ಚನ್ನಗಿರಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿಶ್ವ ಮಾನವ ಹಕ್ಕುಗಳ ಸೇವಾ ಪ್ರತಿಷ್ಠಾನದ ಜಿಲ್ಲಾಧ್ಯಕ್ಷರ ಅಭಿನಂದನಾ ಸಮಾರಂಭವನ್ನು ಜಿಲ್ಲಾಧ್ಯಕ್ಷ ಜಿ.ಎ. ರುದ್ರೇಶ್ ನಲ್ಲೂರು ಉದ್ಘಾಟಿಸಿದರು. ನಾಗರಾಜ್, ಎಚ್.ಆರ್. ಗಂಗಾಧರಯ್ಯ, ಶೈಲೇಶ್ ಪಟೇಲ್ ಇತರರಿದ್ದರು.
- ಜಿ.ಎ.ರುದ್ರೇಶ್ ನಲ್ಲೂರು ಹೇಳಿಕೆ
- ಚನ್ನಗಿರಿಯಲ್ಲಿ ಅಭಿನಂದನಾ ಸಮಾರಂಭ
ಚನ್ನಗಿರಿ: ಭಾರತದ ಸಂವಿಧಾನವು ಪ್ರತಿಯೊಬ್ಬರಿಗೂ ಸಮಾನತೆ, ಘನತೆ ಮತ್ತು ಸ್ವಾತಂತ್ರ್ಯದ ಹಕ್ಕುಗಳನ್ನು ಖಾತರಿ ಪಡಿಸಿದೆ. ಈ ಹಕ್ಕುಗಳ ರಕ್ಷಣೆಯೇ ಮಾನವ ಹಕ್ಕುಗಳ ಮೂಲ ಆಶಯ ಎಂದು ವಿಶ್ವ ಮಾನವ ಹಕ್ಕುಗಳ ಸೇವಾ ಪ್ರತಿಷ್ಠಾನದ ಜಿಲ್ಲಾಧ್ಯಕ್ಷ ಜಿ.ಎ. ರುದ್ರೇಶ್ ನಲ್ಲೂರು ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ವಿಶ್ವ ಮಾನವ ಹಕ್ಕುಗಳ ಸೇವಾ ಪ್ರತಿಷ್ಠಾನದ ತಾಲೂಕು ಘಟಕ ಹಮ್ಮಿಕೊಂಡಿದ್ದ ಜಿಲ್ಲಾಧ್ಯಕ್ಷರ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಜೀವಿಸುವ ಹಕ್ಕು, ವೈಯಕ್ತಿಕ ಸ್ವಾತಂತ್ರ್ಯ, ಶಿಕ್ಷಣ ಮತ್ತು ಧಾರ್ಮಿಕ ಸ್ವಾತಂತ್ರ್ಯಗಳು ಪ್ರತಿಯೊಬ್ಬರಿಗೂ ದೊರೆತಿವೆ. ಆದರೆ, ಇಂದಿಗೂ ಮಹಿಳೆಯರು, ಮಕ್ಕಳು, ದಲಿತರು ಮತ್ತು ಹಿಂದುಳಿದ ವರ್ಗಗಳ ಮೇಲೆ ನಡೆಯುವ ದೌರ್ಜನ್ಯಗಳಿಂದ ಮಾನವ ಹಕ್ಕುಗಳ ಉಲ್ಲಂಘನೆಯಾಗಿವೆ ಎಂದರು. ತಾಲೂಕಾಧ್ಯಕ್ಷ ಸಿ.ಆರ್. ನಾಗೇಂದ್ರಪ್ಪ ಮಾತನಾಡಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಕ್ಕುಗಳು ಅರ್ಥವಾದರೂ ಇಂದಿಗೂ ವರ್ಣ ಮತ್ತು ಧರ್ಮದ ಹೆಸರಿನಲ್ಲಿ ಪಕ್ಷಪಾತ ನಡೆಯುತ್ತಿರುವುದು ವಿಷಾದನೀಯ ಎಂದು ಹೇಳಿದರು.
ವಿಶ್ವ ಮಾನವ ಹಕ್ಕುಗಳ ಸೇವಾ ಪ್ರತಿಷ್ಠಾನದ ಕಾರ್ಯದರ್ಶಿ ನಾಗರಾಜ್, ಗೌರವಾಧ್ಯಕ್ಷ ಎಚ್.ಆರ್. ಗಂಗಾಧರಯ್ಯ, ಜಿಲ್ಲಾ ಕಾರ್ಯಧ್ಯಕ್ಷ ಶೈಲೇಶ್ ಪಟೇಲ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಕಲ್ಪನರಾಜ್, ತಾಲೂಕಾಧ್ಯಕ್ಷೆ ಎಂ. ಉಮಾದೇವಿ, ದೊಡ್ಡಬಾವಿ ಸುರೇಶ್, ಜಿ.ಎಂ. ಪ್ರಸನ್ನ, ಕೆ.ಜಿ.ಕುಮಾರ್ ಇದ್ದರು.