ಮಾಯಕೊಂಡ ಕೆಪಿಎಸ್ ಶಾಲೆಯ ಬಾಲಕಿಯರ ಪ್ರಾಥಮಿಕ ವಿಭಾಗದಲ್ಲಿ ಸೋಮವಾರ ಪಠ್ಯಪುಸ್ತಕ ವಿತರಿಸಲಾಯಿತು. ಡಯಟ್ ಉಪನ್ಯಾಸಕ ಬಿ. ರೇವಣಸಿದ್ದಪ್ಪ, ಪತ್ರಕರ್ತ ಕೃಷ್ಣಮೂರ್ತಿ ಪಿ.ಎಚ್., ಹಿರಿಯ ಶಿಕ್ಷಕ ಮಹದೇವಪ್ಪ, ಪಿ. ಬಿಂಧು, ರೂಪಾ, ವಿಶಾಲಾ, ಕಲ್ಲೇಶ್, ಸಿದ್ದಪ್ಪ ಇತರರು ಇದ್ದರು. education
- ಡಯಟ್ ಉಪನ್ಯಾಸಕ ಬಿ. ರೇವಣಸಿದ್ದಪ್ಪ ಸಲಹೆ
ಮಾಯಕೊಂಡ: ಕುಟುಂಬದಲ್ಲಿ ಎಷ್ಟೇ ಕುಂದುಕೊರತೆ ಗಳಿದ್ದರೂ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಸವಾಜದಲ್ಲಿ ಉತ್ತಮ ನಾಗರಿಕರನ್ನಾಗಿ ವಾಡಿ ಎಂದು ಡಯಟ್ ಉಪನ್ಯಾಸಕ ಬಿ. ರೇವಣಸಿದ್ದಪ್ಪ ಸಲಹೆ ನೀಡಿದರು. education
ಗ್ರಾಮದ ಕೆಪಿಎಸ್ ಶಾಲೆಯ ಬಾಲಕಿಯರ ಪ್ರಾಥಮಿಕ ವಿಭಾಗದಲ್ಲಿ ಸೋಮವಾರ ಆಯೋಜಿಸಿದ್ದ ಪೋಷಕರ ಸಭೆಯಲ್ಲಿ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ವಿತರಿಸಿ ವಾತನಾಡಿದರು.
ಮಕ್ಕಳ ಪಾಲಿಗೆ ಶಿಕ್ಷಣವೇ ಸಂಪತ್ತು. ಮಕ್ಕಳು ಶಾಲೆಯಿಂದ ಹೊರಗುಳಿಯದಂತೆ ಜಾಗೃತಿ ವಹಿಸಬೇಕು. ಗ್ರಾಮೀಣ ಭಾಗದಲ್ಲಿ ರೈತಾಪಿ ವರ್ಗ, ಕೂಲಿ ಕಾರ್ಮಿಕರು ಹೆಚ್ಚಾಗಿದ್ದು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿ ಉತ್ತಮ ಶಿಕ್ಷಣ ಕೊಡಿಸಿ. ಸರ್ಕಾರ ಮಕ್ಕಳಿಗಾಗಿ ಅನೇಕ ಸೌಲಭ್ಯಗಳನ್ನು ನೀಡಿದ್ದು ಅದರ ಸದುಪಯೋಗ ಪಡೆಯಿರಿ ಎಂದರು.
ಸರ್ಕಾರಿ ಶಾಲೆಯಲ್ಲಿ ಓದಿದವರು ಅನೇಕ ಸಾಧನೆ ಮಾಡಿದ್ದಾರೆ. ಮಕ್ಕಳಲ್ಲಿ ಓದುವ ಸಾಮರ್ಥ್ಯವಿದೆ. ಶಿಕ್ಷಕರು ಅವರಿಗೆ ಪ್ರೋತ್ಸಾಹ ನೀಡಬೇಕು. ಅವರಲ್ಲಿ ಅಡಗಿರುವ ಕೌಶಲವನ್ನು ಗುರುತಿಸ ಬೇಕು ಎಂದರು.
ಪತ್ರಕರ್ತ ಕೃಷ್ಣಮೂರ್ತಿ ಪಿ.ಎಚ್. ವಾತನಾಡಿ, ಸರ್ಕಾರಿ ಶಾಲೆಗಳಲ್ಲಿ ನುರಿತ ಅನುಭವಿ ಶಿಕ್ಷಕರಿದ್ದು ಗುಣಾತ್ಮಕ ಶಿಕ್ಷಣ ನೀಡುತ್ತಿದ್ದಾರೆ. ಅನೇಕ ಸರ್ಕಾರಿ ಶಾಲೆಗಳ ಕಟ್ಟಡ ಶಿಥಿಲಗೊಂಡಿವೆ, ಶಿಕ್ಷಕರ ಕೊರತೆ, ಪೀಠೋಪಕರಣಗಳ ಕೊರತೆ, ಕುಡಿಯುವ ನೀರು ಶೌಚಗೃಹ ಹೀಗೆ ಹಲವು ಮೂಲ ಸೌಕರ್ಯಗಳ ಕೊರತೆ ಎದುರಿಸುತ್ತಿವೆ ಎಂದರು. ಶಿಕ್ಷಕ ಸಿದ್ದಪ್ಪ ವಾತನಾಡಿ, ಸರ್ಕಾರಿ ಶಾಲೆಗೆ ಮಕ್ಕಳನ್ನು ದಾಖಲಿಸಬೇಕು ಎಂದರು. ಹಿರಿಯ ಶಿಕ್ಷಕ ಮಹದೇವಪ್ಪ, ಪಿ. ಬಿಂಧು, ರೂಪಾ, ವಿಶಾಲಾ, ಕಲ್ಲೇಶ್, ಸಿದ್ದಪ್ಪ ಇತರರು ಇದ್ದರು.