educationಯಕ್ಕನಹಳ್ಳಿ ಮಾಯಾಂಬಿಕಾ ದೇವಿ ದೇವಸ್ಥಾನ ನೂತನ ಗೋಪುರದ ಕಲಶ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಈಶ್ವರಾನಂದಪುರಿ ಸ್ವಾಮೀಜಿ ಉದ್ಘಾಟಿಸಿದರು. ಕುಪ್ಪೆಲೂರು ಸಿದ್ದಾರೂಢ ಮಠದ ಪ್ರಿಯಾನಂದ ಸ್ವಾಮಿ, ಪರಮಹಂಸ ಮುರುಳೀಧರ ಸ್ವಾಮೀಜಿ, ಜಿ.ಬಿ. ವಿನಯ್‌ಕುಮಾರ್ ಇದ್ದರು. 
ದಾವಣಗೆರೆ

ಹಿಂದುಳಿದವರು ಶಿಕ್ಷಣಕ್ಕೆ ಒತ್ತು ನೀಡಲಿ education

ಹರ್ಷ ನ.ಪುರೋಹಿತ

ಪ್ರಮುಖ ಮುಖ್ಯಾಂಶಗಳು

  • ಈಶ್ವರಾನಂದಪುರಿ ಸ್ವಾಮೀಜಿ ಅಭಿಮತ
  • ಯಕ್ಕನಹಳ್ಳಿಯಲ್ಲಿ ಮಾಯಾಂಬಿಕಾ ದೇವಸ್ಥಾನದ ಕಲಶ ಪ್ರತಿಷ್ಠಾಪನೆ
  • ಬದಲಿಗೆ ಸಮಾಜಕ್ಕೆ ಉಪಯುಕ್ತವಾಗುವ ಉನ್ನತಮಟ್ಟದ ಶಿಕ್ಷಣ ಪಡೆಯುವುದು ಮುಖ್ಯ

ಹೊನ್ನಾಳಿ:"ದಲಿತಮತ್ತು ಹಿಂದುಳಿದ ಸಮುದಾಯಗಳುಮೂಢನಂಬಿಕೆ,ಕಂದಾಚಾರಗಳನ್ನುಕೈಬಿಟ್ಟು ವೈಚಾರಿಕತೆ ರೂಢಿಸಿಕೊಂಡುಶಿಕ್ಷಣದ ಕಡೆಗೆ ಗಮನಹರಿಸಿದರೆಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ"ಎಂದುಹೊಸದುರ್ಗ ಕೆಳೋಡು ಶಾಖಾಮಠದಈಶ್ವರಾನಂದಪುರಿ ಸ್ವಾಮೀಜಿಹೇಳಿದರು.education

ತಾಲೂಕಿನಯಕ್ಕನಹಳ್ಳಿ ಗ್ರಾಮದಲ್ಲಿ ಗುರುವಾರಗ್ರಾಮದ ಮಾಯಾಂಬಿಕಾ ದೇವಿ ದೇವಸ್ಥಾನದನೂತನ ಗೋಪುರದ ಕಲಶ ಪ್ರತಿಷ್ಠಾಪನೆಹಾಗೂ ದೇವಸ್ಥಾನದ ಮುಖಮಂಟಪದಮಹಾದ್ವಾರದ ಉದ್ಘಾಟನಾ ಸಮಾರಂಭಕ್ಕೆಚಾಲನೆ ನೀಡಿ ಅವರು ಮಾತನಾಡಿದರು.

"ನಾನುಕಂಡಂತೆ ಸಾಮಾನ್ಯವಾಗಿ ಹಾಲುಮತಸ್ಥರುತಮ್ಮ ಊರು,ಗ್ರಾಮಗಳಲ್ಲಿದೇವಸ್ಥಾನಗಳ ನಿರ್ಮಾಣದ ಕಡೆಗೆಹೆಚ್ಚು ಗಮನಹರಿಸುತ್ತಾರೆ.ಆದರೆ,ಅವರುಶಾಲಾ ಕಾಲೇಜುಗಳನ್ನು ನಿರ್ಮಿಸಿಕೊಳ್ಳುವಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ.ಇದೂಕೂಡ ಸಮಾಜ ಹಿಂದುಳಿಯಲು ಕಾರಣವಾಗಿದೆ,"ಎಂದುಹೇಳಿದರು.

"ಯಕ್ಕನಹಳ್ಳಿಗ್ರಾಮದಲ್ಲಿ ಯಾವುದೇ ಕಾರ್ಯಕ್ರಮಗಳನ್ನುನಡೆಸಿದರೂ ಕೂಡ ಇಲ್ಲಿ ಜಾತಿ,ಮತಭೇದವಿಲ್ಲದೆ ಎಲ್ಲರೂ ಕೂಡ ಒಗ್ಗೂಡಿಪರಸ್ಪರ ಪ್ರೀತಿ,ವಿಶ್ವಾಸಹಾಗೂ ಶಿಸ್ತಿನಿಂದ ಮಾಡುವುದುವಿಶೇಷ,"ಎಂದರು.

ಇನ್‌ಸೈಟ್ಸ್(Insights)ಸಂಸ್ಥಾಪಕಮತ್ತು ಸ್ವಾಭಿಮಾನ ಬಳಗದ ರಾಜ್ಯಾಧ್ಯಕ್ಷಜಿ.ಬಿ.ವಿನಯ್‌ಕುಮಾರ್ಮಾತನಾಡಿ,"ಕೇವಲಪದವಿ ಪಡೆಯುವುದು ಮುಖ್ಯವಲ್ಲ,ಬದಲಿಗೆಸಮಾಜಕ್ಕೆ ಉಪಯುಕ್ತವಾಗುವಉನ್ನತಮಟ್ಟದ ಶಿಕ್ಷಣ ಪಡೆಯುವುದುಮುಖ್ಯವಾಗುತ್ತದೆ,"ಎಂದುಹೇಳಿದರು.

"ಶಿಕ್ಷಣಕೇವಲ ಉಳ್ಳವರ ಪಾಲಾಗಬಾರದು,ಅದುಎಲ್ಲರ ಹಕ್ಕು,ಶಿಕ್ಷಣವನ್ನುಸಾಧಿಸಿ ಪಡೆಯಬೇಕು.ಸತತಪರಿಶ್ರಮ ಹಾಗೂ ಏಕಾಗ್ರತೆಯಿಂದಅಧ್ಯಯನ ಮಾಡಿದರೆ ಉನ್ನತ ಶಿಕ್ಷಣಪಡೆದು ಅಂದುಕೊಂಡಿದ್ದನ್ನುಸಾಧಿಸಬಹುದು.ದೇವಾಲಯದಜೊತೆಗೆ ಗ್ರಾಮದಲ್ಲಿ ಶಿಕ್ಷಣಕ್ಕೂಹೆಚ್ಚು ಆದ್ಯತೆ ನೀಡಿದರೆ ಆ ಗ್ರಾಮಅಭಿವೃದ್ಧಿ ಪಥದಲ್ಲಿ ಸಾಗುತ್ತದೆ,"ಎಂದರು.

ಸಾನ್ನಿಧ್ಯವಹಿಸಿದ್ದ ಕುಪ್ಪೆಲೂರು ಸಿದ್ದಾರೂಢಮಠದ ಪ್ರಿಯಾನಂದ ಸ್ವಾಮೀಜಿಮಾತನಾಡಿ,"ಪೂಜೆ,ಭಜನೆ,ಧ್ಯಾನಇವು ಭಗವಂತನ ಸಾಕ್ಷಾತ್ಕಾರಕ್ಕೆಸೋಪಾನಗಳಾಗಿವೆ,"ಎಂದರು.

ಚಂದ್ರಗಿರಿಮಠ ಹದಡಿ ಪರಮಹಂಸ ಮುರುಳೀಧರಸ್ವಾಮೀಜಿ ಮಾತನಾಡಿ,"ಗುಡಿಗುಂಡಾರಗಳ ಕಟ್ಟುವ ಜೊತೆಗೆ ಮಕ್ಕಳಶಿಕ್ಷಣಕ್ಕೆ ಹೆಚ್ಚು ಆದ್ಯತೆನೀಡಬೇಕು"ಎಂದರು.

ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿಅಧ್ಯಕ್ಷ ಎಚ್.ಬಿ.ಮಂಜಪ್ಪ,ಟಿಎಪಿಸಿಎಂಎಸ್(TAPCMS)ಅಧ್ಯಕ್ಷಮರುಳಸಿದ್ದಪ್ಪ,ಮುಖಂಡಜಗದೀಶ್,ಬಿ.ರುದ್ರಪ್ಪಮಾತನಾಡಿದರು.

ದೇವಸ್ಥಾನದನೂತನ ಗೋಪುರ,ಕಳಸಾರೋಹಣಅಂಗವಾಗಿ ನವೀನ್ ಒಡೆಯರ್ಪೌರೋಹಿತ್ಯದಲ್ಲಿ ವಿವಿಧ ಧಾರ್ಮಿಕಪೂಜಾ ಕಾರ್ಯಗಳು ನಡೆದವು.ಗ್ರಾಮಕ್ಕೆಆಗಮಿಸಿದ ಸ್ವಾಮೀಜಿಗಳನ್ನು ಹಾಗೂಗ್ರಾಮದ ದೇವರುಗಳನ್ನುಮಂಗಳವಾದ್ಯಗಳೊಂದಿಗೆ ಅದ್ದೂರಿಮೆರವಣಿಗೆ ನಡೆಸಲಾಯಿತು.ಭಕ್ತರಿಗೆಸಾಮೂಹಿಕ ಅನ್ನಸಂತರ್ಪಣೆ ನಡೆಯಿತು.

ಯಕ್ಕನಹಳ್ಳಿಹಾಗೂ ಅಕ್ಕಪಕ್ಕದ ಗ್ರಾಮಗಳಮುಖಂಡರು,ದೇವಸ್ಥಾನಸಮಿತಿಯವರು ಭಾಗವಹಿಸಿದ್ದರು.