ದಾವಣಗೆರೆಯ ದೃಶ್ಯಕಲಾ ಮಹಾವಿದ್ಯಾಲಯದ ಕಲಾಗ್ಯಾಲರಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ, ಕಲಾವಿದ ಯು. ಅಶೋಕ ಅವರ ವರ್ಣ ವಿಕಾಸ ಚಿತ್ರಕಲಾ ಪ್ರದರ್ಶನದ ಕಲಾಕೃತಿಗಳನ್ನು ನಟ ಮಂಡ್ಯ ರಮೇಶ್ ವೀಕ್ಷಿಸಿದರು. ಡಾ. ಸತೀಶಕುಮಾರ ಪಿ. ವಲ್ಲೇಪುರೆ, ಎಸ್.ಜೆ. ಶ್ರೀಧರ್ ಇತರರಿದ್ದರು.
- ದಾವಣಗೆರೆಯಲ್ಲಿ ರಂಗಭೂಮಿ ಇನ್ನಷ್ಟು ವೃದ್ಧಿಸಲಿ
- ಶಿಬಿರಗಳ ಮೂಲಕ ಕಲೆಗಳನ್ನು ಉಳಿಸುವ ಕಾರ್ಯಕ್ಕೆ ಕೈಜೋಡಿಸಬೇಕಿದೆ
- ಕಲಾವಿದ ಅಶೋಕ ಅವರ ಚಿತ್ರಕಲಾ ಪ್ರದರ್ಶನ ಉದ್ಘಾಟನೆ
ದಾವಣಗೆರೆ: ಕರ್ನಾಟಕದ ಅಸ್ಮಿತೆಯಾದ ರಂಗಭೂಮಿ ಮತ್ತು ಜಾನಪದ ಕಲಾ ಪ್ರಕಾರಗಳ ಬಗ್ಗೆ ಯುವಜನರಲ್ಲಿ ಅಭಿರುಚಿ ಬೆಳೆಸಬೇಕು. ಈ ದಿಸೆಯಲ್ಲಿ ದಾವಣಗೆರೆಯ ದೃಶ್ಯಕಲಾ ಕಾಲೇಜಿನಲ್ಲಿ ಶಿಬಿರಗಳನ್ನು ಆಯೋಜಿಸಬೇಕು ಎಂದು ಖ್ಯಾತ ರಂಗಕರ್ಮಿ, ನಟ ಮಂಡ್ಯ ರಮೇಶ್ ಸಲಹೆ ನೀಡಿದರು.
ಅನ್ವೇಷಕರು ಆರ್ಟ್ ಫೌಂಡೇಷನ್ ಸಹಯೋಗದಲ್ಲಿ ಇಲ್ಲಿನ ದೃಶ್ಯಕಲಾ ಮಹಾವಿದ್ಯಾಲಯದ ಕಲಾಗ್ಯಾಲರಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ, ಕಲಾವಿದ ಯು. ಅಶೋಕ ಅವರ ವರ್ಣ ವಿಕಾಸಚಿತ್ರಕಲಾ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.