ಚನ್ನಗಿರಿ: ರಾಜ್ಯದ ಲಿಂಗಾಯತರಲ್ಲಿ ಸಂಘಟನೆ ಮನೋಭಾವ ಬೆಳೆಯುತ್ತಿದೆ. ಸರ್ಕಾರ ಲಿಂಗಾಯತ ಸ್ವತಂತ್ರ ಎಂಬ ಮಾನ್ಯತೆ ನೀಡದಿದ್ದರೂ ಕೂಡ ನಾವು ಸ್ವತಂತ್ರರೇ ಎಂಬುದನ್ನು ಮರೆಯಬೇಡಿ ಎಂದು ಸಾಣೆಹಳ್ಳಿ ಶಾಖಾಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಇಲ್ಲಿನ ಶ್ರೀ ಚನ್ನಾವ್ಮಾಜಿ ಸಮುದಾಯ ಭವನದಲ್ಲಿ ಶನಿವಾರ ಆಯೋಜಿಸಿದ್ದ ಸಾಧು ಲಿಂಗಾಯತ ಸವಾಜದ ಸಹಯೋಗದಲ್ಲಿ ಲಿಂಗಾಯಿತ ಧರ್ಮೀಯರ ಸವಾವೇಶ ಹಾಗೂ ಸವಾಜದ ಹಿರಿಯ ನಾಗರಿಕರಿಗೆ ಗೌರವ ಸಮರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಯಾವುದೇ ಸವಾವೇಶಗಳು ಜಾತಿ ಸಮ್ಮೇಳನಗಳಾಗಬಾರದು. ಲಿಂಗಾಯತ ಎನ್ನುವುದು ಜಾತಿಯಲ್ಲ. ಒಂದು ಧರ್ಮ, ಸಿದ್ಧಾಂತ, ತತ್ವಗಳಿಗೆ ಅನುಗುಣವಾಗಿ ನಡೆ ನುಡಿ ಇರುತ್ತದೆಯೋ ಅವರೇ ನಿಜವಾದ ಲಿಂಗಾಯತರು. ಇಂದು ಸವಾಜದಲ್ಲಿ ಜಾತಿ ಭೇದ ಹೋಗುತ್ತಿಲ್ಲ. ಎಲ್ಲರ ನಡುವೆ ನಮ್ಮವರು ಎನ್ನುವ ಗೋಡೆ ಕಟ್ಟುತ್ತ ಹೋದರೆ ಲಿಂಗಾಯತರು ಸಂಟನೆ ಅಗಲು ಸಾಧ್ಯವಿಲ್ಲ, ಬಸವಣ್ಣ ಹೇಳಿದಂತೆ ಎಲ್ಲರೂ ನಮ್ಮವರು ಎನ್ನುವ ಭಾವನೆ ಬರಬೇಕು. ಆಗ ವಾತ್ರ ಸಂಟಿತರಾಗಲು ಸಾಧ್ಯ ಎಂದರು.
ಇತರರ ಸುಖವನ್ನು ಬಯಸುವ, ಇತರರ ದುಃಖವನ್ನು ನಮ್ಮ ದುಃಖ ಎಂದು ಭಾವಿಸುವ ಮನೋಭಾವ ಬೆಳೆದಾಗ ಮಾತ್ರ ಸವಾವೇಶಗಳು ಅರ್ಥಪೂರ್ಣ ಅಗಲು ಸಾಧ್ಯ. 12ನೇ ಶತವಾನದಲ್ಲಿ ಬಸವಣ್ಣ ಪಂಚಾಚಾರ್ಯಗಳನ್ನು ನೀಡಿದ್ದಾರೆ. ಆದ್ದರಿಂದ ಲಿಂಗಾಯತರಾದವರು ಲಿಂಗಾಚಾರ, ಸದಾಚಾರ, ಶಿವಾಚಾರ, ಗಣಾಚಾರ ಮತ್ತು ಪ್ರತ್ಯಾಚಾರಗಳನ್ನು ಶುದ್ಧವಾಗಿ ನಡೆಸಿಕೊಂಡು ಬರಬೇಕು, ಲಿಂಗಧಾರಣೆ ವಾಡಿಸಿಕೊಂಡವರು ಬೇರೆ ದೇವರನ್ನು ಪೂಜಿಸುವುದರಲ್ಲಿ ಯಾವುದೇ ಅರ್ಥವಿಲ್ಲ . ಕಾಯಕ, ದಾಸೋಹ ಮತ್ತು ಇಷ್ಟಲಿಂಗ ಪೂಜೆಯನ್ನು ಪ್ರತಿಯೊಬ್ಬ ಲಿಂಗಧಾರಿ ಮಾಡಬೇಕು. ಮೋಸ ವಂಚನೆ ಮಾಡುವವರು ಎಂದಿಗೂ ಸದಾಚಾರಿಯಾಗಲು ಸಾಧ್ಯವಿಲ್ಲ ಎಂದರು.
ಅಂಗದ ಮೇಲೆ ಲಿಂಗ ಇಟ್ಟುಕೊಂಡು ನಿತ್ಯ ಪೂಜೆಯನ್ನು ವಾಡುವವರು ವಾತ್ರ ನೈಜ ಲಿಂಗಾಯತರಾಗಲು ಸಾಧ್ಯ, ಲಿಂಗಾಯತ ರಾದವರು ಲಿಂಗವನ್ನು ಧರಿಸಿ ಕೊಂಡು ದುಶ್ಚಟಗಳನ್ನು ಮಾಡಿದರೆ ಲಿಂಗ ಧರಿಸಿದ್ದು ವ್ಯರ್ಥಎಂದೇ ತಿಳಿಯಬೇಕು ಎಂದರು. 75 ವರ್ಷ ತುಂಬಿದ ಸಮಾಜದ ಹಿರಿಯರನ್ನು ಗೌರವಿಸಲಾಯಿತು. ಮಾಜಿ ಶಾಸಕ ಮಾಡಾಳು ವಿರುಪಾಕ್ಷಪ್ಪ, ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ವಡ್ನಾಳ್ ಜಗದೀಶ್, ತುಮ್ಕೋಸ್ ಅಧ್ಯಕ್ಷ ಎಚ್.ಎಸ್. ಶಿವಕುಮಾರ್, ತುಮ್‌ಕೋಸ್ ವಾಜಿ ಅಧ್ಯಕ್ಷ ಆರ್.ಎಂ.ರವಿ, ಚಂದ್ರಪ್ಪ ಮತ್ತಿತರರು ಇದ್ದರು.
ಮಠಾಧಿಪತಿಗಳು ಮಾಡಬೇಕಾದ ಕೆಲಸವನ್ನು ಲಿಂಗಾಯತ ಸವಾಜವಾಡಲು ಮುಂದಾಗಿರುವುದು ಪ್ರಶಂಸನೀಯ. ಸವಾಜ ಸಂಪತ್ತಿನಿಂದ ಆಗಬಾರದು. ಸಂಸ್ಕಾರದಿಂದ ಆಗಬೇಕು, ಸಂಸ್ಕಾರವಂತ ಸವಾಜದಲ್ಲಿ ವಾನವೀಯ ಕಾಳಜಿ ಇರುವಂಥ ಸವಾಜ ನಿರ್ವಾಣ ಅಗಲು ಸಾಧ್ಯ ಎಂದು ಪಾಂಡೋಮಟ್ಟಿ ವಿರಕ್ತಮಠದ ಡಾ.ಶ್ರೀ ಗುರುಬಸವ ಮಹಾಸ್ವಾಮೀಜಿ ಹೇಳಿದರು. ಗ್ರಾಮೀಣ ಭಾಗದಲ್ಲಿ ಯಾವುದೇ ಸುದ್ದಿಗಳು ಬಹುಬೇಗನೇ ಪ್ರಚಾರ ಪಡೆಯುತ್ತವೆ. ಆದರೆ ಪಟ್ಟಣ ಪ್ರದೇಶಗಳಲ್ಲಿ ಪಡೆಯುವುದಿಲ್ಲ . ಇಂತಹ ಸಂಟನೆಗಳ ಮೂಲಕ ಸವಾಜದ ಕಷ್ಟಸುಖದ ಸಂಗತಿಗಳು ತಿಳಿಯುವಂಥ ಕೆಲಸ ಆಗಲಿದೆ ಎಂದರು. ಇತ್ತೀಚಿನ ದಿನದಲ್ಲಿ ಯುವಜನತೆ ದಾರಿತಪ್ಪುತ್ತಿದೆ. ಅವರ ಸರಿದಾರಿಗೆ ತರುವಂತ ಕೆಲಸ ಸವಾಜದಿಂದ ನಡೆಯಬೇಕು, ಪ್ರತಿಯೊಬ್ಬರೂ ಲಿಂಗಧಾರಣೆಯನ್ನು ವಾಡಿಸಿಕೊಂಡು ಜೀವನದ ಕೊನೆಯವರೆಗೆ ಇಟ್ಟುಕೊಂಡು ಪೂಜಿಸುವ ಕೆಲಸ ನಡೆಯಬೇಕು ಎಂದರು.
ಲಿಂಗಾಯತರ ಸಂಖ್ಯೆ ಪಟ್ಟಣದಲ್ಲಿ ಕಡಿಮೆ ಇತ್ತು. ಆದರೆ ಇಂದು ಅಧಿಕವಾಗುತ್ತಿದೆ. ಸವಾಜ ಶೈಕ್ಷಣಿಕ, ಸಾವಾಜಿಕ ಹಾಗೂ ರಾಜಕೀಯವಾಗಿ ಮುಂದೆ ಬರಬೇಕು. ಸಿಕ್ಕ ಅವಕಾಶಗಳನ್ನು ಬಳಕೆ ಮಾಡಿಕೊಂಡು ಬೆಳೆಯಬೇಕು. ನಾವೆಲ್ಲರೂ ಒಂದೇ ಎನ್ನುವ ಭಾವನೆ ಎಲ್ಲರಲ್ಲಿ ಮೂಡಬೇಕು.ಮಾಡಾಳು ವಿರೂಪಾಕ್ಷಪ್ಪ ಮಾಜಿ ಶಾಸಕ
ಲಿಂಗಾಯತರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದೇವೆ, ಆದರೆ ಸಂಟನೆ ಇರಲಿಲ್ಲ. ಸಮಾಜದ ಏಳಿಗೆಗಾಗಿ ಸಂಟಿತರಾಗಬೇಕಿದೆ. ಸಹಕಾರ ಹಣದ ರೂಪದಲ್ಲೇ ಇರಬೇಕು ಎಂಬುದೇನೂ ಇಲ್ಲ. ಪ್ರೋತ್ಸಾಹ ನೀಡಿದರೆ ಸಾಕು.ವಡ್ನಾಳ್ ಜಗದೀಶ್, ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ
ಸವಾಜದಲ್ಲಿ ಯಾವುದಾದರೂ ಲಾಭವಿದೆ ಎಂದರೆ ಎಲ್ಲರೂ ಮುಂದೆ ಬರುತ್ತಾರೆ,ಇಲ್ಲದಿದ್ದರೆ ಸುಮ್ಮನಿರುತ್ತಾರೆ. ಯಾವುದೇ ಸಂ ಸ್ಪಷ್ಟ ಗುರಿ ಇಟ್ಟುಕೊಂಡು ನಡೆದರೆ ಯಶಸ್ಸು ಖಂಡಿತವಾಗಿ ಸಿಗುತ್ತದೆ. ಇಂದು ಎಲ್ಲವೂ ವ್ಯಾಪಾರೀಕರಣ ಆಗುತ್ತಿರುವುದು ಉತ್ತಮ ಬೆಳವಣಿಗೆ ಅಲ್ಲ.ಎಚ್.ಎಸ್.ಶಿವಕುವಾರ್, ತುಮ್‌ಕೋಸ್ ಅಧ್ಯಕ್ಷ