ಚನ್ನಗಿರಿಯ ಶಿವಗಂಗೆಹಾಳ್ ಗ್ರಾಮದಲ್ಲಿ ಎಸ್‌ಕೆಡಿಆರ್‌ಡಿಪಿಯಿಂದ ಸೋಮವಾರ ಆಯೋಜಿಸಿದ್ದ ಪೌಷ್ಟಿಕ ಆಹಾರ ಕಾರ್ಯಕ್ರಮದ ಉದ್ಘಾಟನೆಯನ್ನು ಯೋಜನಾಧಿಕಾರಿ ಅನ್ನಪೂರ್ಣ ನೆರವೇರಿಸಿದರು. ಎನ್.ಐ. ಸವಿತಾ, ಮಧುಬಾಲ, ಶಿವಕುಮಾರ್, ರೂಪ ಇತರರಿದ್ದರು. food
- ಯೋಜನಾಧಿಕಾರಿ ಅನ್ನಪೂರ್ಣ ಹೇಳಿಕೆ
ಚನ್ನಗಿರಿ: ಆರೋಗ್ಯವಂತ ಶಿಶುವಿನಿಂದ ಆರೋಗ್ಯ ಕರ ಸಮಾಜ ಕಟ್ಟಬಹುದು, ಅದಕ್ಕಾಗಿ ಮಕ್ಕಳಿಗೆ ಪೌಷ್ಟಿಕಾಂಶಯುಕ್ತ ಆಹಾರ ಅವಶ್ಯ ಎಂದು ಎಸ್‌ಕೆಡಿಆರ್‌ಡಿಪಿ ಯೋಜನಾಧಿಕಾರಿ ಅನ್ನಪೂರ್ಣ ಹೇಳಿದರು. food
ಪಟ್ಟಣದ ಶಿವಗಂಗೆಹಾಳ್ ಗ್ರಾಮದಲ್ಲಿ ಸೋಮವಾರ ಎಸ್‌ಕೆಡಿಆರ್‌ಡಿಪಿಯಿಂದ ಆಯೋಜಿಸಿದ್ದ ಪೌಷ್ಟಿಕ ಅಹಾರ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಪ್ರಕೃತಿದತ್ತವಾಗಿ ದೊರೆಯುವ ಆಹಾರದಲ್ಲಿ ಹೆಚ್ಚಿನ ಪೌಷ್ಟಿಕಾಂಶ ದೊರೆಯುತ್ತದೆ. ಉತ್ತಮ ಆಹಾರದಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಮಕ್ಕಳಿಗೆ ಉತ್ತಮ ಪೌಷ್ಟಿಕಾಂಶ ಒದಗಿಸಲು ಸರ್ಕಾರ ಹಲವು ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದರು.
ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಮಹಾಂತೇಶ್ ಮಾತನಾಡಿ, ಮನುಷ್ಯನ ದೈಹಿಕ, ಮಾನಸಿಕ ಬೆಳವಣಿಗೆ ಅವರ ಜೀವನ ಶೈಲಿ ಮತ್ತು ಆಹಾರ ಪದ್ಧತಿಯನ್ನು ಅವಲಂಬಿಸಿರುತ್ತದೆ. ಉತ್ತಮ ಆಹಾರ ಸೇವನೆಯಿಂದ ದೇಹವನ್ನು ಸದೃಢವಾಗಿ ಇಡಬಹುದು. ಪ್ರೋಟಿನ್, ಪೋಷಕಾಂಶ ಮತ್ತು ನಾರುಯುಕ್ತ ಸಮತೋಲನ ಆಹಾರದಿಂದ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದರು.
ಜ್ಞಾನವಿಕಾಸ ಯೋಜನಾಧಿಕಾರಿ ಎನ್. ಐ. ಸವಿತಾ, ಶುಶ್ರೂಷಕಿ ಮಧುಬಾಲ, ಸಾಹಿತಿ ಶಿವಕುಮಾರ್, ಸೇವಾಪ್ರತಿನಿಧಿ ರೂಪ, ಅಶಾ ಕಾರ್ಯಕರ್ತೆಯರು ಇತರರಿದ್ದರು.