ದಾವಣಗೆರೆ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯದಲ್ಲಿ ದೂಡಾ ತಂಡದ ವಿರುದ್ಧ ಗೆಲುವು ಸಾಧಿಸಿದ ಪ್ರೆಸ್ ಬಿ ತಂಡದ ಆಟಗಾರರು.Press
- ಶಾಮನೂರು ಡೈಮಂಡ್ ಶಿವಗಂಗಾ ಅಫೀಶಿಯಲ್ ಕಪ್
- ಪ್ರೆಸ್ ಬಿ ತಂಡ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ
- ದೂಡಾ ತಂಡದ ವಿರುದ್ಧ 8 ವಿಕೆಟ್‌ಗಳ ಜಯ
ದಾವಣಗೆರೆ: ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಅತ್ಯದ್ಭುತ ಪ್ರದರ್ಶನ ತೋರಿದ ಪ್ರೆಸ್ ಬಿ ತಂಡ, ಶಾಮನೂರು ಡೈಮಂಡ್ ಶಿವಗಂಗಾ ಅಫೀಶಿಯಲ್ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಅಮೋಘ ಗೆಲುವು ಸಾಧಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ.
ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ಆರಂಭವಾದ ಹೊನಲು ಬೆಳಕಿನ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಿಯ ಮೊದಲ ಪಂದ್ಯದಲ್ಲಿ ದೂಡಾ ತಂಡದ ವಿರುದ್ಧ 8 ವಿಕೆಟ್‌ಗಳ ಜಯ ಸಾಧಿಸಿತು.
55 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ ಪ್ರೆಸ್ ಬಿ ತಂಡ ಉತ್ತಮ ಆರಂಭ ಪಡೆಯುವಲ್ಲಿ ಸಫಲವಾಯಿತು. ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ರಾಮಪ್ರಸಾದ್ (10), ಹನುಮಂತ (9) ರನ್‌ಗಳಿಸಿ ಪೆವಿಲಿಯನ್‌ನತ್ತ ಹೆಜ್ಜೆ ಹಾಕಿದರು.
ಬಳಿಕ ಕ್ರೀಸ್‌ಗೆ ಇಳಿದ ಭರವಸೆ ಬ್ಯಾಟ್ಸ್‌ಮನ್ ನೂರ್ (ಅಜೇಯ 25) ಭರ್ಜರಿ ಬ್ಯಾಟಿಂಗ್ ನೆರವಿನಿಂದ ಇನ್ನು ಒಂದು ಓವರ್ ಬಾಕಿ ಇರುವಂತೆ 58 ರನ್‌ಗಳಿಸಿ ಗೆಲುವಿನ ನಗೆ ಬೀರಿತು.
ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ದೂಡಾ ತಂಡಕ್ಕೆ ಆರಂಭಿಕ ಆಟಗಾರರಾದ ಸಾತ್ವಿಕ್ (16), ರಘುನಾಥ್ (19) ಸವಾಲಿನ ಮೊತ್ತಗಳಿಸಲು ನೆರವಾದರು.
ದೂಡಾ ತಂಡ 5 ಓವರ್‌ಗಳಲ್ಲಿ 55/4
(ರಘುನಾಥ್ 19, ಸಾತ್ವಿಕ್ 16)
ಪ್ರೆಸ್ ಬಿ ತಂಡ 4 ಓವರ್‌ಗಳಲ್ಲಿ 58/2
(ನೂರ್ ಅಜೇಯ 25, ರಾಮ್‌ಪ್ರಸಾದ್ 10)