fire ಹೊನ್ನಾಳಿ ಅಗ್ನಿಶಾಮಕ ದಳದವರು ಬಂದು ಬೆಂಕಿ ನಂದಿಸಿದ್ದಾರೆ.
- ತೋಟದಿಂದ ಹೊರಬರಲಾಗದೆ ಮಾಲೀಕ ಮೃತ
- ಕುರುವ ಗ್ರಾಮದಲ್ಲಿ ದುರ್ಘಟನೆ
- ಗ್ರೇಡ್ 2 ತಹಸೀಲ್ದಾರ್ H. B. ಗೋವಿಂದಪ್ಪ ಭೇಟಿ
ನ್ಯಾಮತಿ: FIreತಾಳೆ ತೋಟಕ್ಕೆ ಬೆಂಕಿ ತಗುಲಿ ಅದರಲ್ಲಿದ್ದ ಜಮೀನಿನ ಮಾಲೀಕ ತೋಟದಿಂದ ಹೊರಬರಲಾಗದೆ ಮೃತಪಟ್ಟಿರುವ ದುರ್ಘಟನೆ ಬುಧವಾರ ಕುರುವ ಗ್ರಾಮದಲ್ಲಿ ನಡೆದಿದೆ.
ಈಶ್ವರಪ್ಪ(80) ಮೃತ ದುರ್ದೈವಿ. 2.20 ಎಕರೆಯ ತಾಳೆ ತೋಟದಲ್ಲಿ ಸುಮಾರು 2 ಎಕರೆಯಷ್ಟು ವಿಸ್ತೀರ್ಣ ಸುಟ್ಟು ಕರಕಲಾಗಿದೆ.
ಸ್ಥಳಕ್ಕೆ ಹೊನ್ನಾಳಿ ಅಗ್ನಿಶಾಮಕ ದಳದವರು ಬಂದು ಬೆಂಕಿ ನಂದಿಸಿದ್ದಾರೆ. ಗ್ರೇಡ್ 2 ತಹಸೀಲ್ದಾರ್ H. B. ಗೋವಿಂದಪ್ಪ ಭೇಟಿ ಕೊಟ್ಟು ಸ್ಥಳ ವೀಕ್ಷಣೆ ಮಾಡಿದ್ದಾರೆ.
ಶವವನ್ನು ಮರಣೋತ್ತರ ಪರೀಕ್ಷೆಗಾಗಿ ನ್ಯಾಮತಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕೊಂಡೊಯ್ಯಲಾಗಿದೆ.