ದಾವಣಗೆರೆಯ ಜಯದೇವ ವೃತ್ತದಲ್ಲಿರುವ ಶ್ರೀ ಶಿವಾನಂದ ತೀರ್ಥ ಗುರು ಅಧ್ಯಾತ್ಮ ಮಂದಿರದಲ್ಲಿ ಶ್ರೀ ದತ್ತಾತ್ರೇಯ ಸ್ವಾಮಿಯ 40ನೇ ವಾರ್ಷಿಕೋತ್ಸವ ಅಂಗವಾಗಿ ಏರ್ಪಾಡಾಗಿದ್ದ ಹನುಮದ್ ವ್ರತ ಸಮಾರೋಪದಲ್ಲಿ ಸೇವಾಕರ್ತರಾದ ಆರ್.ಜಿ. ನಾಗೇಂದ್ರ ಪ್ರಕಾಶ್, ಆರ್.ಜಿ. ದತ್ತರಾಜ್, ರಾಜನಹಳ್ಳಿ ಹರಿಹರಪ್ಪ ಟ್ರಸ್ಟಿನ ಎಚ್. ಶ್ರೀಧರ ಶ್ರೇಷ್ಠಿ, ಶಿವರಾಮ ಶ್ರೇಷ್ಠಿ ಭಾಗವಹಿಸಿದ್ದರು. 
ದಾವಣಗೆರೆ

ಜಿಲ್ಲೆಯಲ್ಲಿ ಹನುಮದ್ ವ್ರತ ಆಚರಣೆ

ರಮೇಶ ಜಹಗೀರದಾರ್

ಪ್ರಮುಖ ಮುಖ್ಯಾಂಶಗಳು

  • ಆಂಜನೇಯ ದೇಗುಲಗಳಲ್ಲಿ ವಿಶೇಷ ಅಲಂಕಾರ
  • ವಿಶೇಷ ಧಾರ್ಮಿಕ ಕಾರ್ಯಕ್ರಮ
  • ದರ್ಶನ ಪಡೆದ ಭಕ್ತರು
ದಾವಣಗೆರೆ : ಹನುಮದ್ ವ್ರತದ ಅಂಗವಾಗಿ ಮಂಗಳವಾರ ಜಿಲ್ಲೆಯ ಆಂಜನೇಯ ಸ್ವಾಮಿ ದೇವಸ್ಥಾನಗಳಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು.
ಬೆಳಗ್ಗೆ ಪಂಚಾಮೃತ ಅಭಿಷೇಕ, ಕ್ಷೀರಾಭಿಷೇಕ ಮಾಡಲಾಯಿತು. ಫಲ ನೈವೇದ್ಯ, ಮಹಾ ಮಂಗಳಾರತಿ ಮಾಡಲಾಯಿತು. ಭಕ್ತರು ದೇಗುಲಗಳಿಗೆ ಭೇಟಿ ನೀಡಿ ಆಂಜನೇಯ ಸ್ವಾಮಿಯ ದರ್ಶನ ಪಡೆದರು.
ನಗರದ ಆಂಜನೇಯ ಬಡಾವಣೆಯ ಆಂಜನೇಯ ದೇವಸ್ಥಾನದಲ್ಲಿ ಸ್ವಾಮಿಯ ಮೂರ್ತಿಗೆ ಬೆಣ್ಣೆ ಹಾಗೂ ವೀಳ್ಯದೆಲೆಗಳಿಂದ ಹಾಗೂ ಪುಷ್ಪಗಳಿಂದ ವಿಶೇಷ ಅಲಂಕಾರ ಮಾಡಲಾಗಿತ್ತು.
ಶಾಮನೂರು ಆಂಜನೇಯ ದೇವಸ್ಥಾನದಲ್ಲೂ ಮೂರ್ತಿಗೆ ಹೂವು ಹಾಗೂ ಎಲೆಗಳಿಂದ ಅಲಂಕಾರ ಮಾಡಲಾಗಿತ್ತು. ಗ್ರಾಮದ ದೇವಸ್ಥಾನಕ್ಕೆ ಭೇಟಿ ನೀಡಿದ ಭಕ್ತರು ಸ್ವಾಮಿಯ ದರ್ಶನ ಪಡೆದರು.
ನಗರದ ಜಯದೇವ ವೃತ್ತದಲ್ಲಿರುವ ಶ್ರೀ ಶಿವಾನಂದ ತೀರ್ಥ ಗುರು ಅಧ್ಯಾತ್ಮ ಮಂದಿರದಲ್ಲಿ ಶ್ರೀ ದತ್ತಾತ್ರೇಯ ಸ್ವಾಮಿಯ 40ನೇ ವಾರ್ಷಿಕೋತ್ಸವ ಅಂಗವಾಗಿ ಏರ್ಪಾಡಾಗಿದ್ದ ಹನುಮದ್ ವ್ರತ ಸಮಾರೋಪದಲ್ಲಿ ಸೇವಾಕರ್ತರಾದ ಆರ್.ಜಿ. ನಾಗೇಂದ್ರ ಪ್ರಕಾಶ್, ಆರ್.ಜಿ. ದತ್ತರಾಜ್, ರಾಜನಹಳ್ಳಿ ಹರಿಹರಪ್ಪ ಟ್ರಸ್ಟಿನ ಎಚ್. ಶ್ರೀಧರ ಶ್ರೇಷ್ಠಿ, ಶಿವರಾಮ ಶ್ರೇಷ್ಠಿ, ವಿಶೇಷ ಆಹ್ವಾನಿತರಾಗಿ ಹಿರಿಯ ಪತ್ರಕರ್ತ ಡಾ. ಎಚ್.ಬಿ. ಮಂಜುನಾಥ ಭಾಗವಹಿಸಿದ್ದರು.