ಹರಿಹರ ತಾಲೂಕಿನ ಹೊಳೆಸಿರಿಗೆರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶುಕ್ರವಾರ ರಾಷ್ಟ್ರೀಯ ಡೆಂಘೆ ದಿನಾಚರಣೆ ಜರುಗಿತು. ಡಾ.ಅಬ್ದುಲ್ ಖಾದರ್, ಡಾ.ಚೇತನ್, ಎಂ.ಉಮ್ಮಣ್ಣ ಇದ್ದರು. Dengue 
ದಾವಣಗೆರೆ

ಡೆಂಘೆ ನಿಯಂತ್ರಣಕ್ಕೆ ಪರಿಸರ ನೈರ್ಮಲ್ಯವೇ ಮದ್ದು Dengue

ಶೋಭಾ ಕೃಷ್ಣ ಗೌಡ

ಪ್ರಮುಖ ಮುಖ್ಯಾಂಶಗಳು

  • ಆರೋಗ್ಯಾಧಿಕಾರಿ ಡಾ. ಅಬ್ದುಲ್ ಖಾದರ್ ಹೇಳಿಕೆ
  • ರಾಷ್ಟ್ರೀಯ ಡೆಂಘೆ ದಿನಾಚರಣೆ
ಹರಿಹರ: ಪರಿಸರ ನೈರ್ಮಲ್ಯ ಹಾಗೂ ಸಮುದಾಯದ ಸಹಭಾಗಿತ್ವದಿಂದ ಮಾತ್ರ ಡೆಂಘೆ ರೋಗದ ನಿಯಂತ್ರಣ ಸಾಧ್ಯ ಎಂದು ತಾಲೂಕು ಆರೋಗ್ಯಾ ಧಿಕಾರಿ ಡಾ. ಅಬ್ದುಲ್ ಖಾದರ್ ಹೇಳಿದರು. Dengue
ಹೊಳೆಸಿರಿಗೆರೆ ಪ್ರಾಥಮಿಕ ಆರೋಗ್ಯ ಕೇಂದ್ರ ದಲ್ಲಿ ಶುಕ್ರವಾರ ಆಯೋಜಿಸಿದ್ದ ರಾಷ್ಟ್ರೀಯ ಡೆಂಘೆ ದಿನಾಚರಣೆಯಲ್ಲಿ ಮಾತನಾಡಿ, ಸಾರ್ವಜನಿಕರು ತಮ್ಮ ಮನೆ ಸುತ್ತ ನೀರು ನಿಲ್ಲದಂತೆ ಎಚ್ಚರವಹಿಸಬೇಕು ಎಂದರು.
ವೈದ್ಯಾಧಿಕಾರಿ ಡಾ. ಚೇತನ್ ಮಾತನಾಡಿ, ಡೆಂಘೆ ಹರಡುವ ಈಡಿಸ್ ಈಜಿಪ್ಟೈ ಸೊಳ್ಳೆಗಳು ಶುದ್ಧ ನೀರಿನಲ್ಲಿಯೇ ಸಂತಾನೋತ್ಪತ್ತಿ ಮಾಡುತ್ತವೆ. ಹೀಗಾಗಿ ಪ್ರತಿ 4 ದಿನಕ್ಕೊಮ್ಮೆ ನೀರಿನ ಪಾತ್ರೆ ಅಥವಾ ತೊಟ್ಟಿಗಳನ್ನು ತೊಳೆದು, ಒಣಗಿಸಿ ಮರುಬಳಸಬೇಕು. ಹಗಲು ಮಲಗುವ ಗರ್ಭಿಣಿಯರು ಕಡ್ಡಾಯವಾಗಿ ಸೊಳ್ಳೆ ಪರದೆ ಬಳಸಬೇಕು. ಏಕಾಏಕಿ ತೀವ್ರ ಜ್ವರ, ಕಣ್ಣಿನ ಹಿಂಭಾಗ - ತಲೆ - ಮೈ ಕೈ ನೋವು, ವಾಂತಿ, ಚರ್ಮ ಹಾಗೂ ವಸಡಿನಲ್ಲಿ ರಕ್ತಸ್ರಾವ ಇವು ಡೆಂಘೆ ಲಕ್ಷಣಗಳು. ಜ್ವರ ಬಂದ ಕೂಡಲೇ ಸಮೀಪದ ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಸಲಹೆ ನೀಡಿದರು.
ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿ ಕಾರಿ ಎಂ. ಉಮ್ಮಣ್ಣ ಮಾತನಾಡಿ, ಮಳೆಗಾಲದಲ್ಲಿ ಗುಂಡಿ ಹಾಗೂ ಘನತ್ಯಾಜ್ಯಗಳಲ್ಲಿ ನೀರು ಸಂಗ್ರಹವಾಗದಂತೆ ಎಚ್ಚರವಹಿಸಿ ವಿಲೇವಾರಿ ಮಾಡುವಂತೆ ಸೂಚಿಸಿದರು.
ಆರೋಗ್ಯ ಶಿಕ್ಷಣಾಧಿಕಾರಿ ನಾಗರಾಜ ಮಾತನಾಡಿ, ಪರಿಶೀಲಿಸಿ, ಸ್ವಚ್ಛಗೊಳಿಸಿ, ಮುಚ್ಚಿಡಿ ಎಂಬ ಡೆಂಘೆ ನಿಯಂತ್ರಣದ ಧ್ಯೇಯವಾಕ್ಯ ವಿವರಿಸಿದರು. ಮನೆ-ಮನೆ ಭೇಟಿಗೆ ಬರುವ ಆಶಾ ಹಾಗೂ ಆರೋಗ್ಯ ಸಿಬ್ಬಂದಿಗೆ ಸಾರ್ವಜನಿಕರು ಸಹಕರಿಸುವಂತೆ ನಿರೀಕ್ಷಣಾಧಿ ಕಾರಿ ಪ್ರಹ್ಲಾದ್ ಮನವಿ ಮಾಡಿದರು. ಆರೋಗ್ಯ ಸಿಬ್ಬಂದಿ, ಪ್ರಯೋಗಶಾಲಾ ತಂತ್ರಜ್ಞರು ಇತರರಿದ್ದರು.