ಹರಿಹರ ತಾಲೂಕಿನ ಬೆಳ್ಳೂಡಿ ಕನಕ ಶಾಖಾ ಮಠದಲ್ಲಿ ತಾಲೂಕು ಕನಕ ನೌಕರರ ಸಂಘ ಆಯೋಜಿಸಿದ್ದ ತಲ್ಲಣಿಸದಿರು ಮನವೇ ಕಾರ್ಯಕ್ರಮ, ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ನೌಕರರ ಸನ್ಮಾನ ಸಮಾರಂಭದವನ್ನು ಕಾಗಿನೆಲೆ ಪೀಠಾಧ್ಯಕ್ಷ ನಿರಂಜನಾನಂದಪುರಿ ಸ್ವಾಮೀಜಿ ಉದ್ಘಾಟಿಸಿದರು. ಶೇಖರ್ ಎಚ್. ಟೆಕ್ಕಣ್ಣನವರ್, ಕೆ. ವಿರೂಪಾಕ್ಷ ಇತರರಿದ್ದರು. Education
- ಡಾ. ಆನಂದ ಋಗ್ವೇದಿ ಹೇಳಿಕೆ
- ಹರಿಹರದಲ್ಲಿ ತಲ್ಲಣಿಸದಿರು ಮನವೇ ಕಾರ್ಯಕ್ರಮ
ಹರಿಹರ: ಮಕ್ಕಳಿಗೆ ಉದ್ಯೋಗದ ಅನಿವಾರ್ಯತೆಗೆ ಮಾತ್ರವಲ್ಲದೇ, ಸಮಾಜಮುಖಿ, ಮೌಲ್ಯಾಧಾರಿತ ಹಾಗೂ ಪರಂಪರೆಯ ಬಗ್ಗೆ ಹೆಮ್ಮೆ ಮೂಡಿಸುವ ಶಿಕ್ಷಣ ಅಗತ್ಯ ಎಂದು ಸಾಹಿತಿ ಹಾಗೂ ಆರೋಗ್ಯ ಇಲಾಖೆ ಸಹಾಯಕ ಆಡಳಿತಾಧಿಕಾರಿ ಡಾ. ಆನಂದ ಋಗ್ವೇದಿ ಹೇಳಿದರು. Education
ತಾಲೂಕಿನ ಬೆಳ್ಳೂಡಿ ಕನಕ ಶಾಖಾ ಮಠದಲ್ಲಿ ತಾಲೂಕು ಕನಕ ನೌಕರರ ಸಂಘ ಆಯೋಜಿಸಿದ್ದ ತಲ್ಲಣಿಸದಿರು ಮನವೇ ಕಾರ್ಯಕ್ರಮ, ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ನೌಕರರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು. ಶಿಕ್ಷಣ ಇಂದು ವ್ಯಾಪಾರೀಕರಣಗೊಂಡಿದ್ದು, ವೈದ್ಯಕೀಯ, ಇಂಜಿನಿಯರಿಂಗ್ ಹಾಗೂ ಸರ್ಕಾರಿ ಉದ್ಯೋಗದ ಸುತ್ತ ಮಾತ್ರ ಸೀಮಿತವಾಗಿದೆ. ಆದರೆ ಶಿಕ್ಷಣ ಸಮಾಜಕ್ಕೆ ಉಪಯೋಗವಾಗುವ, ಮೌಲ್ಯಗಳನ್ನು ಬೆಳೆಸುವ ಹಾಗೂ ಕನಕದಾಸರಂತಹ ಮಹನೀಯರ ವಿಚಾರಗಳನ್ನು ಮಕ್ಕಳಿಗೆ ಪರಿಚಯಿಸುವಂತಿರಬೇಕು ಎಂದು ಹೇಳಿದರು.
ಪೊಲೀಸ್ ವರಿಷ್ಠಾಧಿಕಾರಿ ಶೇಖರ್ ಎಚ್. ಟೆಕ್ಕಣ್ಣನವರ್ ಮಾತನಾಡಿ, ಯಶಸ್ಸಿನ ಹಾದಿಯಲ್ಲಿ ತಿರಸ್ಕಾರ, ನಿಂದನೆ, ಅಸೂಯೆ ಸಹಜವಾಗಿದ್ದು, ಶಿಕ್ಷಣದೊಂದಿಗೆ ಸಂಸ್ಕಾರವೂ ಬೆಳೆದಾಗ ಮಾತ್ರ ಶಿಕ್ಷಣಕ್ಕೆ ಅರ್ಥ ಬರುತ್ತದೆ ಎಂದು ಹೇಳಿದರು.
ಮಾಜಿ ಸಂಸದ ಕೆ. ವಿರೂಪಾಕ್ಷ ಮಾತನಾಡಿ, ಶಿಕ್ಷಣವು ಕೇವಲ ಉದ್ಯೋಗದ ನಿರೀಕ್ಷೆಗಾಗಿ ಆಗಬಾರದು. ಸ್ವಾವಲಂಭಿ ಬದುಕು ರೂಪಿಸಿಕೊಳ್ಳುವತ್ತ ವಿದ್ಯಾರ್ಥಿಗಳನ್ನು ಪ್ರೇರೇಪಿಸಬೇಕು ಎಂದರು.
ಕಾಗಿನೆಲೆ ಪೀಠದ ನಿರಂಜನಾನಂದಪುರಿ ಸ್ವಾಮೀಜಿ ಮಾತನಾಡಿ, ಪ್ರತಿ ನಾಲ್ಕನೇ ಶನಿವಾರ ತಲ್ಲಣಿಸದಿರು ಮನವೇ ಕಾರ್ಯಕ್ರಮ ಬೆಳ್ಳೂಡಿ ಮಠದಲ್ಲಿ ನಡೆಯಲಿದ್ದು, ಇತ್ತೀಚೆಗೆ ಶಿಕ್ಷಕರಿಗೆ ತರಬೇತಿ ಹಾಗೂ ಮಕ್ಕಳಿಗೆ ಅಕ್ಷರಾಭ್ಯಾಸ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು. ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ನಂದಿಗಾವಿ ಶ್ರೀನಿವಾಸ್, ಮಂಜಪ್ಪ ಮಾಗೋದಿ, ಕುಬೇಂದ್ರ ಮೆಕ್ಕಪ್ಪ, ರಾಮಪ್ಪ ಸೋಮಣ್ಣ ಸೇರಿದಂತೆ ಹಲವರು ಮಾತನಾಡಿದರು.
ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಶೇ.75ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಹಾಗೂ ನಿವೃತ್ತ ನೌಕರರನ್ನು ಸನ್ಮಾನಿಸಲಾಯಿತು. ಕಾಂಗ್ರೆಸ್ ಮುಖಂಡರಾದ ಬಿ. ರೇವಣಸಿದ್ದಪ್ಪ, ಎಸ್.ಜಿ. ಪರಮೇಶಪ್ಪ, ಸಿ.ಎನ್. ಹುಲಿಗೇಶ್, ಕೆ. ಜಡಿಯಪ್ಪ, ಕೆ.ಬಿ. ರಾಜಶೇಖರ್, ಎಚ್. ಕನ್ನಪ್ಪ, ಚನ್ನಬಸಮ್ಮ ದೇವೇಂದ್ರಪ್ಪ, ಸಿಪಿಐ ಕೆ.ಎಸ್. ದೇವೇಂದ್ರಪ್ಪ, ಸರ್ಕಾರಿ ನೌಕರ ಸಂಘದ ಅಧ್ಯಕ್ಷ ವಿಜಯಮಾಂತೇಶ್, ಪದಾಧಿಕಾರಿಗಳಾದ ದಂಡಿ ತಿಪ್ಪೇಸ್ವಾಮಿ, ತಿಮ್ಮಪ್ಪ ಸಿ.ಎಚ್, ಇಂಜಿನಿಯರ್ ಲಕ್ಷ್ಮಣ್, ಸಿಡಿಪಿಓ ಪ್ರಿಯದರ್ಶಿನಿ, ಹಾಲಪ್ಪ ಡಿ.ಡಿ, ಗಣೇಶ್ ದಳವಾಯಿ, ದಿಳ್ಳೆಪ್ಪ ಚನ್ನಗಿರಿ, ಮಾಲತೇಶ್ ಬಬ್ಬಜ್ಜಿ, ಟಿಪಿಇಒ ವಿಜಯಕುಮಾರ್, ಕೆ.ಎಚ್. ನಿಜಲಿಂಗಪ್ಪ ಇತರರಿದ್ದರು.