ಹರಿಹರದ ಗಿರಿಯಮ್ಮ ಆರ್. ಕಾಂತಪ್ಪ ಶ್ರೇಷ್ಠಿ ಮಹಿಳಾ ಕಾಲೇಜಿನಲ್ಲಿ ಶುಕ್ರವಾರ ನಡೆದ ವಿಚಾರ ಸಂಕಿರಣವನ್ನು ಪೌರ ಕಾರ್ಮಿಕರಾದ ನೇತ್ರಾವತಿ ಹಾಗೂ ಹುಚ್ಚಂಗೆಮ್ಮ ಉದ್ಘಾಟಿಸಿದರು. ಡಾ.ಎಚ್.ಡಿ. ಪ್ರಶಾಂತ್, ಡಾ. ಶ್ರೀನಿವಾಸ ಆಜೂರ ಇತರರು ಇದ್ದರು.
- ಡಾ.ಎಚ್.ಡಿ. ಪ್ರಶಾಂತ್ ಕಳವಳ
- ರಾಜ್ಯಮಟ್ಟದ ವಿಚಾರ ಸಂಕಿರಣ
ಹರಿಹರ : ದೇಶದಲ್ಲಿ ಪ್ರತಿ ನಿಮಿಷಕ್ಕೆ 51 ಮಹಿಳಾ ದೌರ್ಜನ್ಯ ಪ್ರಕರಣಗಳು ದಾಖಲಾಗುತ್ತಿರುವುದು ಅತ್ಯಂತ ಆತಂಕಕಾರಿ ಹಾಗೂ ವಿಪರ್ಯಾಸ ಎಂದು ಹಂಪಿ ಕನ್ನಡ ವಿವಿಯ ಅಭಿವೃದ್ಧಿ ಅಧ್ಯಯನ ವಿಭಾಗದ ಮುಖ್ಯಸ್ಥ ಹಾಗೂ ಸವಾಜ ನಿಕಾಯದ ಡೀನ್ ಡಾ.ಎಚ್.ಡಿ. ಪ್ರಶಾಂತ್ ಕಳವಳ ವ್ಯಕ್ತಪಡಿಸಿದರು.
ನಗರದ ಗಿರಿಯಮ್ಮ ಆರ್. ಕಾಂತಪ್ಪ ಶ್ರೇಷ್ಠಿ ಪ್ರಥಮದರ್ಜೆ ಮಹಿಳಾ ಮಹಾವಿದ್ಯಾಲಯದಲ್ಲಿ ಬಿ.ಎನ್. ಕಾಲೇಜು ಆಡಳಿತ ಮಂಡಳಿ, ಜನಸ್ಪಂದನ ಟ್ರಸ್ಟ್ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಮಹಿಳಾ ಸಬಲೀಕರಣ: ಸಮಕಾಲೀನ ಸವಾಲುಗಳು ಮತ್ತು ಮುಂದಣ ಹಾದಿ’ ಕುರಿತು ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ವಾತನಾಡಿದರು.
ನಿರ್ಭಯಾ ಪ್ರಕರಣದ ನಂತರ ಮಹಿಳಾ ಸಂರಕ್ಷಣಾ ಕಾನೂನು ಬಲಗೊಂಡರೂ ದೌರ್ಜನ್ಯಗಳು ಕಡಿಮೆಯಾಗಿಲ್ಲ. ಜಾತಿ, ಧರ್ಮ, ಅಧಿಕಾರ ಮತ್ತು ಆರ್ಥಿಕ ಅಸವಾನತೆಗಳು ಸೀ ದೌರ್ಜನ್ಯಕ್ಕೆ ಪ್ರಮುಖ ಕಾರಣವಾಗುತ್ತಿವೆ. ವಿಶೇಷವಾಗಿ ಅಸಂಟಿತ ವಲಯದ ಮಹಿಳೆಯರು ಆರ್ಥಿಕ ಭದ್ರತೆ ಇಲ್ಲದೆ ಶೋಷಣೆಗೆ ಒಳಗಾಗುತ್ತಿದ್ದಾರೆ. ಶಾಲೆಗಳಲ್ಲಿಯೆ ನಡೆಯುವ ಲೈಂಗಿಕ ದೌರ್ಜನ್ಯಗಳು ಶಿಕ್ಷಣ ವ್ಯವಸ್ಥೆಯನ್ನೆ ಪ್ರಶ್ನಿಸುವಂತಿವೆ ಎಂದರು.
ಡಾ.ಬಿ.ಆರ್. ಅಂಬೇಡ್ಕರ್ ಹೇಳಿದಂತೆ ರಚನಾತ್ಮಕ, ಸಾವಾಜಿಕ ಬದಲಾವಣೆಯೆ ನಿಜವಾದ ಮಹಿಳಾ ಸಬಲೀಕರಣ. ಮಹಿಳೆಯರು ತಮ್ಮ ಹಕ್ಕುಗಳ ಬಗ್ಗೆ ಜಾಗೃತರಾಗಿ ಆತ್ಮವಿಶ್ವಾಸದಿಂದ ಬದುಕಬೇಕು. ಗ್ರಾಮೀಣ ಮಹಿಳೆಯರ ಸಾಧನೆಗಳನ್ನು ಸವಾಜಕ್ಕೆ ಪರಿಚಯಿಸಬೇಕಿದೆ ಎಂದು ಹೇಳಿದರು.
ವಿಚಾರ ಸಂಕಿರಣದಲ್ಲಿ ಮಹಿಳಾ ಹಕ್ಕುಗಳು, ಸಾವಾಜಿಕ ಅಸವಾನತೆ, ಉದ್ಯೋಗಾವಕಾಶ, ಆರೋಗ್ಯ ಹಾಗೂ ಕಾನೂನು ಅರಿವಿನ ಕುರಿತು ತಜ್ಞರು ವಿಷಯ ಮಂಡಿಸಿದರು. ವಿದ್ಯಾರ್ಥಿನಿಯರಿಂದ ನಡೆದ ಪ್ರಬಂಧ ಮಂಡನೆ ಹಾಗೂ ಪ್ರಶ್ನೋತ್ತರ ಸಂವಾದ ಗಮನ ಸೆಳೆಯಿತು.
ಪೌರ ಕಾರ್ಮಿಕರಾದ ನೇತ್ರಾವತಿ ಹಾಗೂ ಹುಚ್ಚಂಗೆಮ್ಮ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಾಚಾರ್ಯ ಡಾ. ಶ್ರೀನಿವಾಸ ಆಜೂರ ಅಧ್ಯಕ್ಷತೆ ವಹಿಸಿದ್ದರು. ಜನಸ್ಪಂದನ ಟ್ರಸ್ಟ್ ಅಧ್ಯಕ್ಷ ಸುನಿಲ್ ಕುವಾರ್, ಪೌರ ಸೇವಾ ಸಮಿತಿ ಅಧ್ಯಕ್ಷ ಜಿ.ಎಂ. ತಿಪ್ಪೇಸ್ವಾಮಿ, ಕಾರ್ಯದರ್ಶಿ ಎಸ್. ಪ್ರಸನ್ನಕುವಾರ್, ನಿರ್ದೇಶಕ ಆರ್.ವಿ. ಬಲರಾಮ ಶ್ರೇಷ್ಠಿ, ಪರಮೇಶ್ವರಪ್ಪ, ಆರ್.ವಿ. ಕೃಷ್ಣಮೂರ್ತಿ, ಪ್ರೊ.ಸಿ.ವೈ. ಯಶೋಧ, ಡಾ. ಅನಸೂಯ ಕಾಂಬಳೆ, ಟಿ.ಡಿ. ಸುಜಾತ, ಡಾ.ಎ.ಕೆ. ತಿಮ್ಮಪ್ಪ, ಗೌರಮ್ಮ, ಐಕ್ಯೂಎಸಿ ಸಂಚಾಲಕಿ ಎಚ್.ಎಂ. ವೀಣಾ, ಡಾ. ಬಾಹುಬಲಿ ವನಕುದರಿ ಇದ್ದರು.