ನ್ಯಾಮತಿ ಪಟ್ಟಣದ ಶ್ರೀಬನಶಂಕರಿ ದೇಗುಲದ ಸಮುದಾಯ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ದೈವಜ್ಞ ದರ್ಶನ ಕಾರ್ಯಕ್ರಮವನ್ನು ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಸ್ವಾಮೀಜಿ, ಸುಜ್ಞಾನೇಶ್ವರ ಭಾರತೀ ಸ್ವಾಮೀಜಿ ಉದ್ಘಾಟಿಸಿದರು. ಪ್ರಶಾಂತ್ ಚಂದ್ರಹಾಸ್ ರಾಯ್ಕರ್, ರತ್ನಾಕರ್ ಗೋವಿಂದ್ ರಾಯ್ಕರ್, ಲಕ್ಷ್ಮೀಬಾಯಿ ರತ್ನಕರ್ ಶೇಟ್, ಕಮಲಮ್ಮ ರಾಮಕೃಷ್ಣ ಅನ್ವೇಕರ್ ಇತರರಿದ್ದರು.Divine Vision
- ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಸ್ವಾಮೀಜಿ ಅಭಿಪ್ರಾಯ
- ದೈವಜ್ಞ ದರ್ಶನ ಕಾರ್ಯಕ್ರಮ
ನ್ಯಾಮತಿ: ಜೀವನ ಪರಿಪೂರ್ಣ ಆಗಲು ದೇವರ ನಾಮಸ್ಮರಣೆ ಮಾಡಿ ವಿಶ್ವಾಸದಿಂದ ಉತ್ತಮ ಕಾರ್ಯ ಮಾಡಬೇಕು. ಈ ರೀತಿಯಿಂದ ಜೀವನ ಸಾಗಿದರೆ ದೈವತ್ವ ಅರಿವಾಗುತ್ತದೆ ಎಂದು ಹೊನ್ನಾವರ ತಾಲೂಕು ಕರ್ಕಿ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಸಂಸ್ಥಾನ ದೈವಜ್ಞ ಬ್ರಾಹ್ಮಣ ಮಠಾಧೀಶ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಸ್ವಾಮೀಜಿ ಹೇಳಿದರು.
ಪಟ್ಟಣದ ಶ್ರೀಬನಶಂಕರಿ ದೇಗುಲದ ಸಮುದಾಯ ಭವನದಲ್ಲಿ ಶನಿವಾರ ತಾಲೂಕು ದೈವಜ್ಞ ಬ್ರಾಹ್ಮಣ ಸಮಾಜದಿಂದ ಹಮ್ಮಿಕೊಂಡಿದ್ದ ದೈವಜ್ಞ ದರ್ಶನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ವೈಯಕ್ತಿಕ ಬದುಕಿನ ಜತೆಗೆ ಸಾಮಾಜಿಕ, ಶೈಕ್ಷಣಿಕವಾಗಿ ಸಮಾಜದ ಶ್ರೇಯೋಭಿವೃದ್ಧಿ, ಸಂಸ್ಕೃತಿ ಸಂರಕ್ಷಣೆ, ಆಧ್ಯಾತ್ಮಿಕ ಬೆಳವಣಿಗೆ ಮತ್ತು ಸಾಮರಸ್ಯ ಮೂಡಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಪಾಶ್ಚಿಮಾತ್ಯ ಸಂಸ್ಕೃತಿಯ ಮೋಹದಲ್ಲಿ ನಮ್ಮ ಸಂಸ್ಕೃತಿಯನ್ನು ಬಿಡಬಾರದು. ಮಕ್ಕಳಿಗೆ ಸನಾತನ ಧರ್ಮದ ಸಂಸ್ಕಾರ ನೀಡುವ ಹೊಣೆ ಪಾಲಕರದೆ ಎಂದರು.
ಕಿರಿಯ ಸುಜ್ಞಾನೇಶ್ವರ ಭಾರತೀ ಸ್ವಾಮೀಜಿ ಮಾತನಾಡಿ, ಸನಾತನ ಧರ್ಮವು ಬದುಕಿನಲ್ಲಿ ಹೇಗೆ ನಡೆಯಬೇಕು ಎಂಬುದನ್ನು ಮಾರ್ಗದರ್ಶನ ಮಾಡುತ್ತದೆ. ವಿನಯದಿಂದ ತಲೆಬಾಗಿ ಬದುಕುವವರು ಭಾಗ್ಯವಂತರಾಗುತ್ತಾರೆ. ಸತ್ಯ, ಪ್ರೀತಿ, ವಿಧೇಯತೆಯಿಂದ ಧರ್ಮದ ಹಾದಿಯಲ್ಲಿ ಜೀವನ ನಡೆಸುವವರಿಗೆ ಪ್ರಪಂಚದಲ್ಲಿ ಗೌರವ ದೊರೆಯುತ್ತದೆ. ಅಂತವರು ದೇವರಿಗೂ ಪ್ರಿಯರಾಗುತ್ತಾರೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ನ್ಯಾಮತಿ ದೈವಜ್ಞ ಬ್ರಾಹ್ಮಣ ಸಮಾಜದ ಅಧ್ಯಕ್ಷ ಪ್ರಶಾಂತ್ ಚಂದ್ರಹಾಸ್ ರಾಯ್ಕರ್ ಮಾತನಾಡಿ, ಸಮಾಜದಲ್ಲಿ ಒಗ್ಗಟ್ಟು ಮೂಡಿಸುವ ನಿಟ್ಟಿನಲ್ಲಿ ಶ್ರೀಗಳ ಮಾರ್ಗದರ್ಶನದಲ್ಲಿ ದೈವಜ್ಞ ದರ್ಶನ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು.
ಸಮಾಜದ ಉಪಾಧ್ಯಕ್ಷ ರತ್ನಾಕರ್ ಗೋವಿಂದ್ ರಾಯ್ಕರ್, ಸಹ ಕಾರ್ಯದರ್ಶಿ ಡಾ. ನಾಗರಾಜ್ ರಾಮಕೃಷ್ಣ ಅನ್ವೇಕರ್, ಕಾರ್ಯದರ್ಶಿ ವಿನಾಯಕ್ ದಾಮೋದರ್ ರಾಯ್ಕರ್, ಶಾಂತರಾಜ ರೇವಣಕರ್, ಗಜಾನನ ಆರ್. ಶೇಟ್ ಮಾತನಾಡಿದರು.
ಇದೇ ವೇಳೆ ಸಮಾಜದ ಪಾರ್ವತಮ್ಮ ವೆಂಕಟೇಶ್ ರಾಯ್ಕರ್, ಲಕ್ಷ್ಮೀಬಾಯಿ ರತ್ನಕರ್ ಶೇಟ್, ಕಮಲಮ್ಮ ರಾಮಕೃಷ್ಣ ಅನ್ವೇಕರ್, ಸರೋಜಿನಮ್ಮ ಗೋಪಾಲ್ ರಾಯ್ಕರ್, ಅನುಸೂಯ ನಾಗೇಶ್ ಅನ್ವೇಕರ್, ದತ್ತಪ್ಪ ಗೋವಿಂದ ಅನ್ವೇಕರ್, ಲಲಿತಾ ದತ್ತಪ್ಪ ಅನ್ವೇಕರ್, ಮಂಜುನಾಥ ಶೇಟ್ ದೊಡ್ಡೇರಿ ಸೇರಿ ಇತರ ಹಿರಿಯರನ್ನು ಸನ್ಮಾನಿಸಲಾಯಿತು.
ನ್ಯಾಮತಿ ತಾಲೂಕು ದೈವಜ್ಞ ಬ್ರಾಹ್ಮಣ ಸಮಾಜದ ಮುಖಂಡರು, ಜ್ಞಾನೇಶ್ವರಿ ಮಹಿಳಾ ಮಂಡಳದ ಮಹಿಳಾ ಮುಖಂಡರು ಇತರರು ಇದ್ದರು. ಸಂಘದ ವತಿಯಿಂದ ಯತಿದ್ವಯರ ಪಾದಪೂಜೆ ನೆರವೇರಿಸಲಾಯಿತು.