ಚನ್ನಗಿರಿ ತಾಲೂಕು ಮರವಂಜಿ ಗ್ರಾಮದ ಶಿವಲಿಂಗಪ್ಪ ಅವರ ಜಮೀನಿನಲ್ಲಿ ಸಾವಯವ ಗೊಬ್ಬರ, ಗೋಕೃಪಾಮೃತ, ಗೋಮೂತ್ರ, ಎರೆಹುಳು ಗೊಬ್ಬರ ತಯಾರಿಸುವ ವಿಧಾನ.Organic 
ದಾವಣಗೆರೆ

ಸಾವಯವ ಕೃಷಿಯಿಂದ ಯಶಸ್ಸು Organic

ಚಂದನ ವಿ ಎಂ

ಪ್ರಮುಖ ಮುಖ್ಯಾಂಶಗಳು

  • ರೈತ ಬಿ.ಎಂ. ಶಿವಲಿಂಗಪ್ಪನ ಯಶೋಗಾಥೆ
  • ಬೆಳೆ ಜತೆ ಹೈನುಗಾರಿಕೆಯಿಂದ ಉತ್ತಮ ಲಾಭ
ಟಿ.ಎನ್. ಜಗದೀಶ್ ಚನ್ನಗಿರಿ
ಕೃಷಿಯಲ್ಲಿ ರಾಸಾಯನಿಕ ಗೊಬ್ಬರ ತ್ಯಜಿಸಿ, ಸಾವಯವ ಗೊಬ್ಬರವನ್ನು ಕೃಷಿಯಲ್ಲಿ ಬಳಸಿ ಯಶಸ್ಸಿನ ದಾರಿ ಕಂಡುಕೊಂಡು ಪ್ರಗತಿ ಪರ ರೈತರೊಬ್ಬರು ಗಮನ ಸೆಳೆದಿದ್ದಾರೆ. Organic
ಚನ್ನಗಿರಿ ತಾಲೂಕು ಮರವಂಜಿ ಗ್ರಾಮದ ಬಿ.ಎಂ. ಶಿವಲಿಂಗಪ್ಪ ಸಾಂಪ್ರದಾಯಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡಿದ್ದಾರೆ. ತಮಗಿರುವ ನಾಲ್ಕೂವರೆ ಎಕರೆ ಜಮೀನಿನಲ್ಲಿ ಕುಟುಂಬ ಸದಸ್ಯರ ಸಹಕಾರದಿಂದ ತಮ್ಮ ತೋಟವನ್ನೇ ಒಂದು ಜ್ಞಾನ ಕೇಂದ್ರವನ್ನಾಗಿ ಮಾಡಿದ್ದಾರೆ. ಇಲ್ಲಿಗೆ ಭೇಟಿ ನೀಡಿದ ರೈತರು ಇಲ್ಲಿನ ಪದ್ಧತಿಯನ್ನು ತಮ್ಮ ತೋಟಗಳಲ್ಲಿ ಅಳವಡಿಸಿಕೊಳ್ಳಬೇಕೆಂಬ ಬಯಕೆ ಹೊಂದಿದ್ದಾರೆ.
ನೌಕರಿ ಹಿಡಿಯುವಂತೆ ಬಿಕಾಂ ಪದವೀಧರ ಶಿವಲಿಂಗಪ್ಪ ಅವರಿಗೆ ಪಾಲಕರು ಒತ್ತಡ ಹಾಕಿದರೂ ಕೇಳದೆ, ತಂದೆಯಂತೆ ಕೃಷಿಯನ್ನು ಅಚ್ಚಕಟ್ಟಾಗಿ ಕಲಿತು ಜೀವನ ಕಟ್ಟಿಕೊಂಡರು. ಹೊಸ ಪ್ರಯೋಗ ವಾಡಿ ವಿವಿಧ ಬೆಳೆಗಳನ್ನು ಬೆಳೆದರು.
ಅತಿಯಾದ ರಾಸಾಯನಿಕ ಗೊಬ್ಬರ ಬಳಕೆಯಿಂದ ಭೂಮಿಯ ಫಲವತ್ತತೆ ಕಳೆದುಕೊಳ್ಳುತ್ತದೆ ಎಂದು ಮನಗಂಡು, ಸಾವಯವ ಗೊಬ್ಬರದ ಮೊರೆ ಹೋದರು. ಪಾರಂಪರಿಕ, ನೈಸರ್ಗಿಕ ಪದ್ಧತಿಯ ಮೂಲಕ ಪ್ರತಿ ವರ್ಷ 30ಲಕ್ಷ ಲಾಭ ಪಡೆಯುತ್ತಿದ್ದಾರೆ.
ಶಿವಲಿಂಗಪ್ಪ ಅವರ ಸಾಧನೆ ಗುರುತಿಸಿ ಕೃಷಿ ಇಲಾಖೆ 2025-26ನೇ ಸಾಲಿನಲ್ಲಿ ಶ್ರೇಷ್ಠ ಕೃಷಿಕ ಪ್ರಶಸ್ತಿ ನೀಡಿ ಗೌರವಿಸಿದೆ.
ಗೊಬ್ಬರ ತಯಾರಿಕೆ: ತರಳಬಾಳು ವಿಜ್ಞಾನ ಕೇಂದ್ರದಿಂದ ಜೀವಾಮೃತ, ಗೋಕೃಪಾಮೃತ, ಗೋಮೂತ್ರ, ಎರೆಹುಳು ಗೊಬ್ಬರ ತಯಾರಿಕೆಯ ಬಗ್ಗೆ ತರಬೇತಿ ಪಡೆದಿದ್ದು, ವಿಶ್ವ ಬ್ಯಾಂಕ್‌ನ ರಿವಾರ್ಡ್ ಯೋಜನೆಯಡಿ ಎರೆಹುಳು ತೊಟ್ಟಿ ಹಾಗೂ ಜೇನು ಸಾಗಣೆ ಟಕ ಮಾಡಲಾಗಿದೆ. ಜಮೀನಿಗೆ 6 ವರ್ಷಗಳಿಂದ ರಾಸಾಯನಿಕ ಗೊಬ್ಬರ ಬಳಕೆ ಮಾಡಿಲ್ಲ. ಪತ್ನಿ ಹಾಗೂ ಪುತ್ರರು ತಂದೆಯ ಕೃಷಿ ಕೆಲಸಕ್ಕೆ ಕೈ ಜೋಡಿಸಿದ್ದಾರೆ.
ಬೆಳೆ, ಹೈನುಗಾರಿಕೆ: 4 ಎಕರೆ 20 ಗುಂಟೆ ಜಮೀನಿನಲ್ಲಿ ನೈಸರ್ಗಿಕ ಪದ್ಧತಿ ಅಳವಡಿಸಿಕೊಂಡು ಅಡಿಕೆ, ಬಾಳೆ, ಮೆಕ್ಕೆಜೋಳ, ತೊಗರಿ, ಅಲಸಂದೆ, ಭತ್ತ ಬೆಳೆಯುತ್ತಾರೆ. 12 ದೇಸಿ ತಳಿ ಆಕಳು, 4 ಎಮ್ಮೆ, 300 ನಾಟಿ ಕೋಳಿ ಸಾಕಿದ್ದಾರೆ. ಸಗಣಿ, ಕೊಟ್ಟಿಗೆ ಗೊಬ್ಬರ ಉಪಯೋಗಿಸಿ ಜತೆಗೆ ಎರೆಹುಳು ಗೊಬ್ಬರ, ಹಸಿರೆಲೆ ಗೊಬ್ಬರ ತಯಾರಿಸಿ ಬಳಸುತ್ತಿದ್ದಾರೆ.
"

ಕೃಷಿಯಲ್ಲಿ ಹೆಚ್ಚಿನ ಆಸಕ್ತಿ ಇದ್ದ ಕಾರಣ ಪದವಿ ನಂತರ ನೌಕರಿಗೆ ಹೋಗಲಿಲ್ಲ. ರಾಸಾಯನಿಕ ಗೊಬ್ಬರದಿಂದ ಉಂಟಾಗುವ ದುಷ್ಪ್ಪರಿಣಾಮದ ಕುರಿತು ತಿಳಿದ ನಂತರ ಅದನ್ನು ತ್ಯಜಿಸಿ ಸಾವಯವ ಗೊಬ್ಬರ ಬಳಕೆ ಮಾಡುತ್ತಿದ್ದೇನೆ.

— ಬಿ.ಎಂ.ಶಿವಲಿಂಗಪ್ಪ, ಪ್ರಗತಿಪರ ರೈತ ಮರವಂಜಿ
"

ಶಿವಲಿಂಗಪ್ಪ ಅವರ ಜಮೀನಿಗೆ ಭೇಟಿ ನೀಡಿ ಸೌಲಭ್ಯ ಮತ್ತು ಭೂಮಿ ಫಲವತ್ತತೆ ಬಗ್ಗೆ ವಾಹಿತಿ ನೀಡಲಾಯಿತು. ಅವರಲ್ಲಿ ಕೃಷಿಯ ಮೇಲಿದ್ದ ಆಸಕ್ತಿಯಿಂದ ಅಲ್ಪ ಜಮೀನಿನಲ್ಲಿ ವಿವಿಧ ಬೆಳೆ ಬೆಳೆದು ಯಶಸ್ವಿಯಾಗಿದ್ದಾರೆ.

— ಅರುಣ್ ಸಹಾಯಕ ಕೃಷಿ ನಿರ್ದೇಶಕ ಚನ್ನಗಿರಿ