜ್ಜು
  • ಮಾಸಾಂತ್ಯದವರೆಗೂ ನಡೆಯಲಿರುವ ಅಭಿಯಾನ
ರೋಗ ಲಕ್ಷಣವೇನು?
ಮಾರ್ಬಿಲಿ ವೈರಾಣುವಿನಿಂದ ಈ ಸಾಂಕ್ರಾಮಿಕ ರೋಗ ಹರಡಲಿದೆ. ಜನವರಿ, ಫೆಬ್ರವರಿ ತಿಂಗಳಲ್ಲಿ ರೋಗಬಾಧೆ ಹೆಚ್ಚು. ಬಾಯಿ, ನಾಲಗೆ, ಒಡಗುಗಳಲ್ಲಿ ಹುಣ್ಣು, ಅತಿಯಾದ ಜ್ವರ, ಆಹಾರ ತಿನ್ನದಿರುವುದು, ಕಣ್ಣಿನಲ್ಲಿ ಪಿಸುರು, ಮೂಗಿನಲ್ಲಿ ನೀರು ಸುರಿಯವುದು ನಂತರ ಗೊಣ್ಣೆಯು ರಕ್ತಮಿಶ್ರಿತವಾಗುವುದು. ಕೆಮ್ಮು-ಉಸಿರಾಟದ ತೊಂದರೆ, ರಕ್ತ-ಲೋಳೆ ಮಿಶ್ರಿತ ಭೇದಿ, ಗರ್ಭಪಾತ ಆಗುವುದು, ಮರಿಗಳಲ್ಲಿ ರೋಗದ ತೀವ್ರತೆ ಹೆಚ್ಚಿದ್ದು ಜೀವಕ್ಕೆ ಕುತ್ತು ತರಲಿದೆ.
ರೋಗಗ್ರಸ್ತ ಪ್ರಾಣಿಯೊಂದಿಗಿನ ನಿಕಟ ಸಂಪರ್ಕ, ಅವುಗಳ ಚಲನವಲನ, ವೈರಾಣುವಿನಿಂದ ಕಲುಷಿತ ನೀರು, ಗಾಳಿ, ಆಹಾರ ಸೇವನೆಯಿಂಡ ರೋಗ ಹರಡಲಿದೆ. ರೋಗ ತಡೆಗಾಗಿ ರೋಗಗ್ರಸ್ತ ಕುರಿ-ಮೇಕೆಗಳನ್ನು ಬೇರ್ಪಡಿಸಿ ಆರೈಕೆ ಮಾಡಬೇಕು. ಅಂಟುಜಾಡ್ಯ ನಿವಾರಕದಿಂದ ಜಾಗ ಸ್ವಚ್ಛಗೊಳಿಸಬೇಕು.
ರೋಗ ಕಾಣಿಸಿಕೊಂಡ ಕುರಿ-ಮೇಕೆಗಳನ್ನು ಹತ್ತಿರದ ಪಶು ವೈದ್ಯಾಧಿಕಾರಿಗಳಲ್ಲಿ ಚಿಕಿತ್ಸೆ ಕೊಡಿಸಬೇಕು. ಜತೆಗೆ ಕುರಿಗಳ ಬಾಯಿ, ನಾಲಗೆ, ಒಸಡನ್ನು ಗ್ಲಿಸರಿನ್, ಅಡುಗೆ ಸೋಡಾ ಬೆರೆಸಿದ ನೀರಿನಿಂದ ಆಗಾಗ್ಗೆ ಸ್ವಚ್ಛಗೊಳಿಸಬೇಕು ಎನ್ನುತ್ತಾರೆ ಪಶು ವೈದ್ಯರು.
ಇತರೆ ಕಾಯಿಲೆಗಳು
ಕುರಿ-ಮೇಕೆಗಳಿಗೆ ಕರುಳು ವಿಷಬೇನೆ (ಇಟಿ), ಗಳಲೆ ರೋಗ (ಎಸ್‌ಎಸ್), ಕಾಲುಬಾಯಿ ಜ್ವರ (ಎಫ್‌ಎಂಡಿ), ನೀಲಿ ನಾಲಗೆ (ಬಿಟಿ) ಕಂದು ರೋಗ (ಬ್ರುಸೆಲ್ಲೋಸಿಸ್), ನೆರಡಿ ರೋಗ (ಆಂಥ್ರಾಕ್ಸ್), ಕುರಿ ಸಿಡುಬು (ಶೀಪ್ ಪಾಕ್ಸ್) ಇತ್ಯಾದಿ ರೋಗಗಳೂ ಕಾಡಲಿದ್ದು ಆಯಾ ಕಾಲಕ್ಕೆ ತಕ್ಕಂತೆ ಕುರಿಗಾಹಿಗಳು ಕುರಿಗಳಿಗೆ ನಿಗದಿತ ಅವಧಿಯಲ್ಲಿ ಲಸಿಕೆ ಹಾಕಿಸಿಕೊಳ್ಳಬೇಕು. ಕಾರಣಾಂತರದಿಂದ ಸಾಯುವ ಕುರಿ-ಮೇಕೆಗಳಿಗೆ ಅನುಗ್ರಹ ಯೋಜನೆಯಡಿ ಪರಿಶೀಲನೆಗೆ ಒಳಪಟ್ಟ ಬಳಿಕ ಪರಿಹಾರಧನ ಸಿಗಲಿದೆ.

ಲಸಿಕೆ ಹಾಕುವ ಗುರಿ
------------
ತಾಲೂಕು ಕುರಿ ಮೇಕೆ
ಚನ್ನಗಿರಿ 30,849 7,297
ದಾವಣಗೆರೆ 43,414 10,140
ಹರಿಹರ 35,180 8,349
ಹೊನ್ನಾಳಿ 24,492 8,267
ಜಗಳೂರು 1,10,599 20,417
ನ್ಯಾಮತಿ 12,981 4,101
--------------------
ಒಟ್ಟು 2,50,990 61,137
--------------------

ಕುರಿಗೆ ಲಸಿಕೆ ನೀಡುತ್ತಿರುವ ಪಶು ವೈದ್ಯಕೀಯ ಪರೀಕ್ಷಕ