harihar ಭದ್ರಾ ಕಾಲುವೆಯಲ್ಲಿ ಹೆಚ್ಚುವರಿ ದಿನ ನೀರನ್ನು ಹರಿಸುವಂತೆ ಸಚಿವ ಮಧು ಬಂಗಾರಪ್ಪಗೆ ಶನಿವಾರ ತಾಲೂಕು ರೈತ ಮುಖಂಡರು ಮನವಿ ಸಲ್ಲಿಸಿದರು. ನಂದಿಗಾವಿ ಶ್ರೀನಿವಾಸ್, ಕೆ. ಹನುಮಂತಪ್ಪ ಇತರರಿದ್ದರು. 
ದಾವಣಗೆರೆ

ಭದ್ರಾ ಕಾಲುವೆಗೆ ನೀರು ಹರಿಸಲು ಹರಿಹರ ತಾಲೂಕು ರೈತರ ಮನವಿ harihar

ಪ್ರಮುಖ ಮುಖ್ಯಾಂಶಗಳು

  • ಒತ್ತಾಯಕ್ಕೆ ಮಣಿದ ಶಿವಮೊಗ್ಗ ಉಸ್ತುವಾರಿ ಸಚಿವರು
  • ಸಚಿವರಿಗೆ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ನಂದಿಗಾವಿ ಶ್ರೀನಿವಾಸ್ ಮನವರಿಕೆ
  • ಮೇ 25ರವರೆಗೆ ನೀರು ಹರಿಸಿದರೆ ಅನುಕೂಲ

ಹರಿಹರ: ಮೇ 25ರವರೆಗೆ ಭದ್ರಾ ಕಾಲುವೆಗೆ ನೀರು ಬಿಡುವಂತೆ ತಾಲೂಕಿನ ರೈತರ ಮನವಿಗೆ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ನಂದಿಗಾವಿ ಶ್ರೀನಿವಾಸ್ ತಿಳಿಸಿದ್ದಾರೆ. harihar

ಶನಿವಾರ ಶಿವಮೊಗ್ಗ ಜಿಲ್ಲೆಯ ಸೊರಬದ ಆನವಟ್ಟಿ ಸಮೀಪದ ಸಮನಹಳ್ಳಿಯಲ್ಲಿ ಸಚಿವರನ್ನು ತಾಲೂಕಿನ ರೈತ ಮುಖಂಡರೊಂದಿಗೆ ಭೇಟಿ ಮಾಡಿ ಅವರು ಮನವಿ ಸಲ್ಲಿಸಿದರು.

"ತಾಲೂಕಿನ ಕೊನೆ ಭಾಗದ ಗ್ರಾಮಗಳಾದ ಭಾನುವಳ್ಳಿ, ಕಮಲಾಪುರ ಸೇರಿ ಇತರ ಗ್ರಾಮಗಳ ಭದ್ರಾ ಅಚ್ಚುಕಟ್ಟು ಪ್ರದೇಶದ ಜಮೀನುಗಳ ಭತ್ತದ ಬೆಳೆಗೆ ನೀರಿನ ಅವಶ್ಯಕತೆಯಿದೆ. ವೇಳಾಪಟ್ಟಿಯಂತೆ ಮೇ 17ಕ್ಕೆ ನೀರು ಹರಿಸುವುದನ್ನು ನಿಲುಗಡೆ ಮಾಡಿದರೆ ರೈತರು ಸಂಕಷ್ಟಕ್ಕೆ ಸಿಲುಕುತ್ತಾರೆ. ಮೇ 25ರವರೆಗೆ ನೀರು ಹರಿಸಿದರೆ ಅನುಕೂಲವಾಗುತ್ತದೆ" ಎಂದು ರೈತರು ಸಚಿವರಿಗೆ ಮನವರಿಕೆ ಮಾಡಿದರು.

ರೈತರ ಮನವಿಗೆ ಸ್ಪಂದಿಸಿದ ಸಚಿವರು, "ಅಧಿಕಾರಿಗಳು ಹಾಗೂ ಕಾಡಾ (CADA) ಸದಸ್ಯರೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು" ಎಂದು ಅಭಯ ನೀಡಿದರು.

ಈ ವೇಳೆ ಭಾನುವಳ್ಳಿ ಮಾಜಿ ಗ್ರಾಪಂ ಅಧ್ಯಕ್ಷ ಕೆ. ಹನುಮಂತಪ್ಪ, ಭಾಸ್ಕರ್ ರಾವ್ ಕ್ಯಾಂಪಿನ ಕರಿಬಸಪ್ಪ, ಭಾನುವಳ್ಳಿ ಹಣಚಿಕ್ಕಿ ನಾರಾಯಣಪ್ಪ, ಕೆ. ಪ್ರಶಾಂತ್ ಹಾಗೂ ರೈತರು ಉಪಸ್ಥಿತರಿದ್ದರು.