ಜಗಳೂರು ತಾಲೂಕು ಕಚೇರಿಯಲ್ಲಿ ಶುಕ್ರವಾರ ಅಧಿಕಾರಿಗಳು, ವರ್ತಕರ ಗೈರು ವಿರೋಧಿಸಿ ರೈತರು ಪ್ರತಿಭಟನೆ ನಡೆಸಿದರು. ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಶ್ವೇತಾ, ರೈತ ಸಂದ ಜಿಲ್ಲಾಧ್ಯಕ್ಷ ಗುಮ್ಮನೂರು ಬಸವರಾಜ್, ತಾಲೂಕು ಅಧ್ಯಕ್ಷ ಭರಮಸಮುದ್ರ ಕುವಾರ್, ಗೌರಿಪುರ ಸತ್ಯಮೂರ್ತಿ ಇತರರು ಇದ್ದರು. Farmer
- ಅಧಿಕಾರಿಗಳು, ವರ್ತಕರ ಗೈರಿಗೆ ಕೃಷಿಕರ ಆಕ್ರೋಶ
- ಪಟ್ಟು ಹಿಡಿದ ಹೋರಾಟಗಾರರು
ಜಗಳೂರು: ರೈತರು ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಬಿತ್ತನೆ ಬೀಜ, ರಸಗೊಬ್ಬರ ಬೆಲೆ ಏರಿಕೆ ಖಂಡನೀಯ. ಜೆಡಿ, ಎಡಿ, ಎಸಿ, ತಹಸೀಲ್ದಾರ್, ರಸಗೊಬ್ಬರ ವಾರಾಟಗಾರರು ಕಡ್ಡಾಯವಾಗಿ ಸಭೆಯಲ್ಲಿ ಭಾಗವಹಿಸಬೇಕು. ಅಲ್ಲಿಯವರೆಗೆ ಸಭೆ ರದ್ದುಪಡಿಸಿ ಎಂದು ರೈತ ಹೋರಾಟಗಾರರು ಪಟ್ಟುಹಿಡಿದರು. Farmer
ಪಟ್ಟಣದ ತಾಲೂಕು ಕಚೇರಿಯಲ್ಲಿ ಶುಕ್ರವಾರ ಬಿತ್ತನೆ ಬೀಜ, ರಸಗೊಬ್ಬರ ವಾರಾಟಗಾರರು ಹಾಗೂ ರೈತರ ಕುಂದುಕೊರತೆ ಸಭೆ ಆಯೋಜಿಸಲಾಗಿತ್ತು. ಆದರೆ, ಸಭೆಯಲ್ಲಿ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಎಡಿಗಳು ಹಾಗೂ ಕೆಲ ವರ್ತಕರು ಮಾತ್ರ ಭಾಗವಹಿಸಿದ್ದು ರೈತರ ಆಕ್ರೋಶಕ್ಕೆ ಕಾರಣವಾಯಿತು.
ಕೃಷಿ ಚಟುವಟಿಕೆಗಳು ಚುರುಕುಗೊಂಡಿದೆ. ಜೂನ್ ಮೊದಲ ವಾರದಲ್ಲಿ ಬಿತ್ತನೆ ಕಾರ್ಯ ಆರಂಭವಾಗುತ್ತದೆ. ಇಷ್ಟರಲ್ಲೇ ರೈತರ ಹಾಗೂ ಗೊಬ್ಬರ ಮಾರಾಟಗಾರರ ಸಭೆ ಕರೆಯಬೇಕಿತ್ತು. ಈಗ ನೆಪಮಾತ್ರಕ್ಕೆ ಸಭೆ ನಡೆಸಲಾಗುತ್ತಿದೆ ಎಂದು ಆರೋಪಿಸಿದರು.
ರೈತ ಸಂದ ತಾಲೂಕು ಅಧ್ಯಕ್ಷ ಭರಮಸಮುದ್ರ ಕುವಾರ್ ವಾತನಾಡಿ, ತಾಲೂಕಿನಾದ್ಯಂತ 54 ಸಾವಿರ ಹೆಕ್ಟರ್‌ನಲ್ಲಿ ಮೆಕ್ಕೆಜೋಳ, ರಾಗಿ ವಿವಿಧ ಬೆಳೆ ಬೆಳೆಯಲಾಗುತ್ತದೆ ಎಂದು ತಿಳಿಸಿದರು.
ಮುಂಗಾರು ವೇಳೆ ಅಗತ್ಯ ಬಿತ್ತನೆ ಬೀಜ, ರಸಗೊಬ್ಬರ ಪೂರೈಸಿದರೆ ಸಮಸ್ಯೆ ಇರುವುದಿಲ್ಲ. ಕಡ್ಡಾಯವಾಗಿ ಎಲ್ಲ ರೈತರಿಗೆ ಕಂಪ್ಯೂಟರ್ ರಸೀದಿ ನೀಡಬೇಕು. ನ್ಯಾನೋ ಯೂರಿಯಾ ಖರೀದಿ ಕಡ್ಡಾಯ ಮಾಡಬಾರದು ಎಂದರು.
ರೈತ ಸಂದ ಜಿಲ್ಲಾಧ್ಯಕ್ಷ ಗುಮ್ಮನೂರು ಬಸವರಾಜ್ ವಾತನಾಡಿ, ಅಧಿಕಾರಿಗಳು ರೈತರ ಸಮಸ್ಯೆ ಆಲಿಸಬೇಕು. ಬೆಲೆ ಏರಿಕೆ ಇಳಿಸಿ ಸರಿಯಾಗಿ ಗೊಬ್ಬರ, ಬಿತ್ತನೆ ಬೀಜ ವಿತರಿಸಬೇಕು ಎಂದು ಆಗ್ರಹಿಸಿದರು.
ಸಭೆಯಿಂದ ಹೊರ ನಡೆದ ರೈತರು: ರೈತರು, ವಿವಿಧ ಸಂಟನೆಗಳು ಹೋರಾಟಗಾರರ ಸಭೆಗಳಲ್ಲಿ ತಹಸೀಲ್ದಾರ್ ಹಾಗೂ ಅಧಿಕಾರಿ ವರ್ಗ ಭಾಗಿಯಾಗುವುದಿಲ್ಲ. ರೈತರ ಸಮಸ್ಯೆಗಳನ್ನು ಯಾರ ಬಳಿ ಕೇಳಬೇಕು? ಅಧಿಕಾರಿಗಳೇ ಇಲ್ಲವೆಂದ ಮೇಲೆ ರೈತರು, ಹೋರಾಟಗಾರರಿಗೆ ಏನು ಪ್ರಯೋಜನ? ಸಭೆಯನ್ನು ರದ್ದುಗೊಳಿಸಿ ಎಂದು ಹೋರಾಟಗಾರ ಗೌರಿಪುರ ಸತ್ಯಮೂರ್ತಿ ಧ್ವನಿ ಎತ್ತಿದಾಕ್ಷಣ ರೈತರು ಸಭೆಯಿಂದ ಹೊರ ನಡೆದರು.
ಬಿತ್ತನೆ ಬೀಜ ಮತ್ತು ರಸಗೊಬ್ಬರ ವಾರಾಟಗಾರರ ಸಂದ ಅಧ್ಯಕ್ಷ ಕೆಚ್ಚೇನಹಳ್ಳಿ ಸಿದ್ದೇಶ್, ಬಿದರಕೆರೆ ವೀರೇಶ್, ಜ್ಯೋತಿ, ನಾಗರಾಜ್, ನವೀನ್‌ಕುವಾರ್, ಬಸ್ತಿಹಳ್ಳಿ ಬಸವರಾಜ್, ರೈತ ಮುಖಂಡರಾದ ದೊಣೆಹಳ್ಳಿ ಲೋಕೇಶ್, ವಕೀಲ ಆರ್. ಓಬಳೇಶ್, ಕಿರಣ್‌ಕುಮಾರ್, ಪಾಲನಾಯಕ, ಸಕ್ರೇಶ್, ಸೂರಪ್ಪ, ಭೀಮೇಶ್, ಕುಬೇರಪ್ಪ ಇತರರು ಇದ್ದರು.
ಬಿತ್ತನೆ ಬೀಜ ಮತ್ತು ಯೂರಿಯಾ ಕೊರತೆ ಇಲ್ಲ: ರೈತರನ್ನು ನಿರ್ಲಕ್ಷ್ಯದಿಂದ ಕಾಣುವುದಿಲ್ಲ. ರೈತರಿಗೆ ಸಮಸ್ಯೆಯಾಗದಂತೆ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುವುದು. ತಾಂತ್ರಿಕ ತೊಂದರೆಯಿಂದ ಕಳೆದ ಬಾರಿ ಯೂರಿಯಾ ಗೊಬ್ಬರ ವಿತರಣೆಯಲ್ಲಿ ವ್ಯತ್ಯಾಸವಾಗಿತ್ತು. ಆದರೆ, ಈಗ ಕಳೆದೊಂದು ತಿಂಗಳಿಂದ ಶೇ.60-70ರಷ್ಟು ರೈತರು ಬಿತ್ತನೆ ಬೀಜ ಮತ್ತು ಯೂರಿಯಾ ದಾಸ್ತಾನು ವಾಡಿದ್ದಾರೆ. ಉಳಿದವರಿಗೆ ಯೂರಿಯಾ ಬೇಕಾಗಿದೆ. ರೈತರು ಸಹಕರಿಸಿ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಶ್ವೇತಾ ಮನವಿ ವಾಡಿದರು.
ತಾಲೂಕು ಕಚೇರಿ ಗೇಟ್ ಮುಚ್ಚಿ ಪ್ರತಿಭಟನೆ: ರೈತರ ಸಂಟನೆ, ದಲಿತ ಸಂಟನೆ ಸೇರಿ ವಿವಿಧ ಸಂಟನೆಗಳ ಮುಖಂಡರು ತಾಲೂಕು ಕಚೇರಿ ಗೇಟ್ ಮುಚ್ಚಿ ಅಧಿಕಾರಿಗಳ ವಿರುದ್ಧ ೋಷಣೆ ಕೂಗಿ ಪ್ರತಿಭಟಿಸಿದರು. ರೈತರನ್ನು ನಿರ್ಲಕ್ಷ್ಯದಿಂದ ಕಾಣವ ಅಧಿಕಾರಿಗಳನ್ನು ವರ್ಗ ಮಾಡಿ ಇಲ್ಲ ಅಮಾನತು ಮಾಡಿ ಎಂದು ಒತ್ತಾಯಿಸಿದರು.
ತಹಸೀಲ್ದಾರ್ ಸೈಯದ್ ಕಲೀಂವುಲ್ಲಾ ಪ್ರತಿಭಟನಾ ನಿರತರನ್ನು ಸಂತೈಸುವ ಪ್ರಯತ್ನ ಮಾಡಿ ಮೇ 26ರಂದು ಸಭೆ ಕರೆಯಲಾಗುವುದು. ಜೆಡಿ ಗಮನಕ್ಕೆ ತರುವಂತೆ ಕೃಷಿ ಎಡಿ ಶ್ವೇತಾಗೆ ಸೂಚಿಸಿದರು.