ಚನ್ನಗಿರಿ ದೇವರಹಳ್ಳಿಯಲ್ಲಿ ಜ್ಞಾನ ವಿಕಾಸ ಸದಸ್ಯ ಮಹಿಳೆಯರಿಗೆ ಉಚಿತ ಹೊಲಿಗೆ ತರಬೇತಿ ಶಿಬಿರ ಉದ್ಘಾಟಿಸಲಾಯಿತು. ಕಮಲಾಕ್ಷ, ಕೆ. ಸಂತೋಷ್, ಮಂಜುನಾಥ್, ಶಶಿಕಲಾ, ಕೆ.ಎಸ್. ರಾಜು ಇದ್ದರು. free 
ದಾವಣಗೆರೆ

ಸ್ವಾವಲಂಬನೆಯ ಬದುಕಿಗೆ ಉಚಿತ ಹೊಲಿಗೆ ತರಬೇತಿ free

ಚಂದನ ವಿ ಎಂ

ಪ್ರಮುಖ ಮುಖ್ಯಾಂಶಗಳು

  • ಯೋಜನೆ ಜಿಲ್ಲಾ ನಿರ್ದೇಶಕ ಕಮಲಾಕ್ಷ ಮಾಹಿತಿ
ಚನ್ನಗಿರಿ: ಧರ್ಮಸ್ಥಳ ಗ್ರಾವಾಭಿವೃದ್ಧಿ ಯೋಜನೆಯಿಂದ ನಿರುದ್ಯೋಗಿ ಮಹಿಳೆಯರಿಗೆ ಸ್ವಾವಲಂಬನೆಯ ಬದುಕು ಕಟ್ಟಿಕೊಳ್ಳಲು ಉಚಿತ ಹೊಲಿಗೆ ತರಬೇತಿಯನ್ನು ನೀಡಲಾಗುತ್ತಿದ್ದು ಅದರ ಪ್ರಯೋಜನ ಪಡೆಯಿರಿ ಎಂದು ಯೋಜನೆ ಜಿಲ್ಲಾ ನಿರ್ದೇಶಕ ಕಮಲಾಕ್ಷ ತಿಳಿಸಿದರು. free
ಚನ್ನಗಿರಿ ತಾಲೂಕು ದೇವರಹಳ್ಳಿಯಲ್ಲಿ ಶುಕ್ರವಾರ ಧರ್ಮಸ್ಥಳ ಗ್ರಾವಾಭಿವೃದ್ದಿ ಯೋಜನೆಯಿಂದ ಜ್ಞಾನ ವಿಕಾಸ ಸದಸ್ಯ ಮಹಿಳೆಯರಿಗೆ ಉಚಿತ ಹೊಲಿಗೆ ತರಬೇತಿ ಶಿಬಿರ ಉದ್ಘಾಟಿಸಿ ವಾತನಾಡಿದರು. ಇತ್ತೀಚಿನ ದಿನಗಳಲ್ಲಿ ಟೈಲರಿಂಗ್ ಕೆಲಸಕ್ಕೆ ಹೆಚ್ಚಿನ ಬೇಡಿಕೆ ಇದೆ ಹಾಗೂ ಸ್ವಯಂ ಉದ್ಯೋಗ ವಾಡಿಕೊಳ್ಳಬಹುದು. ಒಬ್ಬರ ದುಡಿಮೆಯಿಂದ ಮನೆ ನಡೆಸುವುದು ಕಷ್ಟವಾಗಬಹುದು, ಅದಕ್ಕಾಗಿ ಕೆಲಸ ಕಲಿತಲ್ಲಿ ಕುಟುಂಬ ನಿರ್ವಹಣೆ, ಆರ್ಥಿಕ ಸಬಲತೆ ಸಾಧ್ಯ ವಾಗಲಿದೆ ಎಂದರು.
ಧರ್ಮಸ್ಥಳ ಸಂಘದಿಂದ ಮೂರು ತಿಂಗಳ ಉಚಿತ ಹೊಲಿಗೆ ಯಂತ್ರ ತರಬೇತಿಯನ್ನು ನೀಡಲಾಗುತ್ತದೆ. ತರಬೇತಿಯಲ್ಲಿ ವಿವಿಧ ಶೈಲಿಯ ಉಡುವು ತಯಾರಿ, ವಿನ್ಯಾಸಗಳ ಬಗ್ಗೆ ಹೇಳಿಕೊಡಲಾಗುತ್ತದೆ. ಸಂಸ್ಥೆಯಿಂದ ದಂಪತಿಗಳಿಗೆ ಒಂದು ವರ್ಷದ ಆರೋಗ್ಯ ಕಾರ್ಡ್ ನೀಡಲಾಗುತ್ತದೆ. ಇದರಿಂದ ಸಂಸ್ಥೆ ನೋಂದಾಯಿತ ಆಸ್ಪತ್ರೆಯಲ್ಲಿ ರೂ. 20 ಸಾವಿರದವರೆಗೆ ಚಿಕಿತ್ಸೆ ಪಡೆಯಬಹುದು ಎಂದರು. ಸಂತೇಬೆನ್ನೂರು ಯೋಜನಾಧಿಕಾರಿ ಕೆ. ಸಂತೋಷ್, ಸಂಪನ್ಮೂಲ ವ್ಯಕ್ತಿ ಮಂಜುನಾಥ್, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಶಶಿಕಲಾ, ವಿವಾ ಸಮನ್ವಯಾಧಿಕಾರಿ ಕೆ.ಎಸ್. ರಾಜು, ಸೇವಾ ಪ್ರತಿನಿಧಿ ಚೇತನಾ, ತರಬೇತಿ ಶಿಕ್ಷಕಿ ಮಂಜುಳಾ ಇತರರು ಇದ್ದರು.