ಚನ್ನಗಿರಿ ಶಾಸಕ ಕಚೇರಿಯಲ್ಲಿ ಜಿಲ್ಲಾ ವಿಶೇಷ ಚೇತನ ಹಾಗೂ ಹಿರಿಯ ನಾಗರಿಕರ ಇಲಾಖೆಯಿಂದ ಅಂಗವಿಕಲರಿಗೆ ದ್ವಿಚಕ್ರ ವಾಹನವನ್ನು ಶಾಸಕ ಬಸವರಾಜ್ ಶಿವಗಂಗಾ ವಿತರಿಸಿದರು. ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತ ಸುಬ್ರಹ್ಮಣ್ಯ, ಶಾಸಕರ ಅಪ್ತ ಕಾರ್ಯದರ್ಶಿ ರವಿಕುವಾರ್, ಜಯದೇವ ಇದ್ದರು.disabled
- ಶಾಸಕ ಬಸವರಾಜ್ ಶಿವಗಂಗಾ ಮನವಿ
- ಸಧೃಡ ಮನೋಬಲ ಹೊಂದಿ ಸಾಧನೆ ಮಾಡಿ
ಚನ್ನಗಿರಿ: ಅಂಗವಿಕಲರಿಗೆ ಅನುಕಂಪ ತೋರಿಸುವ ಬದಲು ಜೀವನ ಕಟ್ಟಿಕೊಳ್ಳಲು ಅವರಿಗೆ ಬೆಂಬಲ ನೀಡಬೇಕಿದೆ ಎಂದು ಶಾಸಕ ಬಸವರಾಜ್ ಶಿವಗಂಗಾ ತಿಳಿಸಿದರು.
ಶಾಸಕ ಕಚೇರಿಯಲ್ಲಿ ಸೋಮವಾರ ಜಿಲ್ಲಾ ವಿಶೇಷ ಚೇತನ ಹಾಗೂ ಹಿರಿಯ ನಾಗರಿಕರ ಇಲಾಖೆಯಿಂದ ಇಬ್ಬರು ಅಂಗವಿಕಲರಿಗೆ ದ್ವಿಚಕ್ರ ವಾಹನ ವಿತರಿಸಿ ವಾತನಾಡಿದರು.
ದ್ವಿಚಕ್ರ ವಾಹನ ಮಾರಾಟ ಮಾಡದೆ ವ್ಯವಹಾರ, ಕುಟುಂಬ ನಿರ್ವಹಣೆಗೆ ಬಳಸಿಕೊಳ್ಳಬೇಕು. ಮಾರಾಟ ಮಾಡಿದ್ದು ಕಂಡುಬಂದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಎಲ್ಲರಂತೆ ನಾನಿಲ್ಲ ಎಂಬ ಕೀಳಿರಿಮೆ ತೊರೆದು ಎಲ್ಲರಿಗಿಂತ ಹೆಚ್ಚು ಶಕ್ತಿ ಇದೆ ಎಂಬ ಮನೋಬಲದಿಂದ ನೀವಿರುವ ಕ್ಷೇತ್ರದಲ್ಲಿ ಸಾಧನೆ ಮಾಡುವಂತೆ ಅಂಗವಿಕಲರಿಗೆ ಸಲಹೆ ನೀಡಿದರು.
ಅಂಗವಿಕಲ ಮಕ್ಕಳನ್ನು ಸಾಮಾನ್ಯ ಮಕ್ಕಳಂತೆ ನೋಡಿಕೊಳ್ಳಬೇಕು. ಅವರನ್ನು ಶಾಲೆಗೆ ಕಳುಹಿಸಿ ಅಕ್ಷರ ಜ್ಞಾನ ಕೊಡಿಸಬೇಕು. ಮಕ್ಕಳು ಹೇಗಿರುತ್ತಾರೆ ಅದರಂತೆ ಸ್ವೀಕರಿಸಿ ಬೆಂಬಲಿಸಬೇಕು. ಅವರಲ್ಲಿರುವ ಪ್ರತಿಭೆ, ಸಾಮರ್ಥ್ಯ ಪ್ರೋತ್ಸಾಹಿಸಬೇಕು ಎಂದರು. ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತ ಸುಬ್ರಹ್ಮಣ್ಯ, ಶಾಸಕರ ಅಪ್ತ ಕಾರ್ಯದರ್ಶಿ ರವಿಕುವಾರ್, ಜಯದೇವ ಇತರರು ಇದ್ದರು.