ಹೊನ್ನಾಳಿ: ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕಿನ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ 1 ಕೋಟಿ ರೂ. ಹಣ ಬಿಡುಗಡೆಯಾಗಿದ್ದು, ಅನುದಾನಕ್ಕೆ ಸಮಸ್ಯೆ ಇಲ್ಲ. ನೀರಿನ ಸಮಸ್ಯೆ ಇರುವ ದೊಡ್ಡ ಗ್ರಾಪಂಗಳಿಗೆ
ಪಿಡಿಒಗಳನ್ನು , ಸಣ್ಣ ಗ್ರಾಪಂಗಳಿಗೆ ಕಾರ್ಯದರ್ಶಿಗಳನ್ನು ನಿಯೋಜಿಸಿ ಸಮಸ್ಯೆಗೆ ಪರಿಹಾರ ರೂಪಿಸಲು ಸೂಚಿಸಿ ಎಂದು ಶಾಸಕ ಡಿ.ಜಿ. ಶಾಂತನಗೌಡ ನಿರ್ದೇಶನ ನೀಡಿದರು.
ಮುಂಗಾರು ಕೈಕೊಟ್ಟಿದ್ದು ಕೆರೆಗಳಲ್ಲಿ ನೀರಿಲ್ಲ, ಅಂತರ್ಜಲ ಕುಸಿಯುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗುವ ಲಕ್ಷಣಗಳಿದ್ದು ಪಿಡಿಒಗಳು ನೀರಿನ ಸಮಸ್ಯೆ ಉದ್ಭವಿಸದಂತೆ ಜಾಗ್ರತೆ ವಹಿಸಬೇಕು, ಆದಾಗ್ಯೂ ನೀರಿನ ಸಮಸ್ಯೆ ಎದುರಾದರೆ ನೀವೇ ಹೊಣೆಗಾರರಾಗಬೇಕಾಗುತ್ತದೆ ಎಂದು ಶಾಸಕ ಡಿ.ಜಿ. ಶಾಂತನಗೌಡ ಎಚ್ಚರಿಸಿದರು. ಕುಡಿಯುವ ನೀರು ಸಂಬಂಧ ಕರೆದಿದ್ದ ಟಾಸ್ಕ್ ೆರ್ಸ್ ಸಭೆಯಲ್ಲಿ ಮಾತನಾಡಿದ ಅವರು, ಎಲ್ಲೆಲ್ಲಿ ನೀರಿನ ಸಮಸ್ಯೆ ಉಂಟಾಗಬಹುದೆಂದು ಪಟ್ಟಿ ಮಾಡಿ, ಖಾಸಗಿ ಬೋರ್ವೆಲ್ನಿಂದ ನೀರು ಪಡೆಯಬೇಕೋ?ಅಥವಾ ಹೊಸ ಬೋರ್ ಕೊರೆಸುವರೋ ಎಂಬ ಬಗ್ಗೆ ಗ್ರಾಮೀಣಾಭಿವೃದ್ಧಿ ಇಲಾಖೆ ಎಇಇಗೆ ತಿಳಿಸಿ ಎಂದು ಹೇಳಿದರು.
ಬೇಸಿಗೆ ಇನ್ನೂ ಶುರುವಾಗಿಲ್ಲ, ಈಗಲೇ, ಗ್ರಾಮೀಣ ಪ್ರದೇಶದಲ್ಲಿ ಸರಿಯಾಗಿ ಕುಡಿಯುವ ನೀರು ಸಿಗುತ್ತಿಲ್ಲ ಎಂದು ಕರೆಗಳು ಬರುತ್ತಿವೆ. ನೀರಿಗಾಗಿ ಕರೆಗಳು ಬಾರದಂತೆ ಗ್ರಾಮೀಣ ಭಾಗಗಳಿಗೆ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಿದರು.
ಕೆಂಗಲಹಳ್ಳಿ, ಕುಂಬಳೂರು, ಕೂಲಂಬಿ ಗ್ರಾಮಗಳಿಗೆ ಟ್ಯಾಂಕ್ಗೆ ನೀರು ಹತ್ತುವುದಿಲ್ಲ ಎಂಬ ದೂರುಳಿವೆ. ಅಲ್ಲಿ ಸಂಪು ನಿರ್ಮಾಣಕ್ಕೆ ಪತ್ರ ಕೊಡಿ, ಪ್ರತಿ ಸಂಪು ನಿರ್ಮಾಣಕ್ಕೆ ವೈಯಕ್ತಿಕವಾಗಿ 10 ಲಕ್ಷ ರೂ ನೀಡುತ್ತೇನೆ ಎಂದು ಶಾಸಕರು ಹೇಳಿದರು. ಹೊನ್ನಾಳಿ ತಹಸೀಲ್ದಾರ್ ಕವಿರಾಜ್, ನ್ಯಾಮತಿ ತಹಸೀಲ್ದಾರ್ ವಿಶ್ವನಾಥ್ ಮುರುಡಿ, ತಾಪಂ ಇಒ ಧರಣೇಶ್, ಗ್ರೇಡ್-2 ತಹಸೀಲ್ದಾರ್ ಗೋವಿಂದಪ್ಪ, ಎಡಿಎ ರಾಘವೇಂದ್ರ, ಗ್ರಾಮೀಣಾಭಿವೃದ್ದಿ ಇಲಾಖೆ ಎಇಇ ಸೋಮ್ಲಾನಾಯ್ಕಾ, ಕೃಷಿ ಇಲಾಖೆ ವಿಶ್ವನಾಥ್, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಅರುಣ್ ಇತರರು ಇದ್ದರು.
ಕೂಲಂಬಿ, ಕತ್ತಿಗೆ, ಬೇವಿನಹಳ್ಳಿ, ಬನ್ನಿಕೋಡು, ಕುಳಗಟ್ಟೆ, ಕ್ಯಾಸಿನಕೆರೆ, ಕರಡಿಕ್ಯಾಂಪ್, ಹೊಸಕಟ್ಟೆ ಗ್ರಾಮಗಳಲ್ಲಿ ಹಾಗೂ ನ್ಯಾಮತಿ ತಾಲೂಕಿನ ಚಿ.ಕಡ ದಕಟ್ಟೆ, ಗುಡ್ಡೆಹಳ್ಳಿ, ಹಳೇಜೋಗ, ಹೊಸಜೋಗ ತಾಂಡ, ಯರಮಾಳ, ಕೊಡತಾಳು, ಸವಳಂಗದ ಇಂದಿರಾನಗರ, ಕೆಂಚಿಕೊಪ್ಪ, ರಾಮೇಶ್ವರ, ಸುರಹೊನ್ನೆ, ಮಾದನಬಾವಿ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇದೆ ಎಂದು ಗ್ರಾಮೀಣಾಭಿವೃದ್ದಿ ಇಲಾಖೆಯ ಎಇಇ ಸೋಮ್ಲಾನಾಯ್ಕಾ ಹೇಳಿದರು.
ರೈತರ ಜಮೀನಿಗೆ ಹೊಂದಿಕೊಡಿರುವ ಇಕ್ಕೆಲಗಳಲ್ಲಿ ತೇಗಸಿರಿ ಯೋಜನಡಿಯಲ್ಲಿ ವೃಕ್ಷಾಭಿವೃದ್ಧಿಗೆ 25 ಸಾವಿರ ತೇಗದ ಸಸಿ ಮತ್ತು ಇನ್ನೀತರ 25 ಸಾವಿರ ಸಸಿಗಳನ್ನು ಅರಣ್ಯ ಇಲಾಖೆ ವಿಬಿಜಿ ರಾಮ್ಜಿ ಯೋಜನೆಯ ಸಮನ್ವಯದಲ್ಲಿ ಸಸಿ ನೆಡಲಾಗುವುದು ಎಂದು ಅರಣ್ಯ ಇಲಾಖೆ ಎಸಿಎ್ ಸಾನಿಯ ತಿಳಿಸಿದರು. ರೈತರು ಈ ಸಸಿಯನ್ನು 15 ವರ್ಷ ರಕ್ಷಣೆ ಮಾಡಿದರೆ ಶೇ. 75ರಷ್ಟು ಲಾಭಾಂಶ ರೈತರಿಗೆ ನೀಡಲಾಗುವುದು ಎಂದರು.
ನ್ಯಾಮತಿ ನಗರಕ್ಕೆ ಕುಡಿಯುವ ನೀರು ಕಾಮಗಾರಿ ಶೇ. 95ರಷ್ಟು ಮುಗಿದಿದೆ. ಈ ನಡುವೆ ಗೋವಿನಕೋವಿಯಿಂದ ನ್ಯಾಮತಿ ಪಟ್ಟಣಕ್ಕೆ ಬರುವ ಪೈಪ್ಲೈನ್ ಕಾಮಗಾರಿ ಮಾಡುವಾಗ ರಸ್ತೆ ಅಗೆದು ಧೂಳು ಹೆಚ್ಚಾಗಿದೆ ಎಂದು ಸಾರ್ವಜನಿಕರು ದೂರು ನೀಡಿದ್ದಾರೆ. ಆದರೂ ಗುತ್ತಿಗೆದಾರರು ರಸ್ತೆ ದುರಸ್ತಿ ಮಾಡಿಲ್ಲ ಇದರಿಂದ ಸಾರ್ವಜನಿಕರೊಬ್ಬರು ನೀರು ಪೂರೈಸುವ ಜಾಕ್ವೆಲ್ ಕೊಠಡಿಗೆ ಬೀಗ ಹಾಕಿದ್ದಾರೆ ಎಂಬ ಬಗ್ಗೆ ಮಾಹಿತಿ ಪಡೆದ ಶಾಸಕರು ತಹಸೀಲ್ದಾರ್ ಹಾಗೂ ನ್ಯಾಮತಿ ಪಪಂ ಮುಖ್ಯಾಧಿಕಾರಿ ಹೋಗಿ ಜಾಕ್ವೆಲ್ ಬೀಗ ತೆಗೆಸಿ ಎಂದು ಸೂಚಿಸಿದರು.