ಚನ್ನಗಿರಿ ತಾಲೂಕಿನ ತಿಪ್ಪಗೊಂಡನಹಳ್ಳಿಯಲ್ಲಿ ಅರಣ್ಯ ಇಲಾಖೆಯ ಬೋನಿಗೆ ಬಿದ್ದ ಕರಡಿ. ಪ್ರಭಾರ ವಲಯ ಅರಣ್ಯಾಧಿಕಾರಿ ಉಷಾ, ಉಪ ಅರಣ್ಯಾಧಿಕಾರಿ ಸುಧಾಕರ್, ಪ್ರವೀಣ್, ಅರಣ್ಯ ಸಂರಕ್ಷಕ ದೀಪಕ್ ಇದ್ದರು.Bear capture 
ದಾವಣಗೆರೆ

ತಿಪ್ಪಗೊಂಡನಹಳ್ಳಿ ನಿದ್ದೆಗೆಡಿಸಿದ್ದ ಕರಡಿ ಸೆರೆ Bear capture

ಚನ್ನಗಿರಿ: ಕಳೆದ ಹತ್ತು ದಿನಗಳಿಂದ ತಾಲೂಕಿನ ತಿಪ್ಪಗೊಂಡನಹಳ್ಳಿ ಮತ್ತು ಸುತ್ತಮುತ್ತಲಿನ ಅಡಕೆ ತೋಟಗಳಲ್ಲಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿದ್ದ ಗಂಡು ಕರಡಿಯೊಂದನ್ನು ಅರಣ್ಯ ಇಲಾಖೆ ಸಿಬ್ಬಂದಿ ಬುಧವಾರ ಸೆರೆಹಿಡಿದಿದ್ದಾರೆ.
ತಿಪ್ಪಗೊಂಡನಹಳ್ಳಿ ಗ್ರಾಮದ ತುಮ್‌ಕೋಸ್ ನಿರ್ದೇಶಕ ಟಿ.ವಿ. ರಾಜು ಪಟೇಲ್ ಅವರ ಸಪೋಟ ತೋಟದಲ್ಲಿ ಹಣ್ಣುಗಳನ್ನು ತಿನ್ನಲು ಈ ಕರಡಿ ಬರುತ್ತಿತ್ತು. ಕರಡಿ ಸಂಚಾರದಿಂದಾಗಿ ರೈತರು ಸಂಜೆ ಮತ್ತು ರಾತ್ರಿ ವೇಳೆ ತೋಟಕ್ಕೆ ಹೋಗುವುದನ್ನೇ ಬಿಟ್ಟಿದ್ದರು ಮತ್ತು ಈ ಬಗ್ಗೆ ಅರಣ್ಯ ಇಲಾಖೆಗೆ ದೂರು ನೀಡಿದ್ದರು.
ದೂರು ಸ್ವೀಕರಿಸಿದ ಚನ್ನಗಿರಿ ಪ್ರಭಾರ ವಲಯ ಅರಣ್ಯಾಧಿಕಾರಿ ಉಷಾ ಅವರ ನೇತೃತ್ವದ ತಂಡ ಸ್ಥಳ ಪರಿಶೀಲನೆ ನಡೆಸಿ, ತೋಟದಲ್ಲಿ ಬೋನು ಇರಿಸಿದ್ದರು. ಮಂಗಳವಾರ ತಡರಾತ್ರಿ ಆಹಾರ ಹುಡುಕಿಕೊಂಡು ಬಂದ ಕರಡಿ ಬೋನಿಗೆ ಬಿದ್ದಿದೆ.
ಸೆರೆಸಿಕ್ಕ ಕರಡಿಯನ್ನು ಕೂಡಲೇ ಹೊನ್ನೇಬಾಗಿ ಗ್ರಾಮದ ಪಶು ಆಸ್ಪತ್ರೆಗೆ ಕರೆದೊಯ್ದು ಆರೋಗ್ಯ ತಪಾಸಣೆ ನಡೆಸಲಾಯಿತು. ಕರಡಿಯ ಆರೋಗ್ಯ ಸ್ಥಿರವಾಗಿದ್ದು, ಯಾವುದೇ ಗಾಯಗಳಾಗಿಲ್ಲ ಎಂದು ಪಶುವೈದ್ಯ ಡಾ. ದರ್ಶನ್ ತಿಳಿಸಿದ ನಂತರ, ಅರಣ್ಯ ಇಲಾಖೆಯು ಕರಡಿಯನ್ನು ಭದ್ರಾ ಅರಣ್ಯ ಪ್ರದೇಶಕ್ಕೆ ಬಿಟ್ಟು ಬಂದಿದೆ. ಕಾರ್ಯಾಚರಣೆಯಲ್ಲಿ ಚನ್ನಗಿರಿ ಪ್ರಭಾರ ವಲಯ ಅರಣ್ಯಾಧಿಕಾರಿ ಉಷಾ, ಉಪ ಅರಣ್ಯಾ ಧಿಕಾರಿ ಸುಧಾಕರ್, ಪ್ರವೀಣ್, ಅರಣ್ಯ ಸಂರಕ್ಷಕ ದೀಪಕ್, ಬಸವನಗೌಡ, ಬಸವರಾಜ್ ಇದ್ದರು.