ರಾಜ್ಯ ಹೆದ್ದಾರಿಗಳ ದುರಸ್ತಿಗೆ ಆಗ್ರಹಿಸಿ ಜಯಕರ್ನಾಟಕ ಸಂಟನೆಯ ಕಾರ್ಯಕರ್ತರು ಹರಿಹರದಲ್ಲಿ ಭಿಾಟನೆ ನಡೆಸಿ, ವಿನೂತನವಾಗಿ ಪ್ರತಿಭಟನೆ ನಡೆಸಿದರು. Protest
ದಾವಣಗೆರೆ

ರಸ್ತೆ ದುರಸ್ತಿಗೆ ಭಿಕ್ಷೆ ನೀಡ್ರಪ್ಪಾ!

ಅಪಾಯವಿದ್ದರೂ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ದುರಸ್ತಿಗೆ ಕ್ರಮ ಕೈಗೊಂಡಿಲ್ಲ

ಹರಿಹರ: ಗುಂಡಿಮಯವಾಗಿರುವ ರಾಜ್ಯ ಹೆದ್ದಾರಿಗಳ ದುರಸ್ತಿಗೆ ಕ್ರಮ ಕೈಗೊಳ್ಳದ ಪಿಡಬ್ಲುಡಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ರ್ನಿಲಕ್ಷ ಖಂಡಿಸಿ ಜಯ ಕರ್ನಾಟಕ ಸಂಟನೆಯ ಕಾರ್ಯಕರ್ತರು ಶುಕ್ರವಾರ ನಗರದಲ್ಲಿ ಭಿಾಟನೆ ಮಾಡಿ, ಸಂಗ್ರಹವಾದ ಹಣವನ್ನು ಪಿಡಬ್ಲುಡಿ ಇಂಜಿನಿಯರ್​ಗೆ ಸಲ್ಲಿಸುವ ಪ್ರಯತ್ನ ಮಾಡಿದರು.

ಸಂಟನೆಯ ತಾಲೂಕು ಟಕ ಅಧ್ಯಕ್ಷ ಎಸ್​. ಗೋವಿಂದ ಮಾತನಾಡಿ, ನಗರ ವ್ಯಾಪ್ತಿಯ ಶಿವಮೊಗ್ಗ, ಹೊಸಪೇಟೆ (ರಾಜ್ಯ ಹೆದ್ದಾರಿ 25) ಮುಖ್ಯರಸ್ತೆಯ ರೈಲ್ವೆ ಅಂಡರ್​ ಬ್ರಿಡ್ಜ್​ ಹಾಗೂ ಗ್ರಾಮೀಣ ಪೊಲೀಸ್​ ಠಾಣೆ ಮುಂಭಾಗದಿಂದ ಕುರುಬರಹಳ್ಳಿವರೆಗಿನ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಈ ರಸ್ತೆ ದುರಸ್ತಿಗೆ ಹಲವು ಬಾರಿ ಮನವಿ ಮಾಡಿದರೂ ಸ್ಪಂದಿಸಿಲ್ಲ ಎಂದು ಆರೋಪಿಸಿದರು.

ಮಳೆ ಬಂದಾಗ ಗುಂಡಿಗಳಲ್ಲಿ ನೀರು ನಿಂತು, ಆಳ ತಿಳಿಯದೆ ವಾಹನ ಸವಾರರು, ಶಾಲಾ ಕಾಲೇಜು ವಿದ್ಯಾರ್ಥಿಗಳು ನಿತ್ಯ ಅಪಘಾತದ ಭೀತಿ ಎದುರಿಸುತ್ತಿದ್ದಾರೆ. ಹಲವರು ಎದ್ದು, ಬಿದ್ದು ಕೈ&ಕಾಲು ಮುರಿದುಕೊಂಡಿದ್ದಾರೆ. ಸಾರ್ವಜನಿಕರ ಜೀವಕ್ಕೆ ಅಪಾಯವಿದ್ದರೂ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ದುರಸ್ತಿಗೆ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

ಉಪಾಧ್ಯಕ್ಷ ಎಂ.ಆರ್​. ಆನಂದ್​ ಮಾತನಾಡಿ, ಪ್ರಮುಖ ರಸ್ತೆ ದುರಸ್ತಿಗೆ ಅಧಿಕಾರಿಗಳು ಮುಂದಾಗದಿರುವುದು ದುರದೃಷ್ಟಕರ. ಸಾರ್ವಜನಿಕರ ಜೀವ ಉಳಿಸುವ ಉದ್ದೇಶದಿಂದ ನಾವು ಭಿಕ್ಷೆ ಬೇಡಿಯಾದರೂ ರಸ್ತೆ ಗುಂಡಿ ಮುಚ್ಚಲು ಸಿದ್ಧರಾಗಿದ್ದೇವೆ. ಅಧಿಕಾರಿಗಳು ಕೂಡಲೇ ಎಚ್ಚೆತ್ತು ದುರಸ್ತಿ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಪಿಡಬ್ಲುಡಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸಂಟನಾ ಕಾರ್ಯದರ್ಶಿ ಎಂ. ಮಧು, ವಿದ್ಯಾರ್ಥಿ ಟಕದ ಅಧ್ಯಕ್ಷ ಶ್ರೀನಿವಾಸ್​, ಪದಾಧಿಕಾರಿಗಳಾದ ಎಚ್​.ಪಿ. ಸಮಿಉಲ್ಲಾ, ಎಸ್​. ವಿಜಯ್​ ಕುಮಾರ್​, ಭರತ್​, ರಾಕೇಶ್​, ಅರುಣ್​, ಕೊಟ್ರೇಶ್​, ಜೀವನ್​, ಸಾಗರ್​, ವಸಂತ್​, ನಿಖಿತ, ಅಜ್ಜು ಇತರರಿದ್ದರು.