ಮಧ್ಯಪ್ರದೇಶದ ಮೂಸಾಖಾನ್, ಹರಿಯಾಣದ ವಿಕ್ಕಿ ಪೈಲ್ವಾನ್ ನಡುವಿನ ಸೆಣಸಾಟ. 
ದಾವಣಗೆರೆ

ಮಹಾರಾಷ್ಟ್ರದ ರವಿರಾಜ್, ಹರಿಯಾಣ ವಿಕ್ಕಿಗೆ ಪಾರಿತೋಷಕ

ಪ್ರಮುಖ ಮುಖ್ಯಾಂಶಗಳು

  • ಮೈನವಿರೇಳಿಸಿದ ಕುಸ್ತಿ ಪಂದ್ಯಾವಳಿ
  • ಕಣ್ತುಂಬಿಕೊಂಡ ದಾವಣಗೆರೆ ಜನ
  • ರಸದೌತಣ ನೀಡಿದ 35 ಜೋಡಿಗಳು
ದಾವಣಗೆರೆ: ಅಂತಾರಾಷ್ಟ್ರೀಯ ಜಟ್ಟಿಗಳಾದ ಮಹಾರಾಷ್ಟ್ರದ ರವಿರಾಜ್ ಆಲಿಯಾಸ್ ಶಿವ ಪೈಲ್ವಾನ್ ಹಾಗೂ ಹರಿಯಾಣದ ವಿಕ್ಕಿ ಪೈಲ್ವಾನ್ ಭಾನುವಾರ ಕುಸ್ತಿಪಟುಗಳ ಗರಡಿಮನೆ ದಾವಣಗೆರೆಯಲ್ಲಿ ಆಯೋಜಿಸಿದ್ದ ಕುಸ್ತಿ ಪಂದ್ಯಾವಳಿಯಲ್ಲಿ ವಿಜೇತರಾಗಿ ಪಾರಿತೋಷಕ ಪಡೆದರು.
ಇಲ್ಲಿನ ಶ್ರೀ ಬೀರಲಿಂಗೇಶ್ವರ ದೇವಸ್ಥಾನದ ಕುಸ್ತಿ ಅಖಾಡದಲ್ಲಿ ನಡೆದ ಪಂದ್ಯಾವಳಿಯಲ್ಲಿ ರಾತ್ರಿ ನಡೆದ ಎರಡು ಮಹತ್ವದ ಪಂದ್ಯಗಳು ಕುಸ್ತಿಪ್ರಿಯರಿಗೆ ರಸದೌತಣ ನೀಡಿದವು. ಆಟ ಕಣ್ತುಂಬಿಕೊಳ್ಳಲು ಪ್ರೇಕ್ಷಕರು ಗ್ಯಾಲರಿ ಜಾಗ ಬಿಟ್ಟು ಅಖಾಡದತ್ತಲೇ ಮುಗಿಬಿದ್ದಿದ್ದರು.