ಹೊನ್ನಾಳಿ ಪಟ್ಟಣದ ಬಾಲರಾಜ್ ಘಾಟ್‌ನಲ್ಲಿ ತಡೆಗೋಡೆ ನಿರ್ಮಾಣಕ್ಕೆ ಶಾಸಕ ಡಿ.ಜಿ. ಶಾಂತನಗೌಡ ಗುದ್ದಲಿಪೂಜೆ ನೆರವೇರಿಸಿದರು. ಎಚ್.ಬಿ. ಚನ್ನಪ್ಪ, ರಾಜೇಶ್‌ಕುಮಾರ್, ಮೈಲಪ್ಪ, ಎಂ. ಸುರೇಶ್, ಬಾಬು ಹೋಬಳದಾರ್, ಧರ್ಮಪ್ಪ, ರಾಜೇಂದ್ರ, ಲೀಲಾವತಿ ಇತರರಿದ್ದರು.
- ಶಾಸಕ ಡಿ.ಜಿ. ಶಾಂತನಗೌಡ ಹೇಳಿಕೆ
- ತಡೆಗೋಡೆ ನಿರ್ಮಾಣಕ್ಕೆ ಗುದ್ದಲಿಪೂಜೆ
- ಗದಗ-ಹೊನ್ನಾಳಿ ರಸ್ತೆ ಅಗಲೀಕರಣ ಕಾಮಗಾರಿ
ಹೊನ್ನಾಳಿ: ಅತಿವೃಷ್ಟಿ ಉಂಟಾದಾಗ ನದಿಪಾತ್ರದ ಜನತೆಗೆ ಸಮಸ್ಯೆಯಾಗದಂತೆ ತಡೆಗೋಡೆ ನಿರ್ಮಾಣ ಮಾಡಲು ಸರ್ಕಾರ ಎಸ್‌ಡಿಆರ್‌ಎಫ್ ನಿಧಿಯಲ್ಲಿ 6.50 ಕೋಟಿ ರೂ. ಬಿಡುಗಡೆ ಮಾಡಿದೆ ಎಂದು ಶಾಸಕ ಡಿ.ಜಿ. ಶಾಂತನಗೌಡ ತಿಳಿಸಿದರು.
ಪಟ್ಟಣದ ಬಾಲರಾಜ್ ಘಾಟ್‌ನಲ್ಲಿ ಸೋಮವಾರ ತಡೆಗೋಡೆ ನಿರ್ಮಾಣಕ್ಕೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು.
ಪ್ರತಿವರ್ಷ ಮಳೆಗಾಲದಲ್ಲಿ ತುಂಗಭದ್ರಾ ನದಿ ನೀರಿನ ಮಟ್ಟ ಹೆಚ್ಚಾಗಿ ನದಿಪಾತ್ರದ ಜನರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗುತ್ತಿತ್ತು. ಇದಕ್ಕಾಗಿ ತಡೆಗೋಡೆ ನಿರ್ಮಾಣಕ್ಕೆ ಅನುದಾನ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಈಗ ಅನುದಾನ ಬಿಡಗಡೆಯಾಗಿ ಕಾಮಗಾರಿ ಪ್ರಾರಂಭವಾಗಿದೆ. ಶೀಘ್ರವೇ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಹೇಳಿದರು.
240 ಮೀ ಉದ್ದ ಹಾಗೂ 10 ಮೀ ಎತ್ತರಕ್ಕೆ ತಡೆಗೋಡೆ ನಿರ್ಮಾಣಗೊಳ್ಳಲಿದೆ. ಆಗ ನದಿ ನೀರಿನಮಟ್ಟ ಎಷ್ಟೇ ಎತ್ತರಕ್ಕೆ ಬಂದರೂ ನದಿಪಾತ್ರದ ಜನತೆಗೆ ತೊಂದರೆಯಾಗುವುದಿಲ್ಲ ಹಾಗೂ ಕಾಳಜಿಕೇಂದ್ರ ಪ್ರಾರಂಭಿಸುವ ಪ್ರಮೇಯವೆ ಬರುವುದಿಲ್ಲ ಎಂದರು. ಗದಗ-ಹೊನ್ನಾಳಿ ರಸ್ತೆ ಅಗಲೀಕರಣ ಕಾಮಗಾರಿ ನಡೆಯುತ್ತಿದೆ. ಸರ್ಕಾರ ನಿಗದಿ ಮಾಡಿರುವ ರೀತಿಯಲ್ಲೇ ಅಗಲೀಕರಣ ಆಗಲಿದೆ. ಒಂದು ವೇಳೆ ವಿಸ್ತರಣೆಯಲ್ಲಿ ಏನಾದರೂ ಲೋಪ ಕಂಡು ಬಂದರೆ ನಾನೇ ಖುದ್ದಾಗಿ ಪರಿಶೀಲಿಸುತ್ತೇನೆ ಎಂದು ತಿಳಿಸಿದರು.
ಹೊನ್ನಾಳಿ ಉಪವಿಭಾಗಾಧಿಕಾರಿ ಎಚ್.ಬಿ. ಚನ್ನಪ್ಪ, ತಹಸೀಲ್ದಾರ್ ರಾಜೇಶ್‌ಕುಮಾರ್, ಪುರಸಭೆ ಅಧ್ಯಕ್ಷ ಮೈಲಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಎಂ. ಸುರೇಶ್, ಪುರಸಭೆ ಸದಸ್ಯರಾದ ಬಾಬು ಹೋಬಳದಾರ್, ಧರ್ಮಪ್ಪ, ರಾಜೇಂದ್ರ, ಪುರಸಭೆ ಮುಖ್ಯಾಧಿಕಾರಿ ಲೀಲಾವತಿ,ನಾಮಿನಿ ಸದಸ್ಯರಾದ ರವಿ, ರೇವಣಸಿದ್ದಪ್ಪ, ಅಣ್ಣಪ್ಪ, ಮಾದಪ್ಪ, ಮುಖಂಡರಾದ ವಿಜೇಂದ್ರಪ್ಪ, ಗುಂಡ ಚಂದ್ರು, ಗಿರೀಶ್, ಕಾಂಗ್ರೆಸ್ ಮುಖಂಡರಾದ ಬಿ. ಸಿದ್ದಪ್ಪ, ಎಚ್.ಎ. ಉಮಾಪತಿ,
ಸಣ್ಣಕ್ಕಿ ಬಸವನಗೌಡ, ಆರ್. ನಾಗಪ್ಪ, ಪ್ರಶಾಂತ್ ಇತರರು ಇದ್ದರು.