ದಾವಣಗೆರೆಯ ಜಿ.ಎಂ. ವಿಶ್ವವಿದ್ಯಾಲಯಕ್ಕೆ ಇತ್ತೀಚೆಗೆ ಆಫ್ರಿಕಾ ಖಂಡದ ವಿವಿಧ ದೇಶಗಳ ಉನ್ನತ ಮಟ್ಟದ ಶೈಕ್ಷಣಿಕ ನಿಯೋಗ ಭೇಟಿ ನೀಡಿತ್ತು. ಡಾ. ಎಸ್.ಆರ್. ಶಂಕಪಾಲ್, ಡಾ. ಎಂ. ವೇಣುಗೋಪಾಲ್ ರಾವ್, ಡಾ. ಸುನೀಲ್ ಕುಮಾರ್ ಬಿ.ಎಸ್. ಇದ್ದರು.
- ಕ್ಯಾಂಪಸ್ ಸುತ್ತು ಹಾಕಿ ಸೌಲಭ್ಯ ವೀಕ್ಷಣೆ
- ವಿದೇಶಿ ಅಧಿಕಾರಿಗಳೊಂದಿಗೆ ಸಂವಾದ
ದಾವಣಗೆರೆ : ನಗರದ ಜಿ.ಎಂ. ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಆಫ್ರಿಕಾ ದಿನದ ಸಮ್ಮೇಳನ’ದ ಅಂಗವಾಗಿ ಆಫ್ರಿಕಾ ಖಂಡದ ವಿವಿಧ ದೇಶಗಳ ಉನ್ನತ ಮಟ್ಟದ ಶೈಕ್ಷಣಿಕ ನಿಯೋಗ ಹಾಗೂ ರಾಯಭಾರ ಕಚೇರಿಯ ಅಧಿಕಾರಿಗಳು ಇತ್ತೀಚೆಗೆ ವಿವಿ ಕ್ಯಾಂಪಸ್‌ಗೆ ಭೇಟಿ ನೀಡಿದ್ದರು.
ನವದೆಹಲಿಯಲ್ಲಿರುವ ಕೀನ್ಯಾ ರಾಯಭಾರ ಕಚೇರಿಯ ಉನ್ನತ ಶಿಕ್ಷಣ ಅಧಿಕಾರಿ ನ್ಗೆಟಿಚ್ ರಾಚೆಲ್ ನೇತೃತ್ವದ ನಿಯೋಗದಲ್ಲಿ ಸಂಘಟಕರಾದ ಡಾ. ಬೋಯಿಟ್ ಜೋಶುವಾ ಸೇರಿ ಕೀನ್ಯಾ, ನಮೀಬಿಯಾ, ಉಗಾಂಡಾ, ಇಥಿಯೋಪಿಯಾ, ಘಾನಾ, ಮಲಾವಿ ಹಾಗೂ ಗ್ಯಾಂಬಿಯಾ ದೇಶಗಳ ಪ್ರಮುಖ ಪ್ರತಿನಿಧಿಗಳು ಮತ್ತು ರಾಯಭಾರ ಕಚೇರಿಯ ಅಧಿಕಾರಿಗಳು ಭಾಗವಹಿಸಿದ್ದರು.
ವಿದೇಶಿ ಪ್ರತಿನಿಧಿಗಳು ಕ್ಯಾಂಪಸ್ ಸುತ್ತು ಹಾಕಿ ಸೌಲಭ್ಯಗಳನ್ನು ವೀಕ್ಷಿಸಿದರು. ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯದಲ್ಲಿ ಲಭ್ಯವಿರುವ ಜಾಗತಿಕ ಮಟ್ಟದ ಮೂಲಸೌಕರ್ಯಗಳು, ಅತ್ಯಾಧುನಿಕ ಪ್ರಯೋಗಾಲಯಗಳು, ಸುಸಜ್ಜಿತ ಗ್ರಂಥಾಲಯ ಮತ್ತು ಇಲ್ಲಿನ ಪರಿಸರಸ್ನೇಹಿ ಶೈಕ್ಷಣಿಕ ವಾತಾವರಣದ ಕುರಿತು ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದರು. ಭೇಟಿಯ ವೇಳೆ ಜಿಎಂಯು ಕ್ಯಾಂಪಸ್‌ನ ಶೈಕ್ಷಣಿಕ ಗುಣಮಟ್ಟ ಹಾಗೂ ಇಲ್ಲಿನ ವೈವಿಧ್ಯಮಯ ಕೋರ್ಸ್‌ಗಳ ಕುರಿತು ವಿದೇಶಿ ಪ್ರತಿನಿಧಿಗಳಿಗೆ ಮಾಹಿತಿ ನೀಡಲಾಯಿತು.
ನಿಯೋಗದ ಸದಸ್ಯರನ್ನು ಜಿ.ಎಂ. ವಿಶ್ವವಿದ್ಯಾಲಯದ ಕುಲಾಧಿಪತಿ ಜಿ.ಎಂ. ಲಿಂಗರಾಜು, ಕುಲಪತಿ ಡಾ. ಎಸ್.ಆರ್. ಶಂಕಪಾಲ್, ಉಪ ಕುಲಪತಿ ಡಾ. ಎಂ. ವೇಣುಗೋಪಾಲ್ ರಾವ್ ಹಾಗೂ ಕುಲಸಚಿವ ಡಾ. ಸುನೀಲ್ ಕುಮಾರ್ ಬಿ.ಎಸ್ ಬರಮಾಡಿಕೊಂಡರು.
ಜಿ.ಎಂ.ಯು ಅಂತಾರಾಷ್ಟ್ರೀಯ ಕಚೇರಿಯ ಉನ್ನತ ಅಧ್ಯಯನ ಸಂಯೋಜಕರಾದ ಮೊಹಮ್ಮದ್ ಯೂಸುಫ್ ಮಲಿಕ್ ದಮಾನಿ, ಆಕಾಶ್ ಪಟೇಲ್ ಎಂ.ಪಿ. ಹಾಗೂ ಡಾ. ಮಹಮ್ಮದ್ ಯಾಸೀನ್, ಉನ್ನತ ಅಧ್ಯಯನ ಸಂಯೋಜಕರು ಮತ್ತು ಜಿ.ಎಂ.ಐ.ಪಿ.ಎಸ್.ಆರ್ ಪ್ರಾಚಾರ್ಯರು ಹಾಗೂ ಅಂತಾರಾಷ್ಟ್ರೀಯ ಕಚೇರಿಯ ನಿರ್ದೇಶಕ ಡಾ. ಗಿರೀಶ್ ಬೋಳಕಟ್ಟಿ ಇದ್ದರು.
ವಿಶ್ವವಿದ್ಯಾಲಯದ ವಿವಿಧ ವಿಭಾಗಗಳ ಡೀನ್‌ಗಳು, ನಿರ್ದೇಶಕರು, ವಿಭಾಗೀಯ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕರು ವಿದೇಶಿ ಅಧಿಕಾರಿಗಳೊಂದಿಗೆ ಸಂವಾದ ನಡೆಸಿದರು.