Monkey ಮಂಗನ ದಾಳಿಗೆ ಮಗುವಿನ ಕೆನ್ನೆ ಗಾಯಗೊಂಡಿರುವುದು. 
ದಾವಣಗೆರೆ

ಆಟವಾಡುತ್ತಿದ್ದ ಮಗುವಿನ ಮೇಲೆ ಮಂಗನ ದಾಳಿ Monkey

ಹರ್ಷ ನ.ಪುರೋಹಿತ

ಪ್ರಮುಖ ಮುಖ್ಯಾಂಶಗಳು

  • ಅರಣ್ಯಾಧಿಕಾರಿಗಳ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರ ಆಕ್ರೋಶ
  • ಮಗುವಿನ ಕೆನ್ನೆಗೆ ಕಚ್ಚಿ, ಮೈ, ಕೈ ಹಾಗೂ ಕಾಲು ಗಾಯ
  • ಜಗಳೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ

ಜಗಳೂರು: ಮನೆಯಮುಂಭಾಗದಲ್ಲಿ ಆಟವಾಡುತ್ತಿದ್ದಹತ್ತು ವರ್ಷದ ಮಗುವಿನ ಮೇಲೆಮಂಗವೊಂದು ಏಕಾಏಕಿ ದಾಳಿ ನಡೆಸಿಗಾಯಗೊಳಿಸಿರುವ ಘಟನೆ ತಾಲೂಕಿನಕೆಳಗೋಟೆ ಗ್ರಾಮದಲ್ಲಿ ಸೋಮವಾರಮುಂಜಾನೆ ನಡೆದಿದೆ. Monkey

ಗ್ರಾಮದಶಾರದಮ್ಮ ಮತ್ತು ತಿಪ್ಪೇಸ್ವಾಮಿದಂಪತಿಯ ಪುತ್ರ ಪ್ರಥಮ್ ಗಾಯಗೊಂಡ ಮಗು.ರಸ್ತೆ ಬದಿಯಮನೆಯ ಮುಂಭಾಗದಲ್ಲಿ ಮಗುಆಟವಾಡುತ್ತಿದ್ದಾಗ ವೇಗವಾಗಿಬಂದ ಮಂಗ ಮಗುವಿನ ಕೆನ್ನೆಗೆಕಚ್ಚಿ, ಮೈ,ಕೈ ಹಾಗೂ ಕಾಲುಗಳನ್ನುಗಾಯಗೊಳಿಸಿದೆ.

ಮಗುವಿನ ಕಿರುಚಾಟಕೇಳಿ ಅಕ್ಕಪಕ್ಕದವರು ಓಡಿ ಬಂದುಮಂಗನಿಂದ ಮಗುವನ್ನು ಬಿಡಿಸಿದ್ದಾರೆ.ಕೂಡಲೇ ಮಗುವನ್ನುಜಗಳೂರು ಸರ್ಕಾರಿ ಆಸ್ಪತ್ರೆಗೆದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದ್ದು,ಸದ್ಯ ಪ್ರಾಣಾಪಾಯದಿಂದ ಪಾರಾಗಿದೆ.

ಹೆಚ್ಚಿದಮಂಗಗಳ ಕಾಟ

ಆಹಾರದಕೊರತೆಯಿಂದ ಕಾಡಿನಿಂದ ನಾಡಿನಕಡೆಗೆ ಮುಖ ಮಾಡುತ್ತಿರುವ ಮಂಗಗಳುಇತ್ತೀಚೆಗೆ ಗ್ರಾಮದಲ್ಲಿ ಹೆಚ್ಚಿನಸಂಖ್ಯೆಯಲ್ಲಿ ಕಾಣಿಸಿಕೊಳ್ಳುತ್ತಿವೆ.ಮನೆ,ಹೋಟೆಲ್ ಹಾಗೂಹಣ್ಣಿನ ಮರಗಳಿರುವ ಕಡೆ ಗುಂಪಾಗಿಸೇರುತ್ತಿದ್ದು,ಮಕ್ಕಳು,ವೃದ್ಧರು ಹಾಗೂಮಹಿಳೆಯರ ಮೇಲೆ ದಾಳಿ ಮಾಡಬಹುದುಎಂಬ ಆತಂಕ ಗ್ರಾಮಸ್ಥರಲ್ಲಿ ಮನೆಮಾಡಿದೆ.

ಈಭಾಗವು ರಂಗಯ್ಯನದುರ್ಗ ಕೊಂಡಂಡುಕುರಿಅರಣ್ಯ ವ್ಯಾಪ್ತಿಗೆ ಬರುವುದರಿಂದಈ ಹಿಂದೆಯೂ ಕರಡಿಗಳು ರೈತರ ಮೇಲೆದಾಳಿ ಮಾಡಿದ ಉದಾಹರಣೆಗಳಿವೆ.ಈಗ ಮಂಗಗಳ ಹಾವಳಿಶುರುವಾಗಿದ್ದು,ಸಾರ್ವಜನಿಕರುಭಯಭೀತರಾಗಿದ್ದಾರೆ.

ಅಧಿಕಾರಿಗಳನಿರ್ಲಕ್ಷ್ಯ

ಘಟನೆನಡೆದು ಎರಡು-ಮೂರುದಿನಗಳಾದರೂ ಸಂಬಂಧಪಟ್ಟಅರಣ್ಯಾಧಿಕಾರಿಗಳು ಸ್ಥಳಕ್ಕೆಭೇಟಿ ನೀಡದಿರುವುದು ಪಾಲಕರ ಹಾಗೂಗ್ರಾಮಸ್ಥರ ಆಕ್ರೋಶಕ್ಕೆಕಾರಣವಾಗಿದೆ. ಅಧಿಕಾರಿಗಳಗಮನಕ್ಕೆ ತಂದರೂ ಯಾವುದೇಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರುಆರೋಪಿಸಿದ್ದಾರೆ.

"

ಸಣ್ಣ ಮಗುವಿನ ಮೇಲೆ ದಾಳಿಯಾದ ಬಗ್ಗೆ ಅರಣ್ಯಾಧಿಕಾರಿಗಳಿಗೆ ಕರೆ ಮಾಡಿ ತಿಳಿಸಿದರೂ ಈವರೆಗೂ ಯಾರೂ ಭೇಟಿ ನೀಡಿ ಮಗುವಿನ ಆರೋಗ್ಯ ವಿಚಾರಿಸಿಲ್ಲ. ಇಂತಹ ಬೇಜವಾಬ್ದಾರಿ ಅಧಿಕಾರಿಗಳ ವಿರುದ್ಧ ಶಾಸಕರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು.

— ತಿಪ್ಪೇಸ್ವಾಮಿ, ಗಾಯಾಳು ಮಗುವಿನ ತಂದೆ