ಹರಿಹರ ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಎಂ.ಎಸ್. ಆನಂದ್ ಕುಮಾರ್, ಎಲ್.ಬಿ. ಹನುಮಂತಪ್ಪ, ಎಚ್.ಶಿವಪ್ಪ ಇದ್ದರು.convention
ಹರಿಹರ: ಮೇ 30ರಂದು ನಗರದ ಜೆ.ಸಿ. ಬಡಾವಣೆಯ ಕಾಟ್ವೆ ಭವನದಲ್ಲಿ ಮಾದರ ಚನ್ನಯ್ಯ ಜಯಂತಿ ಅಂಗವಾಗಿ ಜನ ಜಾಗೃತಿ ಸಮಾವೇಶ ಹಾಗೂ ಮಾದಿಗ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಾದಿಗ ಸಮಾಜದ ತಾಲೂಕಾಧ್ಯಕ್ಷ ಎಂ.ಎಸ್. ಆನಂದ್ ಕುಮಾರ್ ಹೇಳಿದರು. convention
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಕಾರ್ಯಕ್ರಮ ಉದ್ಘಾಟಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಪ್ರತಿಭಾ ಪುರಸ್ಕಾರ, ಶಾಸಕ ಬಸವಂತಪ್ಪ ಮಾದರ ಚನ್ನಯ್ಯ ಭಾವಚಿತ್ರಕ್ಕೆ ಪುಷ್ಪ ನಮನ ಹಾಗೂ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಚ್. ಮರಿಯೋಜಿರಾವ್ ಶಾಲಾ ಮಕ್ಕಳಿಗೆ ಶೈಕ್ಷಣಿಕ ಕಿಟ್ ವಿತರಣೆ ಮಾಡುವರು ಎಂದರು.
ಮುಖ್ಯ ಅತಿಥಿಗಳಾಗಿ ಶಾಸಕ ಬಿ.ಪಿ. ಹರೀಶ್, ಮಾಜಿ ಶಾಸಕರಾದ ಎಸ್. ರಾಮಪ್ಪ, ಎಚ್.ಎಸ್. ಶಿವಶಂಕರ್, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ನಂದಿಗಾವಿ ಶ್ರೀನಿವಾಸ್, ದೂಡಾ ಅಧ್ಯಕ್ಷ ದಿನೇಶ್.ಕೆ.ಶೆಟ್ಟಿ, ಡಾ. ಶಶಿಕುಮಾರ್ ಮೆಹರ‌್ವಾಡೆ, ಮುಖಂಡರಾದ ಚಂದ್ರಶೇಖರ್ ಪೂಜಾರ್, ಬಿ.ಎಂ. ವಾಗೀಶ್ ಸ್ವಾಮಿ, ಜಿ.ಬಿ. ಹಾಲೇಶ್ ಗೌಡ್ರು, ಎ. ಗೋವಿಂದ ರೆಡ್ಡಿ, ಬಿ.ಎಚ್. ವೀರಭದ್ರಪ್ಪ, ಪಿ.ರವಿ ನಾರಾಯಣ್ ಇತರರು ಭಾಗವಹಿಸುವರು ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಗೌರವಾಧ್ಯಕ್ಷ ಎಲ್.ಬಿ. ಹನುಮಂತಪ್ಪ, ಜೀವ ವಿಮಾ ನಿಗಮದ ನಿವೃತ್ತ ಅಧಿಕಾರಿ ಎಂ.ಬಿ. ಧರ್ಮದಾತ, ಉಪಾಧ್ಯಕ್ಷರಾದ ಹನುಮಂತಪ್ಪ ದೊಡ್ಮನೆ ಹಳ್ಳಿಹಾಳ್, ಎಂ.ಎಸ್. ಶ್ರೀನಿವಾಸ್, ಕಾರ್ಯದರ್ಶಿ ಎಚ್. ಶಿವಪ್ಪ, ನಿರ್ದೇಶಕರಾದ ಬಿ.ಡಿ. ಬಸವರಾಜಪ್ಪ ಕೊಕ್ಕನೂರು, ಎಚ್.ಎಂ. ಹನುಮಂತಪ್ಪ ಬನ್ನಿಕೋಡ್, ಚೌಡಪ್ಪ ಹೊಳೆಸಿರಿಗೆರೆ ಇತರರಿದ್ದರು.