ಹರಿಹರ ನಗರದ ಗಿರಿಯಮ್ಮ ಕಾಲೇಜಿನಲ್ಲಿ ಭಾನುವಾರ ಹರ್ ರ್ ಯೋಧ ಶೌರ್ಯ ತರಬೇತಿ ಶಿಬಿರದ ಸವಾರೋಪ ಸವಾರಂಭವನ್ನು ಶ್ರೀ ಕೃಷ್ಣನ ಭಾವಚಿತ್ರಕ್ಕೆ ಪುಷ್ಪಾರ್ಚನೆ ವಾಡುವ ಮೂಲಕ ಶಾಸಕ ಬಿ.ಪಿ. ಹರೀಶ್ ಚಾಲನೆ ನೀಡಿದರು. ಎಸ್.ಎಂ. ವೀರೇಶ್ ಹನಗವಾಡಿ, ಆತ್ಮಾನಂದ ಮಹಾರಾಜ್, ನಿರಂಜನ ಇದ್ದರು. camp 
ದಾವಣಗೆರೆ

ಸಮರ ಕಲೆಗಳಿಂದ ದೈಹಿಕ ಶಕ್ತಿ ಮತ್ತು ಏಕಾಗ್ರತೆ camp

ಚಂದನ ವಿ ಎಂ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಬಿ.ಪಿ. ಹರೀಶ್ ಅಭಿಪ್ರಾಯ
  • ಹರ್ ರ್ ಯೋಧ ಶೌರ್ಯ ತರಬೇತಿ ಶಿಬಿರ
ಹರಿಹರ: ದೇಶೀಯ ಸಾಂಪ್ರದಾಯಿಕ ಸಮರ ಕಲೆಗಳು ದೈಹಿಕ ಶಕ್ತಿ ಮತ್ತು ಏಕಾಗ್ರತೆಯನ್ನು ಹೆಚ್ಚಿಸುತ್ತದೆ ಎಂದು ಶಾಸಕ ಬಿ.ಪಿ. ಹರೀಶ್ ಅಭಿಪ್ರಾಯ ಪಟ್ಟರು. camp
ನಗರದ ಗಿರಿಯಮ್ಮ ಕಾಲೇಜು ಆವರಣದಲ್ಲಿ ಭಾನುವಾರ ಹಿಂದೂ ಜಾಗೃತಿ ಸಮಿತಿಯಿಂದ ಹಮ್ಮಿಕೊಂಡಿದ್ದ ಹರ್ ರ್ ಯೋಧ ಶೌರ್ಯ ತರಬೇತಿ ಶಿಬಿರದ ಸವಾರೋಪ ಸವಾರಂಭದಲ್ಲಿ ವಾತನಾಡಿದರು.
ಮಹಳೆಯರ ಸ್ವಯಂ ರಕ್ಷಣೆಗೆ ಈ ಕಲೆಗಳು ಸಹಕಾರಿಯಾಗಲಿದೆ. ದಾಳಿ ಮಾಡಲು ಅಲ್ಲ, ರಕ್ಷಣಾ ಕಲೆಗಳನ್ನು ಹೇಳಿಕೊಡಲು ಈ ಶಿಬಿರ ಆಯೋಜಿಸಲಾಗಿದೆ ಎಂದರು.
ನಗರದಲ್ಲಿ ಈ ಶಿಬಿರ ನಡೆಸದಂತೆ ಪ್ರತಿರೋಧ ತೋರಿರುವುದು ಸರಿಯಲ್ಲ. ಅತಿಯಾದ ಓಲೈಕೆಯೂ ಒಳಿತಲ್ಲ ಎಂಬುದನ್ನು ಮನಗಾಣಬೇಕಿದೆ. ನಮ್ಮತನಕ್ಕೆ ಧಕ್ಕೆಯುಂಟಾದರೆ ಸಹಿಸುವುದಿಲ್ಲ ಎಂದು ಹೇಳಿದರು.
ಬಿಜೆಪಿ ಜಿಲ್ಲಾ ವಾಜಿ ಅಧ್ಯಕ್ಷ ಎಸ್.ಎಂ. ವೀರೇಶ್ ಹನಗವಾಡಿ ವಾತನಾಡಿ, ಹಿಂದೂಗಳು ಉಳಿದರೆ ದೇಶ ಉಳಿಯುತ್ತದೆ ಎನ್ನುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹೆಣ್ಣು ಮಕ್ಕಳಿಗೆ ಸ್ವಯಂ ರಕ್ಷಣೆ ಕಲೆಗಳನ್ನು ಶಿಬಿರದಲ್ಲಿ ಹೇಳಿಕೊಡಲಾಗಿದೆ ಎಂದರು.
ಕೆಲವು ಪಟ್ಟ ಭದ್ರ ಹಿತಾಸಕ್ತಿಗಳ ಪರಿಣಾಮದಿಂದಾಗಿ ದೇಶದ ಮೇಲೆ ದಾಳಿ ಮಾಡಿದವರ ಬಗ್ಗೆ ಹೇಳಿಕೊಟ್ಟು ನಮ್ಮ ಶೌರ್ಯಯುತ ಇತಿಹಾಸವನ್ನು ಮರೆತಿದ್ದೇವೆ. ಸಾಮಾಜಿಕ ಜಾಲತಾಣ ದೇಶದಲ್ಲಿ ಹೆಚ್ಚು ಸಕ್ರಿಯವಾದ ಪರಿಣಾಮ ಕಳೆದು ಹೋದ ಇತಿಹಾಸದ ಗತವೈಭವವನ್ನು ಕಟ್ಟಕಡೆಯ ವ್ಯಕ್ತಿಗೂ ತಲುಪಿಸಲಾಗುತ್ತಿದೆ ಎಂದರು.
ಹಿಂದೂಗಳು ಎಚ್ಚರ ತಪ್ಪಿದರೆ ಸಂಕಷ್ಟ ತಪ್ಪಿದ್ದಲ್ಲ ಎಂಬ ಜಾಗೃತಿ ನಮ್ಮಲ್ಲಿರಬೇಕಿದೆ. ಈ ರೀತಿಯ ಶಿಬಿರಗಳು ನಿರಂತರವಾಗಿ ನಡೆಯಬೇಕು. ಇದರಿಂದ ವಾನಸಿಕ ಹಾಗೂ ದೈಹಿಕ ಸದೃಢರಾಗಲು ಸಾಧ್ಯ ಎಂದರು.
7 ದಿನಗಳ ತರಬೇತಿಯಲ್ಲಿ ಲಾಠಿ ವರಸೆ, ನಾನ್ ಚಾಕ್, ಸ್ವಯಂ ರಕ್ಷಣೆ, ಸಂಸ್ಕಾರ, ಸಂಸ್ಕೃತಿ ಕುರಿತು ಶಿಬಿರಾರ್ಥಿಗಳಿಗೆ ಅರಿವು ಮೂಡಿಸಲಾಯಿತು. ಸಮಾರಂಭದಲ್ಲಿ ಶಿಬಿರಾರ್ಥಿಗಳಿಂದ ಪ್ರದರ್ಶನ ನಡೆಸಲಾಯಿತು.
ರಾಮಕೃಷ್ಣ ಆಶ್ರಮದ ಆತ್ಮಾನಂದ ಮಹಾರಾಜ್, ಹಿಂದೂ ಜನ ಜಾಗೃತಿ ಸಮಿತಿ ವಿಜಯಕುವಾರ್, ನಿವೃತ್ತ ಪೊಲೀಸ್ ಅಧಿಕಾರಿ ಕೋಮಲ್, ಉದ್ಯಮಿ ಎಚ್.ಪಿ. ಬಾಬಣ್ಣ, ಪತಾಂಜಲಿ ಯೋಗ ಕೇಂದ್ರದ ನಿರಂಜನ್, ಬಿ. ವಿಶ್ವನಾಥ್, ತರಬೇತಿದಾರ ಸಾಗರ್ ದಳವಾಯಿ, ಲೆಕ್ಕ ಪರಿಶೋಧಕಿ ಸಾವಿತ್ರಾ, ಸಾಕ್ಷಿ ಶಿಂದೆ, ಮಿನಾಕ್ಷಿ ನಿರಂಜನ್ ಇದ್ದರು.