ದಾವಣಗೆರೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ. ರಾಮಪ್ಪ, ಅಧೀಕ್ಷಕ ಮಂಜುನಾಥ್ ವಡ್ಡರ್, ಎಡಿಸಿ ಶಿವಕುಮಾರ ಶೀಲವಂತ್, ಜಿಪಂ ಉಪ ಕಾರ್ಯದರ್ಶಿ ಮಮತಾ ಹೊಸಗೌಡರ್ ಇದ್ದರು. 
ದಾವಣಗೆರೆ

ಸಾಲಕ್ಕೆ ಸಿಬಿಲ್ ಸ್ಕೋರ್ ಪರಿಗಣಿಸದಿರಿ

ಪ್ರಮುಖ ಮುಖ್ಯಾಂಶಗಳು

  • ಭೋವಿ ನಿಗಮದ ಅಧ್ಯಕ್ಷ ರಾಮಪ್ಪ ತಾಕೀತು
  • ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ
  • ಮಹಿಳಾ ಸಂಘಗಳ ನೋಂದಣಿಗೆ ಉತ್ತೇಜಿಸಿ
ಆಯ್ಕೆ ಪಟ್ಟಿ ನೀಡದ ಶಾಸಕರು
ಭೋವಿ ಅಭಿವೃದ್ಧಿ ನಿಗಮದಡಿ ಸ್ವಯಂ ಉದ್ಯೋಗದ ನೇರಸಾಲ, ಉದ್ಯಮಶೀಲ, ಗಂಗಾ ಕಲ್ಯಾಣ ಯೋಜನೆಯಡಿ 2022-23ನೇ ಸಾಲಿನಿಂದ ಇದುವರೆಗೂ ಮಾಯಕೊಂಡ ಕ್ಷೇತ್ರದಿಂದ ಫಲಾನುಭವಿಗಳ ಆಯ್ಕೆ ಪಟ್ಟಿ ಬಾರದಿರುವುದು ಸಭೆಯಲ್ಲಿ ಚರ್ಚೆಗೆ ಗ್ರಾಸವಾಯಿತು. ಶಾಸಕರು ಕಾರ್ಯ ಒತ್ತಡದಲ್ಲಿದ್ದರೆ ಅಧಿಕಾರಿಗಳೇ ಅವರ ಮನೆಗೆ ಎಡತಾಕಿ ಫಲಾನುಭವಿಗಳ ಪಟ್ಟಿ ಪಡೆಯಬೇಕು ಎಂದು ಅಧ್ಯಕ್ಷರು ಸೂಚನೆ ನೀಡಿದರು.
300 ಕೋಟಿ ರೂ. ಅನುದಾನಕ್ಕೆ ಪ್ರಸ್ತಾವ
ಭೋವಿ ಅಭಿವೃದ್ಧಿ ನಿಗಮಕ್ಕೆ ಮುಂಬರುವ ಬಜೆಟ್‌ನಲ್ಲಿ ಕನಿಷ್ಠ 300 ಕೋಟಿ ರೂ. ಅನುದಾನ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಿರುವುದಾಗಿ ನಿಗಮದ ಅಧ್ಯಕ್ಷ ಎಂ. ರಾಮಪ್ಪ ಹೇಳಿದರು.
ನಿಗಮದಲ್ಲಿ ಹಾಲಿ 93.75 ಕೋಟಿ ರೂ. ಕಳೆದ ವರ್ಷದ 175 ಕೋಟಿ ರೂ. ಇದೆ. ಈ ಬಾರಿ ಭೋವಿ ಸಮಾಜದ ಜನಸಂಖ್ಯೆ 20 ಲಕ್ಷ ದಾಟಿರುವ ಸಾಧ್ಯತೆ ಇದೆ. ಇದರಡಿ ಹೆಚ್ಚಿನ ಅನುದಾನ ಕೋರಲಾಗುವುದು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಎಲ್ಲ ಜನಪ್ರತಿನಿಧಿಗಳ ಸಭೆ ಕರೆದು ಸಮಾಜದ ಮಕ್ಕಳಿಗೆ ವಿವಿಧ ಹಂತದ ತರಬೇತಿ ಕಲ್ಪಿಸಲು ನೆರವಾಗುವಂತೆ ಮನವಿ ಮಾಡುವುದಾಗಿ ಹೇಳಿದರು.
ಕುರಿ, ಹಸು ಸಾಕಾಣಿಕೆಯವರಿಗೆ ಸಾಲ ಸೌಲಭ್ಯದ ವೆಚ್ಚ ಕಡಿಮೆ ಇದೆ. ಹೀಗಾಗಿ ನರೇಗಾ ಯೋಜನೆಯಡಿ ಶೆಡ್ ನಿರ್ಮಿಸಿಕೊಡುವಂತೆ ಸೂಚಿಸಲಾಗಿದೆ ಎಂದ ಅವರು ಇಲಾಖೆ ಯೋಜನೆಗಳ ಬಗ್ಗೆ ವಿವರಿಸಿದರು.

ನಿಗಮದಡಿ ನಿರೀಕ್ಷಿತ ಗುರಿ ತಲುಪಲು, ಫಲಾನುಗಳನ್ನು ಆಯ್ಕೆ ಮಾಡುವಂತೆ ಎಲ್ಲ 224 ಶಾಸಕರಿಗೂ ಪತ್ರ ಬರೆದಿದ್ದೇನೆ ಎಂದ ಅವರು, ಭೋವಿ ಸಮಾಜದ ವಿದ್ಯಾರ್ಥಿಗಳಿಗೆ ಕಲ್ಲು ಹಾಗೂ ಮರ ಕೆತ್ತನೆ ಕುಶಲತೆ ಕುರಿತಂತೆ ವೃತ್ತಿ ತರಬೇತಿ ಕೊಡಿಸುವ ಚಿಂತನೆ ಇದೆ.