ದಾವಣಗೆರೆ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಭಾನುವಾರ ಫೈನಲ್ ಪಂದ್ಯ ಗೆದ್ದು ಚಾಂಪಿಯನ್ ಆದ ಇಮ್ಮಡಿ ಪುಲಿಕೇಶಿ ತಂಡದ ಆಟಗಾರರು ಟ್ರೋಫಿಯೊಂದಿಗೆ ಸಂಭ್ರಮಿಸಿದರು.Pulikeshi 
ದಾವಣಗೆರೆ

ಆಲ್ರೌಂಡ್ ಪ್ರದರ್ಶನದಿಂದ ಇಮ್ಮಡಿ ಪುಲಿಕೇಶಿ ಚಾಂಪಿಯನ್ Pulikeshi

ಪ್ರಮುಖ ಮುಖ್ಯಾಂಶಗಳು

  • ವರದಿಗಾರರ ಕೂಟದ ಸೌಹಾರ್ದ ಕ್ರಿಕೆಟ್ ಪಂದ್ಯಾವಳಿ
  • ಅಮೋಘವರ್ಷ ನೃಪತುಂಗ ರನ್ನರ್ ಅಪ್
  • ಇಮ್ಮಡಿ ಪುಲಿಕೇಶಿ 8 ವಿಕೆಟ್‌ಗಳಿಂದ ಜಯಭೇರಿ
ದಾವಣಗೆರೆ: ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಅತ್ಯದ್ಭುತ ಪ್ರದರ್ಶನ ತೋರಿದ ಇಮ್ಮಡಿ ಪುಲಿಕೇಶಿ ತಂಡ, ಅಮೋಘವರ್ಷ ನೃಪತುಂಗ ವಿರುದ್ಧ 8 ವಿಕೆಟ್‌ಗಳಿಂದ ಜಯಭೇರಿ ಬಾರಿಸಿ ಪಂದ್ಯಾವಳಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತು. ಅಮೋಘವರ್ಷ ರನ್ನರ್ ಅಪ್ ಆಯಿತು. 
ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ 2ನೇ ದಿನವಾದ ಭಾನುವಾರ ವರದಿಗಾರರ ಕೂಟದಿಂದ ಆಯೋಜಿಸಿದ್ದ ಸೌಹಾರ್ದ ಕ್ರಿಕೆಟ್ ಟೂರ್ನಿಯ ಫೈನಲ್ ಹಣಾಹಣಿಯಲ್ಲಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಇಮ್ಮಡಿ ಪುಲಿಕೇಶಿ ತಂಡ ಉತ್ತಮ ಬೌಲಿಂಗ್ ದಾಳಿ ಮೂಲಕ ಗಮನಸೆಳೆಯಿತು.
ಇಮ್ಮಡಿ ಪುಲಿಕೇಶಿ ತಂಡ ಬೌಲಿಂಗ್‌ನಲ್ಲಿ ಬಿಗಿಯಾಗಿದ್ರೂ ಎದುರಾಳಿ ತಂಡಕ್ಕೆ ಅನಗತ್ಯ ರನ್‌ಗಳನ್ನು ಬಿಟ್ಟುಕೊಟ್ಟಿದ್ದರ ಪರಿಣಾಮ ತಂಡಕ್ಕೆ ಸವಾಲಿನ ಗುರಿ ದೊರೆಯಿತು. ಅಮೋಘವರ್ಷ ತಂಡದ ಪರ ಹನುಮಂತ (14), ಬದ್ರಿನಾಥ್ (09) ರನ್‌ಗಳಿಸಿದರು. 
ಉತ್ತಮ ಗುರಿ ಬೆನ್ನಟ್ಟಿದ ಇಮ್ಮಡಿ ಪುಲಿಕೇಶಿ ತಂಡ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು. ಆದರೂ ನಂತರದ ಓವರ್‌ಗಳಲ್ಲಿ ಬೌಂಡರಿಗಳನ್ನು ಬಾರಿಸುವ ಮೂಲಕ ಸುಸ್ಥಿತಿಗೆ ತಲುಪಿತು. ಅಮೋಘವರ್ಷ ತಂಡದ ಬೌಲರ್‌ಗಳು ವೈಡ್ ಹಾಗೂ ನೋಬಾಲ್‌ಗಳಿಂದ ಹೆಚ್ಚುವರಿ ರನ್‌ಗಳನ್ನು ಬಿಟ್ಟುಕೊಟ್ಟರು.
ಇಮ್ಮಡಿ ಪುಲಿಕೇಶಿ ತಂಡದ ಆರಂಭಿಕ ಬ್ಯಾಟ್ಸಮನ್ ಶಿವಕುಮಾರ್ (ಅಜೇಯ 29) ರನ್‌ಗಳಿಸುವ ಮೂಲಕ ತಂಡಕ್ಕೆ ಅತ್ಯದ್ಭುತ ಗೆಲುವು ತಂದಕೊಟ್ಟರು. 

ಮಯೂರಕ್ಕೆ 3ನೇ ಸ್ಥಾನ 

ಲೀಗ್ ಹಂತದಲ್ಲಿ ಮೂರು ಪಂದ್ಯಗಳಲ್ಲಿ ಸೋಲು ಕಂಡಿದ್ದ ಮಯೂರ ತಂಡ, ಟೂರ್ನಿಯ ಕೊನೆಯ ದಿನ ನಡೆದ 3ನೇ ಸ್ಥಾನದ ಪಂದ್ಯದಲ್ಲಿ ಮದಕರಿ ವಿರುದ್ಧ ಮಯೂರ ತಂಡ 9 ವಿಕೆಟ್‌ಗಳ ಗೆಲುವು ಸಾಧಿಸಿತು. 
ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಮದಕರಿ ತಂಡ 5 ಓವರ್‌ಗಳಲ್ಲಿ 39 ರನ್‌ಗಳ ಸವಾಲಿನ ಗುರಿ ಪೇರಿಸಿತು. ನಾಗರಾಜ್ ಹಾಗೂ ಮಧು ನಾಗರಾಜ್ ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ಗೆಲುವು ಸಾಧಿಸಿ 3ನೇ ಸ್ಥಾನ ಪಡೆಯಿತು. ಮದಕರಿ ತಂಡ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟಿತು. 

ಪೊಲೀಸ್ ತಂಡಕ್ಕೆ ಪ್ರಶಸ್ತಿ

ಭಾನುವಾರ ಹಮ್ಮಿಕೊಂಡಿದ್ದ ಅಫೀಶಿಯಲ್ ಕಪ್ ಪಂದ್ಯದಲ್ಲಿ ಜಿಲ್ಲಾ ಪೊಲೀಸ್ ತಂಡ, ಪ್ರೆಸ್ ಅಧ್ಯಕ್ಷರ ಇಲೆವೆನ್ ವಿರುದ್ಧ 10 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು. ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಪ್ರೆಸ್ ಅಧ್ಯಕ್ಷರ ಇಲೆವೆನ್ ತಂಡ, ಪೊಲೀಸ್ ತಂಡದ ಬಿಗುವಿನ ದಾಳಿಗೆ ಸಿಲುಕಿ ಪೆವಿಲಿಯನ್ ಪರೇಡ್ ನಡೆಸಿತು. 
ಹನುಮಂತ ಹಾಗೂ ಪರಶುರಾಮ್ ಅವರ ಸಮಯೋಚಿತ ಆಟದ ನೆರವಿನಿಂದ 6 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 23 ರನ್‌ಗಳ ಸಾಧಾರಣ ಮೊತ್ತ ದಾಖಲಿಸಿತು.
ಅಲ್ಪ ಗುರಿ ಬೆನ್ನತ್ತಿದ ಪೊಲೀಸ್ ತಂಡ ಆರಂಭಿಕ ಆಟಗಾರರಾದ ಸಂಜೀವ್ ಹಾಗೂ ಪ್ರಕಾಶ್ ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ವಿಕೆಟ್ ನಷ್ಟವಿಲ್ಲದೇ 1.3 ಓವರ್‌ಗಳಲ್ಲಿ 24 ರನ್‌ಗಳಿಸುವ ಮೂಲಕ ಜಯದ ನಗೆ ಬೀರಿತು. 
ಸ್ಕೋರ್ ವಿವರ
ಅಮೋಘವರ್ಷ ನೃಪತುಂಗ 6 ಓವರ್‌ಗಳಲ್ಲಿ 47/4
(ಹನುಮಂತ 14, ಬದ್ರಿನಾಥ್ 09)
ಇಮ್ಮಡಿ ಪುಲಿಕೇಶಿ 4.5 ಓವರ್‌ಗಳಲ್ಲಿ 2/48
(ಶಿವಕುಮಾರ್ 29 ಅಜೇಯ, ಮಹೇಶ್ 05)