ಹೊನ್ನಾಳಿ ಜೆಎಂಎಫ್ ನ್ಯಾಯಾಲಯದಲ್ಲಿ ಪರಿಸರ ದಿನಾಚರಣೆ ನಿಮಿತ್ತ ಸಸಿ ನಡೆವ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ನ್ಯಾಯಾಧೀಶ ಮಂಜುನಾಥ ಬಣಕಾರ್ ಮಾತನಾಡಿದರು. ಎಂ. ಗುಡ್ಡಪ್ಪ, ಶಾಂತವೀರಪ್ಪ, ಬಿಇಒ ಕೆ.ಟಿ. ನಿಂಗಪ್ಪ, ಬಿಆರ್‌ಸಿ ತಿಪ್ಪೇಶಪ್ಪ, ತಹಸೀಲ್ದಾರ್ ಕವಿರಾಜ್ ಇದ್ದರು. Environment 
ದಾವಣಗೆರೆ

ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ

ಚಂದನ ವಿ ಎಂ

ಪ್ರಮುಖ ಮುಖ್ಯಾಂಶಗಳು

  • ನ್ಯಾ. ಮಂಜುನಾಥ ಬಣಕಾರ್ ಅಭಿಮತ
  • ಪರಿಸರ ದಿನಾಚರಣೆ ಪೂರ್ವಭಾವಿ ಸಭೆ
ಹೊನ್ನಾಳಿ: ಪರಿಸರ ಸಮತೋಲನ ಕಾಪಾಡದಿದ್ದರೆ ಮುಂದಿನ ಪೀಳಿಗೆ ಅನೇಕ ನೈಸರ್ಗಿಕ ಅಪಾಯ ಎದುರಿಸಬೇಕಾಗುತ್ತದೆ ಎಂದು ಹೊನ್ನಾಳಿ ಜೆಎಂಎಫ್‌ಸಿ ನ್ಯಾಯಾಧೀಶ ಮಂಜುನಾಥ ಬಣಕಾರ್ ಹೇಳಿದರು. Environment
ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಬುಧವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಪರಿಸರ ಸಂರಕ್ಷಣೆ ಅರಣ್ಯ ಇಲಾಖೆ ಕೆಲಸ, ಸಸಿ ನೆಡುವುದು, ಅದರ ಕಾಳಜಿ ವಹಿಸುವುದು ಅರಣ್ಯ ಇಲಾಖೆಗೆ ಸಂಬಂಧಿಸಿದ್ದು ಎಂದು ಸುಮ್ಮನಾದರೆ ಭವಿಷ್ಯದಲ್ಲಿ ಉತ್ತಮ ಆರೋಗ್ಯ ಹೊಂದಲು ಕಷ್ಟ ಪಡಬೇಕಾಗುತ್ತದೆ ಎಂದರು.
ಜೂ. 5ರಿಂದ ಆ. 5ರವರೆಗೆ ಎರಡು ತಿಂಗಳ ಕಾಲ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಸೇವಾ ಸಮಿತಿ ಹಾಗೂ ಧರೆ ಫೌಂಡೇಷನ್ ಸಂಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿ ನಡೆವುದು, ಕೆರೆಗಳ ಪುನಶ್ಚೇತನ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.
ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನೇತೃತ್ವದಲ್ಲಿ ಜಿಲ್ಲಾ ಪ್ರಾಧಿಕಾರ, ತಾಲೂಕು ಕಾನೂನು ಸೇವಾ ಸಮಿತಿಗಳು ಅಭಿಯಾನವನ್ನು ನಡೆಸಬೇಕಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಣ, ಪೊಲೀಸ್, ಅರಣ್ಯ, ಕಂದಾಯ ಇಲಾಖೆಗಳು, ಮಾಲಿನ್ಯ ನಿಯಂತ್ರಣ ಮಂಡಳಿ, ಆರ್‌ಡಿಪಿಆರ್ ಅಧಿಕಾರಿಗಳೊಂದಿಗೆ ಚರ್ಚಿಸಿ ಕಾರ್ಯಕ್ರಮ ಆಯೋಜಿಸಲಾಗುವುದು ಎಂದರು.
ನಿಗದಿಪಡಿಸಿರುವಂತೆ ರಾಜ್ಯದಾದ್ಯಂತ 5ಕೋಟಿ ಸಸಿ ನೆಡಲು ತೀರ್ಮಾನಿಸಲಾಗಿದೆ. ಇದರಲ್ಲಿ 2ಕೋಟಿ ಸಸಿಗಳನ್ನು ಬೆಂಗಳೂರು ಸುತ್ತಮುತ್ತಲ ಪ್ರದೇಶದಲ್ಲಿ ನೆಡಲಾಗುವುದು. ಇನ್ನುಳಿದ 3 ಕೋಟಿ ಸಸಿಗಳನ್ನು ಇತರೆ ಜಿಲ್ಲೆಗಳಲ್ಲಿ ಹಾಕಲಾಗುವುದು ಎಂದು ತಿಳಿಸಿದರು. ಕಾರ್ಯಕ್ರಮ ನಡೆಸಲು ಜಿಲ್ಲಾ ಮತ್ತು ತಾಲೂಕು ವ್ಯಾಪ್ತಿಯಲ್ಲಿ ಸ್ಥಳಗಳನ್ನು ಗುರುತಿಸಿಕೊಳ್ಳಿ. ಸಂಬಂಧಿಸಿದ ಇಲಾಖೆ, ಸ್ಥಳೀಯ ಸಂಘ, ಸಂಸ್ಥೆಗಳ ಸಹಕಾರ ಬಳಸಿಕೊಳ್ಳಿ ಎಂದು ಹೇಳಿದರು. ಜೆಎಂಎಫ್‌ಸಿ ಹಿರಿಯ ಶ್ರೇಣಿ ನ್ಯಾಯಾಧೀಶರಾದ ಪದ್ಮಶ್ರೀ ಮನ್ನೋಳಿ, ಹೆಚ್ಚುವರಿ ನ್ಯಾಯಾಧೀಶರಾದ ಪುಣ್ಯಕೋಟಿ, ತಾಲೂಕು ವಕೀಲರ ಸಂಘ ಅಧ್ಯಕ್ಷ ಎಂ. ಗುಡ್ಡಪ್ಪ, ಉಪಾಧ್ಯಕ್ಷ ಶಾಂತವೀರಪ್ಪ, ಬಿಇಒ ಕೆ.ಟಿ. ನಿಂಗಪ್ಪ, ಬಿಆರ್‌ಸಿ ತಿಪ್ಪೇಶಪ್ಪ, ತಹಸೀಲ್ದಾರ್ ಕವಿರಾಜ್, ಪೊಲೀಸ್ ಇನ್ಸ್‌ಪೆಕ್ಟರ್ ಎಚ್. ಸುನಿಲ್‌ಕುಮಾರ್, ಹೊನ್ನಾಳಿ ಅರಣ್ಯ ಇಲಾಖೆ ಕಿಶೋರ್ ನಾಯ್ಕ, ನ್ಯಾಮತಿ ಠಾಣೆ ಪಿಎಸ್‌ಐ ಶೋಭಾರಾಣಿ, ಇಸಿಒ ಮುದ್ದನಗೌಡ, ಅರುಣಕುಮಾರ್ ಇದ್ದರು.