ಹೊನ್ನಾಳಿಯಲ್ಲಿ ಮಾಜಿ ಶಾಸಕ ಎಂ.ಪ. ರೇಣುಕಾಚಾರ್ಯ ಶುಕ್ರವಾರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದರು. ಎಂ.ಎಸ್. ಫಾಲಾಕ್ಷಪ್ಪ, ಅರಕೆರೆ ನಾಗರಾಜ್, ಜೆ.ಕೆ. ಸುರೇಶ್, ಕೆ.ವಿ. ಶ್ರೀಧರ್ ಇತರರು ಇದ್ದರು.press conference 
ದಾವಣಗೆರೆ

ಅವಹೇಳನ ಮುಂದುವರಿಸಿದರೆ ತಕ್ಕ ಪಾಠ press conference

ಶೋಭಾ ಕೃಷ್ಣ ಗೌಡ

ಪ್ರಮುಖ ಮುಖ್ಯಾಂಶಗಳು

  • ಮಾಜಿ ಸಚಿವ ರೇಣುಕಾಚಾರ್ಯ ಎಚ್ಚರಿಕೆ
  • ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ವಿರುದ್ಧ ಗರಂ
ಹೊನ್ನಾಳಿ: ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ. ಮಂಜಪ್ಪ ಪದೇ ಪದೆ ನನ್ನ ಬಗ್ಗೆ ಅವಹೇಳಕಾರಿಯಾಗಿ ಮಾತನಾಡುವುದನ್ನು ಮುಂದುವರಿಸಿದರೆ ತಕ್ಕಪಾಠ ಕಲಿಸಬೇಕಾ ಗುತ್ತದೆ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.
ಮುಂದಿನ ದಿನಗಳಲ್ಲಿ ರೇಣುಕಾಚಾರ್ಯ ಎಲ್ಲಿ ಸಭೆ ನಡೆಸುತ್ತಾರೋ ಅಲ್ಲಿ ನುಗ್ಗಿ ಹೊಡೆಯುತ್ತೇನೆ ಎಂದು ಹೇಳಿದ್ದಾರೆ. ನೀವು ಹೊಡೆಯುವಾಗ ನಾವು ಸುಮ್ಮನೆ ಕೂರುತ್ತಿವಾ? ನ್ನ ವಿರುದ್ಧ ಮತ್ತೆ ನಾಲಿಗೆ ಹರಿಬಿಟ್ಟರೆ ಕಾರ್ಯಕರ್ತರು ತಕ್ಕ ಉತ್ತರ ನೀಡುತ್ತಾರೆ ಹುಷಾರ್ ಎಂದರು.
ಹೊನ್ನಾಳಿ-ನ್ಯಾಮತಿ ತಾಲೂಕಿ ನಾದ್ಯಂತ 250 ಹಾಸಿಗೆಗಳ ಆಸ್ಪತ್ರೆ, ಕೆರೆಗಳಿಗೆ ನೀರು ತುಂಬಿ ಸುವ ಕಾಮಗಾರಿ, ಚತುಷ್ಪಥ ರಸ್ತೆಗಳು, ಸಿಸಿ ರಸ್ತೆ, ಶಾಲಾ- ಕಾಲೇಜು ಸೇರಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ಮುಂದೆಯೂ ಮಾಡುತ್ತೇನೆ. ತಾಲೂಕಿಗೆ ನಿಮ್ಮ ಕೊಡುಗೆ ಏನೆಂದು ಮತದಾರರಿಗೆ ತಿಳಿಸಿ ಎಂದರು.
ನನಗೆ ಸಾಮಾಜಿಕ ಜಾಲತಾಣದ ಹುಚ್ಚು ಎಂದಿದ್ದೀರಿ. ಹೌದು ನನಗೆ ಎಲ್ಲ ಸಾಮಾಜಿಕ ಜಾಲ ತಾಣಗಳಲ್ಲಿ ಅಭಿಮಾನಿಗಳಿದ್ದಾರೆ. ಅದನ್ನು ಕೇಳಲು ನೀವ್ಯಾರು ಎಂದು ಪ್ರಶ್ನಿಸಿದ ಅವರು, ಪದೇ ಪದೆ ಹೊಡಿತಿನಿ, ಬಡಿತಿನಿ, ಕೊರಳಪಟ್ಟಿಗೆ ಕೈಹಾಕಿ ಎಳೆಯುತ್ತೇನೆ ಎಂದು ದಮ್ಕಿ ಹಾಕಿದರೆ ಇಲ್ಯಾರು ಕೇಳಿಸಿಕೊಂಡು ಸುಮ್ಮನೆ ಕೂರುವವರಿಲ್ಲ. ತಾಲೂಕಿನ ಜನತೆ ನಮಗೆ ಶಕ್ತಿ ಕೊಟ್ಟಿದ್ದಾರೆ ಎಂದು ಹರಿಹಾಯ್ದರು.
ಜಿ.ಪಂ.ಚುನಾವಣೆಯಲ್ಲಿ ನನ್ನ ಸೊಸೆ ಸೋತಿದ್ದು ಕೆಲವೇ ಮತಗಳ ಅಂತರದಿಂದ. ಸೋಲು - ಗೆಲುವನ್ನು ಸಮನಾಗಿ ಸ್ವೀಕರಿಸುವ ಗುಣ ನಮಗಿದೆ. ಮಾಜಿ ಶಾಸಕರಾದ ಎಚ್.ಬಿ. ಕೃಷ್ಣಮೂರ್ತಿ ಹಾಗೂ ಡಾ.ಬಿ. ಗಂಗಪ್ಪ ಅವರನ್ನು ನಾವು ಗೌರವದಿಂದ ಕಂಡಿದ್ದೇವೆ, ಅದನ್ನು ನಿಮ್ಮಿಂದ ಕಲಿಯಬೇಕಿಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ಕುರುಬ ಸಮಾಜದ ತಾಲೂಕಾಧ್ಯಕ್ಷ ಎಂ.ಎಸ್. ಫಾಲಾಕ್ಷಪ್ಪ, ಬಿಜೆಪಿ ತಾಲೂಕಾಧ್ಯಕ್ಷ ಅರಕೆರೆ ನಾಗರಾಜ್, ಮಾಜಿ ಅಧ್ಯಕ್ಷ ಜೆ.ಕೆ. ಸುರೇಶ್, ಪುರಸಭಾ ಮಾಜಿ ಅಧ್ಯಕ್ಷರಾದ ಕೆ.ವಿ. ಶ್ರೀಧರ್, ಬಾಬು ಹೋಬಳದಾರ್, ರಂಗಪ್ಪ, ಮುಖಂಡರಾದ ಎಸ್.ಎಸ್. ಬೀರಪ್ಪ, ನೆಲಹೊನ್ನೆ ಮಂಜುನಾಥ್, ಮಹೇಶ್ ಹುಡೇದ್, ಇತರರು ಇದ್ದರು.