ಚನ್ನಗಿರಿ ಬೈಪಾಸ್ ರಸ್ತೆಯ ಕೋಳಿ ಫಾರ್ಮ್ ಮೇಲೆ ಚಿರತೆ ದಾಳಿ ನಡೆಸಿದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. leopard 
ದಾವಣಗೆರೆ

ಫಾರ್ಮ್‌ಗೆ ನುಗ್ಗಿ 60 ಕೋಳಿ ತಿಂದ ಚಿರತೆ leopard

ಶೋಭಾ ಕೃಷ್ಣ ಗೌಡ

ಪ್ರಮುಖ ಮುಖ್ಯಾಂಶಗಳು

  • ಚನ್ನಗಿರಿ ಬೈಪಾಸ್ ರಸ್ತೆ ಬಳಿ ಘಟನೆ
  • ಬ್ಯಾಂಕ್ ಸಾಲ ಪಡೆದು ಬದುಕು ಕಟ್ಟಿಕೊಂಡ ಮಾಲೀಕ
  • ಅರಣ್ಯ ಇಲಾಖೆ ಅಧಿಕಾರಿಗಳಿಂದ ಪರಿಶೀಲನೆ
ಚನ್ನಗಿರಿ: ಪಟ್ಟಣದ ಹೊರವಲಯದ ಬೈಪಾಸ್ ರಸ್ತೆ ಪಕ್ಕದಲ್ಲಿರುವ ಕೋಳಿ ಫಾರ್ಮ್‌ಗೆ ಗುರುವಾರ ರಾತ್ರಿ ಚಿರತೆಯೊಂದು ನುಗ್ಗಿ 120 ಕೋಳಿಗಳನ್ನು ಕೊಂದು, 60 ಕೋಳಿಗಳನ್ನು ತಿಂದು ಹಾಕಿದೆ. leopard
ಪಟ್ಟಣದ ನಿವಾಸಿ ಮನೋಜ್ ಎಂಬುವವರು ಬ್ಯಾಂಕ್ ಸಾಲದ ನೆರವಿನೊಂದಿಗೆ 2025ರಲ್ಲಿ ಈ ಕುರಿ ಕೋಳಿ ಫಾರ್ಮ್ ಆರಂಭಿಸಿದ್ದರು. ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವ ಹಾದಿಯಲ್ಲಿದ್ದ ಅವರಿಗೆ ಈ ಘಟನೆ ಭಾರಿ ಆಘಾತ ತಂದಿದೆ.
ಇನ್ನೆರಡು ದಿನಗಳಲ್ಲಿ ಕೋಳಿಗಳನ್ನು ಮಾರಾಟ ಮಾಡುವ ಯೋಜನೆಯಲ್ಲಿದ್ದ ಮನೋಜ್, ಗುರುವಾರ ಸಂಜೆ ಆಹಾರ ನೀಡಿ ಮನೆಗೆ ತೆರಳಿದ್ದರು. ಆದರೆ, ರಾತ್ರಿ ವೇಳೆ ಚಿರತೆ ಫಾರ್ಮ್‌ಗೆ ನುಗ್ಗಿದೆ. 290 ಕೋಳಿಗಳಲ್ಲಿ ಕೆಲವನ್ನು ತಿಂದು ಹಾಕಿದೆ. ಶುಕ್ರವಾರ ಬೆಳಗ್ಗೆ ಮನೋಜ್ ಫಾರ್ಮ್‌ಗೆ ಬಂದಾಗ ಕೋಳಿಗಳು ಸತ್ತು ಬಿದ್ದಿರುವುದು ಕಂಡುಬಂದಿದೆ.
ಫಾರ್ಮ್‌ನ ಸುತ್ತಮುತ್ತ ಚಿರತೆಯ ಹೆಜ್ಜೆ ಗುರುತುಗಳು ಪತ್ತೆಯಾಗಿವೆ. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳದ ಪರಿಶೀಲನೆ ನಡೆಸಿದ್ದಾರೆ.
"

ಸ್ವಂತ ಉದ್ಯೋಗ ಮಾಡಬೇಕೆಂಬ ಕನಸಿನೊಂದಿಗೆ ಬಂಡವಾಳ ಹೂಡಿ ಫಾರ್ಮ್ ಮಾಡಿದ್ದೆ. ವ್ಯಾಪಾರ ಚೆನ್ನಾಗಿ ನಡೆಯುತ್ತಿತ್ತು. ಆದರೆ ಚಿರತೆ ದಾಳಿಯಿಂದಾಗಿ ಕೇವಲ 20 ಕೋಳಿಗಳು ಉಳಿದಿವೆ. ಅರಣ್ಯ ಇಲಾಖೆಯು ಸೂಕ್ತ ಪರಿಹಾರ ನೀಡಬೇಕು.

— ಮನೋಜ್, ಕೋಳಿ ಫಾರ್ಮ್ ಮಾಲೀಕ.