rape 
ದಾವಣಗೆರೆ

ಬಾಲಕಿ ಮೇಲೆ ಅತ್ಯಾಚಾರ, ಆರೋಪಿ ಬಂಧನ rape

ಶೋಭಾ ಕೃಷ್ಣ ಗೌಡ

ಪ್ರಮುಖ ಮುಖ್ಯಾಂಶಗಳು

  • ಹೊಟ್ಟೆನೋವಿನಿಂದ ಬಳಲುತ್ತಿದ್ದ ಅಪ್ರಾಪ್ತೆ
  • ದೆವ್ವದ ಗಾಳಿ ಸೋಕಿದೆ ಎಂದು ದೇವಸ್ಥಾನಕ್ಕೆ ಅಲೆಯುತ್ತಿದ್ದ ಪಾಲಕರು
  • ಗಂಡು ಮಗವಿಗೆ ಜನ್ಮ
ಜಗಳೂರು: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದ ಆರೋಪಿಯನ್ನು ಜಗಳೂರು ಪೊಲೀಸರು ಭಾನುವಾರ ಬಂಧಿಸಿದ್ದಾರೆ.
16 ವರ್ಷದ ಬಾಲಕಿ ಕಳೆದ ಕೆಲವು ತಿಂಗಳಿಂದ ಕೈಕಾಲು ಬಾವು ಹಾಗೂ ತೀವ್ರ ಹೊಟ್ಟೆನೋವಿನಿಂದ ಬಳಲುತ್ತಿದ್ದಳು. ಆದರೆ, ಮೂಢನಂಬಿಕೆಗೆ ಒಳಗಾದ ಆಕೆಯ ಪಾಲಕರು ಮಗಳಿಗೆ ಯಾವುದೋ ದೆವ್ವದ ಗಾಳಿ ಸೋಕಿದೆ ಎಂದು ಭಾವಿಸಿ ಉಕ್ಕಡಗಾತ್ರಿ ಹಾಗೂ ನಾಯಕನಹಟ್ಟಿ ಬಳಿಯ ಬೋಸದೇವರಹಟ್ಟಿ ದೇವಾಲಯಗಳಿಗೆ ಅಲೆದಿದ್ದಾರೆ.
ನಾಯಕನಹಟ್ಟಿಯ ಅಜ್ಜಯ್ಯನ ಗುಡಿಗೆ ಬಂದಾಗ ಬಾಲಕಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಕೂಡಲೇ ಆಕೆಯನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಿದಾಗ, ಆಕೆ ಗರ್ಭಿಣಿ ಎಂದು ವೈದ್ಯರು ಹೇಳಿದ್ದಾರೆ. ಪೊಲೀಸರಿಗೆ ಮಾಹಿತಿ ನೀಡುವಷ್ಟರಲ್ಲೇ ಸಂಜೆ ಆಕೆ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ.
ನಂತರ ಪಾಲಕರು ವಿಚಾರಿಸಿದಾಗ ಕಾಮುಕನ ಅಸಲಿ ಮುಖವಾಡ ಕಳಚಿ ಬಿದ್ದಿದೆ. ಪಾಲಕರ ಹೊಲಕ್ಕೆ ಉಳುಮೆ ಮಾಡಲು ಬರುತ್ತಿದ್ದ ಆರೋಪಿ, ಬಾಲಕಿಯೊಂದಿಗೆ ಮೊಬೈಲ್‌ನಲ್ಲಿ ನಿಕಟ ಸಂಪರ್ಕ ಬೆಳೆಸಿಕೊಂಡಿದ್ದ. 2025ರ ಆಗಸ್ಟ್- ಸೆಪ್ಟೆಂಬರ್ ಅವಧಿಯಲ್ಲಿ ಗ್ರಾಮದ ಹಳ್ಳದ ಪೊದೆಯ ಬಳಿ ಬಾಲಕಿಯನ್ನು ಕರೆದೊಯ್ದು, ನಿನ್ನನ್ನು ಪ್ರೀತಿಸುತ್ತೇನೆ, ಮದುವೆಯಾಗುತ್ತೇನೆ ಎಂದು ನಂಬಿಸಿ ಬಲವಂತದ ದೈಹಿಕ ಸಂಪರ್ಕ ಬೆಳೆಸಿದ್ದ. ಪೊಲೀಸರಿಗೆ ದೂರು ನೀಡದಂತೆ ಹೆದರಿಸಿದ್ದರಿಂದ ಬಾಲಕಿ ಈ ವಿಷಯವನ್ನು ಮುಚ್ಚಿಟ್ಟಿದ್ದಳು ಎನ್ನಲಾಗಿದೆ.
ಬಾಲಕಿಯ ತಂದೆ ನೀಡಿದ ದೂರನ್ನು ಆಧರಿಸಿ ಜಗಳೂರು ಪೊಲೀಸರು ಆರೋಪಿಯ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಿದ್ದರು.