ಪ್ರಮುಖ ಮುಖ್ಯಾಂಶಗಳು
ಇತ್ತೀಚೆಗೆ ಸೈಬರ್ ಅಪರಾಧಗಳು ಹೆಚ್ಚುತ್ತಿವೆ. ಕೆಲವರ ಖಾತೆಗಳು ಹ್ಯಾಕ್ ಆಗುತ್ತಿವೆ. ಖಾಸಗಿ ಫೋಟೋಗಳನ್ನು ದುರ್ಬಳಕೆ ಮಾಡಲಾಗುತ್ತಿದೆ. ಪರಿಚಿತರಿಗೇ ಹಣ ಕೊಡಲಾಗದ ಈ ದಿನದಲ್ಲಿ ಅಪರಿಚತರು ಮಾಡುವ ಕರೆಗಳಿಗೆ ಮಾರುಹೋಗಿ ಹಣ ಹಾಕಿ ವಂಚನೆಗೆ ಒಳಗಾಗದಿರಿ. ಉದ್ಯೋಗ, ಸಾಲ, ಹಣ ದ್ವಿಗುಣದ ಮಾಡಿಕೊಡುವ ಹೆಸರಲ್ಲಿ ವಂಚಿಸುವ ಯಾವುದೇ ಆ್ಯಪ್‌ಗಳ ಬಗ್ಗೆ ಎಚ್ಚರ ವಹಿಸಿ.