ಹೊನ್ನಾಳಿ ಪಟ್ಟಣದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಮಳಿಗೆ ಉದ್ಘಾಟಿಸಿ ಶಾಸಕ ಡಿ.ಜಿ. ಶಾಂತನಗೌಡ ಮಾತನಾಡಿದರು. ಕೆ. ಅರುಣ, ಜಿ.ಎಸ್. ತಿಮ್ಮಪ್ಪ, ಕೆ. ಪ್ರಕಾಶ್‌ನಾಯ್ಕ, ಉಮಾಪತಿ, ಜಿ. ನಾಗೇಶ್, ಬಿ.ಎನ್. ಸವಿತಾ, ಎಂ.ವಿ. ಮಂಗಳಮ್ಮ, ಎಂ. ಪ್ರಶಾಂತ್, ಆರ್. ಶಿವಪ್ಪ, ಕೆ.ಆರ್. ಶೋಭಾ ಇತರರಿದ್ದರು. KPS 
ದಾವಣಗೆರೆ

ಕೆಪಿಎಸ್ ಶಾಲೆಗಳಿಗೆ ಅಗತ್ಯ ಸೌಕರ್ಯ ನೀಡಿಕೆ KPS

ಚಂದನ ವಿ ಎಂ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಡಿ.ಜಿ. ಶಾಂತನಗೌಡ ಹೇಳಿಕೆ
  • ನೂತನ ಪದಾಧಿಕಾರಿಗಳ ಪದಗ್ರಹಣ
ಹೊನ್ನಾಳಿ: ಖಾಸಗಿ ಶಾಲೆಗಳನ್ನು ಮೀರಿಸುವಂತೆ ಸರ್ಕಾರಿ ಶಾಲೆ ಗಳಿಗೆ ಸೌಲಭ್ಯ ಒದಗಿಸಲಾಗುತ್ತಿದ್ದು, ತಾಲೂಕಿನ 4 ಕೆಪಿಎಸ್ ಶಾಲೆಗಳಿಗೆ ಎಲ್ಲ ಸೌಕರ್ಯಗಳನ್ನು ಕಲ್ಪಿಸ ಲಾಗಿದೆ ಎಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು. KPS
ಪಟ್ಟಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕದ ನೂತನ ಅಧ್ಯಕ್ಷ, ಪದಾಧಿಕಾರಿಗಳ ಪದಗ್ರಹಣ ಹಾಗೂ ಗುರುಭವನದಲ್ಲಿ ಮಳಿಗೆಗಳ ಚಾಲನೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಕೆಪಿಎಸ್ ಶಾಲೆಗಳಿಗೆ ವಾಹನ ಸೌಕರ್ಯಕ್ಕಾಗಿ 5 ಲಕ್ಷ ರೂ. ಮಂಜೂರು ಮಾಡಲಾಗುವುದು. ಅಗತ್ಯವಿರುವ ಅತಿಥಿ ಶಿಕ್ಷಕರ ನೇಮಕಾತಿ ಮಾಡಿಕೊಳ್ಳ ಲಾಗುವುದು. ಶಿಕ್ಷಕರ ಬಹು ಬೇಡಿಕೆಯಾದ ಗುರುಭವನ ಮೇಲ್ಛಾವಣಿ ನಿರ್ಮಾಣಕ್ಕೆ ಅಗತ್ಯ ದಾಖಲೆಗಳನ್ನು ಒದಗಿಸಿದಲ್ಲಿ ಸರ್ಕಾರದಿಂದ ಅನುದಾನ ಕೊಡಿಸಲಾಗುವುದು. ಎಲ್ಲ ಇಲಾಖೆಗಳಲ್ಲಿ ಕಾಮ್ಸ್ ಹಾಜರಾತಿ ವ್ಯವಸ್ಥೆ ಜಾರಿಗೆ ತರಲಾಗಿದ್ದು ಶಿಕ್ಷಕರಿಗೆ ರಿಯಾಯಿತಿ ನೀಡುವಂತೆ ಸದನದಲ್ಲಿ ಚರ್ಚಿಸಲಾಗುವುದು ಎಂದರು.
ಸಂಘದ ನೂತನ ಅಧ್ಯಕ್ಷರಾಗಿ ಜಿ.ಎಸ್. ತಿಮ್ಮಪ್ಪ ಅಧಿಕಾರ ಸ್ವೀಕರಿಸಿ ಮಾತನಾಡಿದರು. ಸಹೋದ್ಯೋಗಿ ಬಂಧುಗಳ ನಿರೀಕ್ಷೆಗೆ ಅನುಗುಣವಾಗಿ ಕೆಲಸ ಮಾಡಲಾಗುವುದು ಎಂದರು.
ಗುರುಭವನದ ಮೇಲ್ಛಾವಣಿ ನಿರ್ಮಾಣಕ್ಕಾಗಿ ಶಾಸಕರ, ಎಲ್ಲ ಶಿಕ್ಷಕರ ಸಹಕಾರ ಪಡೆದು 50 ಲಕ್ಷ ರೂ. ಅನುದಾನ ಮಂಜೂರು ಮಾಡಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.
ಸಂಘದ ಜಿಲ್ಲಾಧ್ಯಕ್ಷ ಎಸ್.ಜಿ. ಉಮಾಪತಿ, ಬಿಇಒ ಕೆ.ಟಿ. ನಿಂಗಪ್ಪ, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಎಂ. ತಿಪ್ಪೇಶಪ್ಪ, ತೀರ್ಥಹಳ್ಳಿ ಶಿಕ್ಷಕರ ವಿವಿಧೋದ್ದೇಶ ಸಂಘದ ಅಧ್ಯಕ್ಷ ಮಹಾಬಲೇಶ್ವರ ಹೆಗಡೆ, ತಾಲೂಕು ಅಧ್ಯಕ್ಷ ನಾಗರಾಜ ದೊಂಕತ್ತಿ, ನಿಕಟಪೂರ್ವ ಅಧ್ಯಕ್ಷ ಎಚ್.ಕೆ. ಚಂದ್ರಶೇಖರ ಮಾತನಾಡಿದರು. ಪದಗ್ರಹಣ ಮಾಡಿದ ಸದಸ್ಯರನ್ನು ಸನ್ಮಾನಿಸಲಾಯಿತು. ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ. ಅರುಣ, ನೂತನ ಪದಾಧಿಕಾರಿಗಳಾದ ಜಿ.ಎಸ್. ತಿಮ್ಮಪ್ಪ, ಕೆ. ಪ್ರಕಾಶ್‌ನಾಯ್ಕ, ಉಮಾಪತಿ, ಜಿ. ನಾಗೇಶ್, ಬಿ.ಎನ್. ಸವಿತಾ, ಎಂ.ವಿ. ಮಂಗಳಮ್ಮ, ಎಂ. ಪ್ರಶಾಂತ್, ಆರ್. ಶಿವಪ್ಪ, ಕೆ.ಆರ್. ಶೋಭಾ ಇತರರಿದ್ದರು.