ಪ್ರಮುಖ ಮುಖ್ಯಾಂಶಗಳು
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಹಿಜಾಬ್ ವಿವಾದದ ಅರ್ಜಿ ವಿಚಾರಣೆ ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠದಲ್ಲಿ ಬಾಕಿ ಇರುವಾಗಲೇ ರಾಜ್ಯ ಸರ್ಕಾರ ಈ ನಿರ್ಧಾರ ಕೈಗೊಂಡಿರುವುದು ಅದರ ತುಷ್ಟೀಕರಣ ನೀತಿಗೆ ಸಾಕ್ಷಿ," ಎಂದು ಟೀಕಿಸಿದರು.
"ಶಿಕ್ಷಣ ಸಂಸ್ಥೆಗಳಲ್ಲಿ ಶ್ರೀಮಂತ-ಬಡವ, ಮೇಲು-ಕೀಳು ಎಂಬ ಭಾವನೆ ಬರಬಾರದೆಂಬ ಉದ್ದೇಶದಿಂದ ಸಮವಸ್ತ್ರ ಜಾರಿಯಲ್ಲಿದೆ. ಉಡುಪಿ ಹಿಜಾಬ್ ವಿವಾದದ ವೇಳೆ ಹೈಕೋರ್ಟ್, ಸರ್ಕಾರದ ನಿಷೇಧಾಜ್ಞೆಯನ್ನು ಎತ್ತಿಹಿಡಿದಿತ್ತು. ಪ್ರಕರಣ ಈಗ ಸುಪ್ರೀಂ ಕೋರ್ಟ್‌ನಲ್ಲಿದೆ. ಇಂತಹ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾನೂನಿನ ಅರಿವಿದ್ದೂ ಮಧ್ಯಪ್ರವೇಶಿಸಿರುವುದು ನ್ಯಾಯಾಲಯದ ನಿಂದನೆಯಂತಿದೆ. ಇವರಿಗೆ ಸಂವಿಧಾನದ ಮೇಲೆ ಗೌರವವಿದೆಯೇ?" ಎಂದು ಪ್ರಶ್ನಿಸಿದರು.
"ದಾವಣಗೆರೆ ಹಾಗೂ ಬಾಗಲಕೋಟೆ ಉಪಚುನಾವಣೆಗಳಲ್ಲಿ ಅಲ್ಪಸಂಖ್ಯಾತರು ನಿರೀಕ್ಷಿತ ಮಟ್ಟದಲ್ಲಿ ಕಾಂಗ್ರೆಸ್ ಕೈಹಿಡಿದಿಲ್ಲ ಎಂಬ ಕಾರಣಕ್ಕೆ, ಅವರನ್ನು ಮತ್ತೆ ಓಲೈಸಲು ಈ ಕ್ರಮಕ್ಕೆ ಮುಂದಾಗಿದ್ದಾರೆ. ಸರ್ಕಾರ ವಿದ್ಯಾರ್ಥಿಗಳಲ್ಲಿ ತಾರತಮ್ಯ ಮಾಡಿದರೆ ನಾವು ಕೂಡ ವಿದ್ಯಾರ್ಥಿಗಳಿಗೆ ಕೇಸರಿ ಶಾಲು ಧರಿಸಿ ಬರುವಂತೆ ಕರೆ ನೀಡಬೇಕಾಗುತ್ತದೆ. ಅದರಿಂದಾಗುವ ಅನಾಹುತಗಳಿಗೆ ಸರ್ಕಾರವೇ ಜವಾಬ್ದಾರಿ," ಎಂದು ಎಚ್ಚರಿಕೆ ನೀಡಿದರು.
"ಜಾಗತಿಕ ಇಂಧನ ಅಸ್ಥಿರತೆಯ ಹಿನ್ನೆಲೆಯಲ್ಲಿ ವಾಹನ ಬಳಕೆ ಕಡಿಮೆ ಮಾಡುವಂತೆ ಪ್ರಧಾನಿ ಮೋದಿ ನೀಡಿದ ಕರೆ ಸ್ವಾಗತಾರ್ಹ. ಪ್ರಧಾನಿಯವರು ಸ್ವತಃ ತಮ್ಮ ಬೆಂಗಾವಲು ಪಡೆಯ ಶೇ. 50ರಷ್ಟು ವಾಹನಗಳನ್ನು ಕಡಿತಗೊಳಿಸಿ ಮಾದರಿಯಾಗಿದ್ದಾರೆ. ಈ ಹಿಂದೆ ಕಾಂಗ್ರೆಸ್ ಆಡಳಿತವಿದ್ದಾಗಲೂ ಇಂತಹ ಮನವಿಗಳನ್ನು ಮಾಡಲಾಗಿತ್ತು. ಈಗ ಮೋದಿ ಅವರು ಮಾಡಿದರೆ ಟೀಕಿಸುವುದು ಸರಿಯಲ್ಲ," ಎಂದು ತಿರುಗೇಟು ನೀಡಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ತಾಲೂಕಾಧ್ಯಕ್ಷ ಅರಕೆರೆ ನಾಗರಾಜ್, ನಿಕಟಪೂರ್ವ ಅಧ್ಯಕ್ಷ ಸುರೇಶ್, ಜೆ.ಕೆ. ಮಾರುತಿ, ರಂಗನಾಥ್, ಬಾಬು ಹೋಬಳದಾರ್, ನೆಲಹೊನ್ನೆ ಮಂಜುನಾಥ್, ಕೆ.ವಿ. ಶ್ರೀಧರ್ ಇತರರಿದ್ದರು.