ದಾವಣಗೆರೆಯ ಕುವೆಂಪು ಕನ್ನಡ ಭವನದಲ್ಲಿ ಶನಿವಾರ ‘ಹಾಡು ಹಕ್ಕಿ’ ನಾಟಕ ಪ್ರದರ್ಶನ ನಡೆಯಿತು.  
ದಾವಣಗೆರೆ

ಹಾಡು ಹಕ್ಕಿ ನಾಟಕ ಪ್ರದರ್ಶನ

ರಮೇಶ ಜಹಗೀರದಾರ್

ಪ್ರಮುಖ ಮುಖ್ಯಾಂಶಗಳು

  • ಡಾ. ಜಿ.ಎಸ್. ಶಿವರುದ್ರಪ್ಪ ಅವರ ಜೀವನಗಾಥೆ
  • ರಂಗಾಸಕ್ತರ ಮೆಚ್ಚುಗೆ ಪಡೆದ ಅಭಿನಯ
ದಾವಣಗೆರೆ : ಇಲ್ಲಿನ ರಂಗ ವೇದಿಕೆ ಅಕಾಡೆಮಿ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಂಯುಕ್ತ ಆಶ್ರಯದಲ್ಲಿ, ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪ ಜನ್ಮ ಶತಮಾನೋತ್ಸವ ಹಾಗೂ ಜಾನಪದ ವಿದ್ವಾಂಸ ದಿ. ಡಾ. ಎಂ.ಜಿ. ಈಶ್ವರಪ್ಪ ಸ್ಮರಣಾರ್ಥವಾಗಿ ನಗರದ ಕುವೆಂಪು ಕನ್ನಡ ಭವನದಲ್ಲಿ ಶನಿವಾರ ಸಂಜೆ ‘ಹಾಡು ಹಕ್ಕಿ’ ನಾಟಕ ಪ್ರದರ್ಶನಗೊಂಡಿತು.
ಡಾ. ಜಿ.ಎಸ್. ಶಿವರುದ್ರಪ್ಪ ಅವರ ಜೀವನಗಾಥೆಯನ್ನು ಆಧರಿಸಿದ ಹಾಡು ಹಕ್ಕಿ ನಾಟಕವನ್ನು ಶಂಭುಲಿಂಗ ಕೊಟ್ಟೂರು ಅವರ ನಿರ್ದೇಶನದಲ್ಲಿ ಹಾಗೂ ಕೆ.ಪಿ. ರುದ್ರೇಶಮೂರ್ತಿ ಅವರ ಸಹ ನಿರ್ದೇಶನದಲ್ಲಿ, ದಾವಣಗೆರೆಯ ಶ್ರೀ ಜಗದ್ಗುರು ಜಯವಿಭವ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಅಭಿನಯಿಸಿ ರಂಗಾಸಕ್ತರ ಮೆಚ್ಚುಗೆ ಪಡೆದರು.
ನಾಟಕ ಪ್ರದರ್ಶನದ ಮುನ್ನ ಡಾ.ಎಂ.ಜಿ. ಈಶ್ವರಪ್ಪ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಲಾಯಿತು. ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ. ವಾಮದೇವಪ್ಪ ತೊಗಲೇರಿ, ಪ್ರತಿಮಾ ಸಭಾದ ಗೌರವಾಧ್ಯಕ್ಷ ಪ್ರೊ. ಎಸ್. ಹಾಲಪ್ಪ ನೆರವೇರಿಸಿದರು.
ವೃತ್ತಿ ರಂಗಭೂಮಿ ರಂಗಾಯಣದ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ, ವಿಶ್ರಾಂತ ಕನ್ನಡ ಪ್ರಾಧ್ಯಾಪಕಿ ಪ್ರೊ. ಬಸಮ್ಮ ಈಶ್ವರಪ್ಪ ಇದ್ದರು. ರಂಗ ನಿರ್ದೇಶಕ ಶಂಭುಲಿಂಗ ಕೊಟ್ಟೂರು, ರಂಗ ಸಹನಿರ್ದೇಶಕ ಕೆ.ಪಿ.ರುದ್ರೇಶಮೂರ್ತಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧ್ಯಕ್ಷ ಕೆ.ರಾಘವೇಂದ್ರ ನಾಯರಿ ಸಾಲಿಗ್ರಾಮ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಸುಮತಿ ಜಯಪ್ಪ, ರೇವಣಸಿದ್ದಪ್ಪ ಅಂಗಡಿ, ಜಿಗಳಿ ಪ್ರಕಾಶ್, ಮಲ್ಲಮ್ಮ ನಾಗರಾಜ್, ಸುವರ್ಣಮ್ಮ ಇದ್ದರು.