ದಾವಣಗೆರೆಯಲ್ಲಿ ಗುರುವಾರ ಅಂಚೆ ನೌಕರರಿಗೆ ವಿಭಾಗೀಯ ಪ್ರಶಸ್ತಿ ಪ್ರದಾನ ಉದ್ಘಾಟನಾ ಸಮಾರಂಭದಲ್ಲಿ ಡಾ. ವೆಂಕಟೇಶ್ ಕೆ, ಚಂದ್ರಶೇಖರ, ಡಾ. ಸತೀಶ ಕುಮಾರ್ ಪಿ. ವಲ್ಲೇಪುರೆ, ರೇಖಾ ಕೆ., ನರೇಂದ್ರ ನಾಯ್ಕ್ ಕೆ.ಎಂ, ಓಂಕಾರಮೂರ್ತಿ ಎಂ., ಸ್ವಾಮಿ ಜೆ.ಡಿ., ಅಶ್ವಥ್ ವಿ. ಇದ್ದರು.
- ಅಧೀಕ್ಷಕ ಚಂದ್ರಶೇಖರ ಹೇಳಿಕೆ
- ಪ್ರಶಸ್ತಿ ಪ್ರದಾನ ಸಮಾರಂಭ
ದಾವಣಗೆರೆ : ದಾವಣಗೆರೆ ಅಂಚೆ ವಿಭಾಗವು ಕರ್ನಾಟಕ ವೃತ್ತ ಮಟ್ಟದಲ್ಲಿ ಕಳೆದ ಮೂರು ವರ್ಷಗಳಲ್ಲಿ ಹಲವಾರು ಪ್ರಶಸ್ತಿಗಳನ್ನು ಪಡೆದು ಉತ್ತಮ ಸಾಧನೆ ಮಾಡಿದೆ ಎಂದು ವಿಭಾಗದ ಅಂಚೆ ಅಧೀಕ್ಷಕ ಚಂದ್ರಶೇಖರ ಹೇಳಿದರು.
ದಾವಣಗೆರೆ ಅಂಚೆ ವಿಭಾಗದ ವತಿಯಿಂದ ನಗರದ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ಗುರುವಾರ ಆಯೋಜಿಸಿದ್ದ, 2025-26ನೇ ಆರ್ಥಿಕ ವರ್ಷದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ 200ಕ್ಕೂ ಹೆಚ್ಚು ಅಂಚೆ ಹಾಗೂ ಗ್ರಾಮೀಣ ಅಂಚೆ ನೌಕರರಿಗೆ ವಿಭಾಗೀಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
ಪ್ರಸ್ತುತ ಹಣಕಾಸು ವರ್ಷದಲ್ಲಿ ಹೆಚ್ಚಿನ ಸಾಧನೆಯೊಂದಿಗೆ ಪ್ರಶಸ್ತಿಗಳ ಸಂಖ್ಯೆಯನ್ನು ದುಪ್ಪಟ್ಟುಗೊಳಿಸುವ ಗುರಿಯೊಂದಿಗೆ ಕಾರ್ಯ ನಿರ್ವಹಿಸುವಂತೆ ಸಿಬ್ಬಂದಿಗೆ ಸೂಚನೆ ನೀಡಿದರು.
ದಾವಣಗೆರೆ ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ ಡಾ. ವೆಂಕಟೇಶ್ ಕೆ. ಮಾತನಾಡಿ, ಅಂಚೆ ಇಲಾಖೆಯು ಸಾರ್ವಜನಿಕ ಸೇವೆಯಲ್ಲಿ ವಹಿಸುತ್ತಿರುವ ಮಹತ್ವದ ಪಾತ್ರವನ್ನು ಶ್ಲಾಘಿಸಿದರು. ದೃಶ್ಯಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಸತೀಶ ಕುಮಾರ್ ಪಿ. ವಲ್ಲೇಪುರೆ ಮಾತನಾಡಿದರು.
ದಾವಣಗೆರೆ ವಿಭಾಗದ ಸ್ಥಾನಿಕ ಸಹಾಯಕ ಅಂಚೆ ಅಧೀಕ್ಷಕಿ ರೇಖಾ ಕೆ., ದಾವಣಗೆರೆ ಮೊದಲನೇ ಉಪವಿಭಾಗದ ಸಹಾಯಕ ಅಂಚೆ ಅಧೀಕ್ಷಕ ನರೇಂದ್ರ ನಾಯ್ಕ್ ಕೆ.ಎಂ., ದಾವಣಗೆರೆ ಪ್ರಧಾನ ಅಂಚೆ ಕಚೇರಿಯ ಪ್ರಧಾನ ಅಂಚೆ ಪಾಲಕ ಓಂಕಾರಮೂರ್ತಿ ಎಂ., ಚನ್ನಗಿರಿ ಉಪ ವಿಭಾಗದ ಅಂಚೆ ನಿರೀಕ್ಷಕ ಸ್ವಾಮಿ ಜೆ.ಡಿ., ದಾವಣಗೆರೆ ಎರಡನೇ ಉಪವಿಭಾಗದ ಅಂಚೆ ನಿರೀಕ್ಷಕ ಅಶ್ವಥ್ ವಿ. ಹಾಗೂ ಪ್ರಧಾನ ಅಂಚೆ ಕಚೇರಿಯ ಸಿಬ್ಬಂದಿ, ವಿಭಾಗೀಯ ಸಹಾಯಕರು, ವಿಭಾಗದ ಎಲ್ಲ ಅಂಚೆ ನೌಕರರು ಮತ್ತು ಗ್ರಾಮೀಣ ಅಂಚೆ ನೌಕರರು ಇದ್ದರು. ವಿವಿಧ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆಗೈದ ಸಿಬ್ಬಂದಿಯನ್ನು ಸನ್ಮಾನಿಸಿ ಪ್ರಶಸ್ತಿ ಪ್ರದಾನ ಮಾಡಲಾಯಿತು.