ಜಗಳೂರು ತಾಲೂಕು ಕಚೇರಿಯಲ್ಲಿ ಗುರುವಾರ ಎಸ್‌ಐಆರ್‌ನಲ್ಲಿ ಶೇ.100ರಷ್ಟು ಪ್ರಗತಿ ಸಾಧಿಸಿದ ತಾಲೂಕಿನ ಹೊಸಹಟ್ಟಿ ಗ್ರಾಮದ ಅಂಗನವಾಡಿ ಶಿಕ್ಷಕಿ ಹಾಗೂ ಬಿಎಲ್‌ಒ ನಾಗರತ್ನಮ್ಮಗೆ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಸನ್ಮಾನಿಸಿದರು. ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್, ಚುನಾವಣಾಧಿಕಾರಿ ಭಾಗ್ಯಶ್ರೀ, ತಹಸೀಲ್ದಾರ್ ಗುರುಬಸವರಾಜ್, ಆರ್‌ಐ ಕೀರ್ತಿಕುಮಾರ್ ಇದ್ದರು. SIR 
ದಾವಣಗೆರೆ

ಎರಡು ಕಡೆ ಹೆಸರಿದ್ದರೆ ಶಿಕ್ಷಾರ್ಹ SIR

ಚಂದನ ವಿ ಎಂ

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಎಚ್ಚರಿಕೆ
  • ಜಗಳೂರಿನಲ್ಲಿ ಬಿಎಲ್‌ಒ ಸಭೆ
ಜಗಳೂರು: ಒಬ್ಬ ವ್ಯಕ್ತಿ ಎರಡು ಸ್ಥಳಗಳಲ್ಲಿ ಮತದಾನದ ಹಕ್ಕನ್ನು ಹೊಂದುವುದು ಅಪರಾಧವಾಗಿದ್ದು ಈ ರೀತಿಯಾದ ವಿಷಯ ಕಂಡುಬಂದಲ್ಲಿ ಅಂತಹವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಜಿ. ಗಂಗಾಧರ ಸ್ವಾಮಿ ಎಚ್ಚರಿಸಿದರು. SIR
ಪಟ್ಟಣದ ತಾಲೂಕು ಕಚೇರಿಯಲ್ಲಿ ಗುರುವಾರ ಬಿಎಲ್‌ಒಗಳಿಗೆ ಹಮ್ಮಿಕೊಂಡಿದ್ದ ತುರ್ತು ಸಭೆಯಲ್ಲಿ ಮಾತನಾಡಿದರು.
ಎನ್ಯುಮರೇಷನ್ ಫಾರ್ಮ್‌ನಲ್ಲಿ ಮಾಹಿತಿಯನ್ನು ಭರ್ತಿ ಮಾಡುವ ವಿಧಾನದ ಕುರಿತು ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. 18 ವರ್ಷ ಪೂರ್ಣಗೊಂಡವರನ್ನು ಮತ್ತು ಬಿಟ್ಟು ಹೋದ ಹೆಸರು ಸೇರಿಸಲು ಅವಕಾಶವಿದೆ. ಮತದಾರರು ಮೃತಪಟ್ಟಿದಲ್ಲಿ ಕುಟುಂಬದಿಂದ ಖಚಿತಪಡಿಸಿಕೊಂಡು ಹೆಸರನ್ನು ಕೈಬಿಡಬೇಕು. ಜಗಳೂರು ತಾಲೂಕಿನಲ್ಲಿ 18 ಫಾರ್ಮ್ ಮಾತ್ರ ಬಾಕಿ ಉಳಿದಿದ್ದು ಉಳಿದೆಲ್ಲವನ್ನು ವಿತರಣೆ ಮಾಡಲಾಗಿದೆ. ಶೇ.100 ಗುರಿ ಮುಟ್ಟಿರುವುದು ಶ್ಲಾಘನೀಯ ಎಂದರು.
ಪ್ರತಿವಾರಕ್ಕೊಮ್ಮೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡುವಂತೆ ತಹಸೀಲ್ದಾರ್‌ಗಳಿಗೆ ಸೂಚಿಸಲಾಗಿದೆ. ಪರಿಷ್ಕರಣೆಯಲ್ಲಿ ಸಮಸ್ಯೆಗಳು ಕಂಡುಬಂದರೆ ಕೂಡಲೆ ತಹಸೀಲ್ದಾರ್ ಗಮನಕ್ಕೆ ತನ್ನಿ. ಜಿಲ್ಲೆಯಲ್ಲಿ 42 ಕಡೆ ಬಿಎಲ್‌ಒ ಸಹಾಯ ಕೇಂದ್ರ ತೆರೆಯಲಾಗಿದೆ. ಪ್ರತಿ ಗ್ರಾಪಂನಲ್ಲಿ ಸಹಾಯ ಕೇಂದ್ರಗಳನ್ನು ತೆರೆಯಲಾಗಿದೆ ಎಂದರು.
ಅಧಿಕಾರಿಗಳು ವೇಗವಾಗಿ ಕೆಲಸ ಮಾಡುತ್ತಿದ್ದು ವಾರಕ್ಕೂ ಮುಂಚಿತವಾಗಿ ಎಸ್‌ಐಆರ್ ಪ್ರಕ್ರಿಯೆ ಪೂರ್ಣಗೊಳಿಸುವ ಉದ್ದೇಶ ಹೊಂದಲಾಗಿದೆ. ಪ್ರತಿಯೊಂದು ಸಮಸ್ಯೆ, ತೊಂದರೆ, ಸಂದೇಹ ಪರಿಹರಿಸಲು ಚುನಾವಣಾ ಆಯೋಗ ಅವಕಾಶ ಕಲ್ಪಿಸಿದೆ ಎಂದರು.
ಎನ್ಯುಮರೇಷನ್ ಫಾರ್ಮ್ ತಪ್ಪಾದರೆ, ಹರಿದರೆ, ಆಕಸ್ಮಿಕವಾಗಿ ಕಳೆದು ಹೋದರೆ, ಾರ್ಮ್ ತಲುಪಿಲ್ಲವೆಂದರೆ ಾರ್ಮ್‌ಗಳನ್ನು ಒದಗಿಸುವ ಅಧಿಕಾರ ಜಿಲ್ಲಾಧಿಕಾರಿಗಳಿಗೆ ಇದೆ. ತಾಲೂಕಿನಲ್ಲಿ 260 ಬಿಎಲ್‌ಒಗಳು, 2 ಡಿಎಲ್‌ಒಗಳು, ಆರ್‌ಐ, ವಿಎ, ಬಿಲ್ ಕಲೆಕ್ಟರ್, ಪಿಡಿಒ, ಪಪಂ ಸಿಬ್ಬಂದಿ ಈ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುವಂತೆ ಸೂಚಿಸಲಾಗಿದೆ. ಅತ್ಯಂತ ಪಾರದರ್ಶಕವಾಗಿ ಎಸ್‌ಐಆರ್ ಪ್ರಕ್ರಿಯೆ ನಡೆಸಲಾಗುತ್ತಿದೆ. ಪ್ರಜಾಪ್ರಭುತ್ವಕ್ಕೆ ಲೋಪವಾಗದಂತೆ ಚುನಾವಣಾ ಆಯೋಗ ಈ ಪ್ರಕ್ರಿಯೆ ನಡೆಸುತ್ತಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಎಸ್‌ಐಆರ್‌ನಲ್ಲಿ ಶೇ. 100ರಷ್ಟು ಕೆಲಸ ಪೂರ್ಣಗೊಳಿಸಿದ ಜಗಳೂರು ತಾಲೂಕಿನ ಹೊಸಹಟ್ಟಿ ಗ್ರಾಮದ ಅಂಗನವಾಡಿ ಶಿಕ್ಷಕಿ ಹಾಗೂ ಬಿಎಲ್‌ಒ ನಾಗರತ್ನಮ್ಮಗೆ ಸನ್ಮಾನಿಸಲಾಯಿತು.
ದಾಖಲೆ ಕೊಡುವ ಅವಶ್ಯಕತೆ ಇಲ್ಲ: 2002ನೇ ಸಾಲಿನಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದಿದ್ದರೆ, ಯಾವುದೇ ದಾಖಲೆಗಳಿಲ್ಲದಿದ್ದರೆ, ರಾಜ್ಯದವರು, ಕನ್ನಡಿಗರೇ ಆಗಿದ್ದರೆ ತಹಸೀಲ್ದಾರ್, ಆರ್‌ಐ, ವಿಎ ಮಹಜರ್ ಮಾಡಿ ಪ್ರಮಾಣ ಪತ್ರ ನೀಡುತ್ತಾರೆ. ಆ ದಾಖಲೆಯನ್ನು ಎನ್ಯುಮರೇಷನ್ ಫಾರ್ಮ್ ಜತೆ ನೀಡಬಹುದು. ಇದುವರೆಗೂ ಹತ್ತಾರು ದಾಖಲೆ ಕೊಡಬೇಕು, ಇಲ್ಲದಿದ್ದರೆ ಹೆಸರು ತಿರಸ್ಕೃತಗೊಳ್ಳುತ್ತದೆ ಎಂಬ ವದಂತಿ ಇತ್ತು. ಆದರೆ, ಯಾವುದೂ ಇಲ್ಲ. ಕೇವಲ ಎನ್ಯುಮರೇಷನ್ ಾರ್ಮ್ ತುಂಬಿಕೊಡಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಜನರು ಗೊಂದಲಕ್ಕೆ ಒಳಗಾಗುವುದು ಬೇಡ. ಅನುಮಾನ, ಸಮಸ್ಯೆಗಳಿದ್ದರೆ ತಕ್ಷಣವೇ ಸಹಾಯವಾಣಿಗೆ ತಿಳಿಸಬಹುದು ಎಂದು ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್, ಚುನಾವಣಾಧಿಕಾರಿ ಭಾಗ್ಯಶ್ರೀ, ತಹಸೀಲ್ದಾರ್ ಗುರುಬಸವರಾಜ್, ಆರ್‌ಐ ಕೀರ್ತಿಕುಮಾರ್, ಪ್ರದೀಪ್‌ನಾಯಕ, ವಿಜಯಕುಮಾರ್, ಚುನಾವಣೆ ಶಾಖೆಯ ಚಂದ್ರಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್‌ಅಹಮದ್ ಸೇರಿದಂತೆ ಇತರರಿದ್ದರು.