ನರೇಂದ್ರ ಮೋದಿ ಅವರು ದೀರ್ಘಾವಧಿ (12 ವರ್ಷ) ಆಡಳಿತ ಪೂರೈಸಿದ ಹಿನ್ನೆಲೆಯಲ್ಲಿ ದಕ್ಷಿಣ ವಿಧಾನಸಭಾ ಕ್ಷೇತ್ರದ ದೊಡ್ಡಪೇಟೆಯ ಗಣೇಶ ದೇವಸ್ಥಾನದಲ್ಲಿ ಬುಧವಾರ ಬಿಜೆಪಿ ಕಾರ್ಯಕರ್ತರು ವಿಶೇಷ ಪೂಜೆ ಸಲ್ಲಿಸಿದರು. ಯಶವಂತರಾವ್ ಜಾಧವ್, ರಾಜನಹಳ್ಳಿ ಶಿವಕುಮಾರ್, ಬಿ. ರಮೇಶ್ ನಾಯ್ಕ್, ಶಿವನಗೌಡ ಟಿ. ಪಾಟೀಲ್, ಟಿಂಕರ್ ಮಂಜಣ್ಣ, ಭಾಗ್ಯಾ ಪಿಸಾಳೆ, ಪುಷ್ಪಾ ವಾಲಿ, ಮಂಜುಳಾ ಇಟಗಿ ಇದ್ದರು.  
ದಾವಣಗೆರೆ

ದೇಶದ ಹೆಮ್ಮೆ ಮರು ಸ್ಥಾಪಿಸಿದ ಮೋದಿ

ಪ್ರಮುಖ ಮುಖ್ಯಾಂಶಗಳು

  • ಬಿಜೆಪಿ ಮುಖಂಡ ಯಶವಂತರಾವ್ ಹೇಳಿಕೆ
  • ದೇವಸ್ಥಾನದಲ್ಲಿ ವಿಶೇಷ ಪೂಜೆ
ದಾವಣಗೆರೆ : ಪ್ರಧಾನಿ ನರೇಂದ್ರ ಮೋದಿ ಅವರ 12 ವರ್ಷಗಳ ಆಡಳಿತವು ದೇಶದ ಹೆಮ್ಮೆಯನ್ನು ಮರು ಸ್ಥಾಪಿಸಿದೆ ಎಂದು ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್ ಹೇಳಿದರು.
ಮೋದಿ ಅವರು ದೀರ್ಘಾವಧಿ (12 ವರ್ಷ) ಆಡಳಿತ ಪೂರೈಸಿದ ಹಿನ್ನೆಲೆಯಲ್ಲಿ ದಕ್ಷಿಣ ವಿಧಾನಸಭಾ ಕ್ಷೇತ್ರದ ದೊಡ್ಡಪೇಟೆಯ ಗಣೇಶ ದೇವಸ್ಥಾನದಲ್ಲಿ ಬುಧವಾರ ಬಿಜೆಪಿ ಕಾರ್ಯಕರ್ತರು ವಿಶೇಷ ಪೂಜೆ ಸಲ್ಲಿಸಿದ ಸಂದರ್ಭದಲ್ಲಿ ಮಾತನಾಡಿದರು.
ಮೋದಿ ಅವರು ದೇಶವನ್ನು ದಾಸ್ಯದ ಮನಸ್ಥಿತಿಯಿಂದ ಹೊರ ತಂದಿದ್ದಾರೆ. ಆತ್ಮ ನಿರ್ಭರವನ್ನಾಗಿಸಿದ್ದಾರೆ, ಮಹಿಳಾ ಸಬಲೀಕರಣ, ಎಲ್ಲ ವರ್ಗದ ಜನರ ಶ್ರೇಯೋಭಿವೃದ್ಧಿಗೆ ಶ್ರಮಿಸಿದ್ದಾರೆ ಎಂದು ಬಣ್ಣಿಸಿದರು.
ಪ್ರಧಾನಿಯಾಗಿ ಮೋದಿ ಅವರು 4399 ದಿನಗಳ ಆಡಳಿತದ ಐತಿಹಾಸಿಕ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಪ್ರಥಮ ಪ್ರಧಾನಿ ಜವಾಹರ ಲಾಲ್ ನೆಹರು ಅವರ ದಾಖಲೆಯನ್ನು ಅಳಿಸಿ ಹಾಕಿದ್ದಾರೆ. ಸಾರ್ವಜನಿಕ ಸೇವೆಯೆ ಉತ್ತಮ ಆಡಳಿತದ ಅತಿ ದೊಡ್ಡ ಅಳತೆಗೋಲು. ನಮ್ರತೆ, ಸಮರ್ಪಣಾ ಭಾವ ಮತ್ತು ಕರ್ತವ್ಯ ಪ್ರಜ್ಞೆಯಿಂದ ದಣಿವರಿಯದೆ ದುಡಿಯುವ ವ್ಯಕ್ತಿ ಮಾತ್ರ ಜನರ ವಿಶ್ವಾಸ ಗಳಿಸಲು ಸಾಧ್ಯ ಎಂಬುದನ್ನು ಸಾಬೀತುಪಡಿಸಿದ್ದಾರೆ ಎಂದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜನಹಳ್ಳಿ ಶಿವಕುಮಾರ್ ಮಾತನಾಡಿ, ಮೋದಿ ಅವರು ‘ದೇಶವೇ ಮೊದಲು’ ಎಂಬ ತತ್ವದಡಿ ಮುನ್ನಡೆಯುತ್ತಿರುವ ದಣಿವರಿಯದ ಕರ್ಮಯೋಗಿ. ಆತ್ಮನಿರ್ಭರ, ವಿಕಸಿತ ಭಾರತ ಆಗಲು ಅವರ ಅವಶ್ಯಕತೆ ಬಹಳ ಇದೆ. ಜಾಗತಿಕ ಬಿಕ್ಕಟ್ಟಿನಿಂದ ಭಾರತಕ್ಕೆ ತೊಂದರೆಯಾಗದಂತೆ ಮುನ್ನಡೆಸುವ ಶಕ್ತಿ ಮೋದಿ ಅವರಿಗೆ ಮಾತ್ರ ಇದೆ ಎಂದು ಹೇಳಿದರು.
ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ಬಿ. ರಮೇಶ್ ನಾಯ್ಕ್, ಶಿವನಗೌಡ ಟಿ. ಪಾಟೀಲ್, ಆನೆಕೊಂಡ ಪುಟ್ಟಣ್ಣ, ರಾಕೇಶ್ ಬಜರಂಗಿ, ಗೋವಿಂದರಾಜ್, ಮಾಲತೇಶ್, ಕಿಶೋರ್ ಕುಮಾರ್, ರಾಜು ನೀಲಗುಂದ, ಹರೀಶ್ ಹೊನ್ನೂರು, ರವಿ, ಯರಿಸ್ವಾಮಿ, ಟಿಂಕರ್ ಮಂಜಣ್ಣ, ಗುರು ಸೋಗಿ, ನವೀನ್ ಕುಮಾರ್ ಎಚ್.ಬಿ., ಜಗದೀಶ್ ಎಚ್.ಎನ್., ಶ್ರೀನಿವಾಸ್ ಪಿಸಾಳೆ, ಶಂಕರ್, ಬಸವರಾಜ್, ಕುಮಾರ್, ಮಹಿಳಾ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಾಗ್ಯಾ ಪಿಸಾಳೆ, ಪುಷ್ಪಾ ವಾಲಿ, ಮಂಜುಳಾ ಇಟಗಿ ಇದ್ದರು.