ಹರಿಹರ ತಾಲೂಕಿನ ಸಲಗನಹಳ್ಳಿ ಗ್ರಾಮದಲ್ಲಿ ಕೆಪಿಎಸ್ ಮ್ಯಾಗ್ನೆಟ್ ಯೋಜನೆ ವಿರೋಧಿಸಿ ಎಐಡಿಎಸ್‌ಒ ನೇತೃತ್ವದಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಎಐಡಿಎಸ್‌ಒ ಜಿಲ್ಲಾ ಅಧ್ಯಕ್ಷೆ ಪೂಜಾ ನಂದಿಹಳ್ಳಿ, ವಿಜಯಕುಮಾರ, ಎಸ್.ಜಿ. ರೇವಣಸಿದ್ದಪ್ಪ, ಬಸವರಾಜ, ಕೆಂಚಮ್ಮ ಇತರರು ಇದ್ದರು. Magnet 
ದಾವಣಗೆರೆ

ಮ್ಯಾಗ್ನೆಟ್ ಯೋಜನೆಯಡಿ ಶಾಲೆ ಮುಚ್ಚದಿರಿ

ಚಂದನ ವಿ ಎಂ

ಪ್ರಮುಖ ಮುಖ್ಯಾಂಶಗಳು

  • ಪೂಜಾ ನಂದಿಹಳ್ಳಿ ಆಗ್ರಹ
  • ಸಲಗನಹಳ್ಳಿ, ಷಂಶೀಪುರದಲ್ಲಿ ಪ್ರತಿಭಟನೆ
ಹರಿಹರ: ಆಳುವವರು ಎಲ್ಲ ಕಾಲಕ್ಕೂ ಜನರನ್ನು ಅಜ್ಞಾನಿಗಳನ್ನಾಗಿ ಮಾಡಲು ಯತ್ನಿಸಿದ್ದಾರೆ ಎಂದು ಎಐಡಿಎಸ್‌ಒ ಜಿಲ್ಲಾ ಅಧ್ಯಕ್ಷೆ ಪೂಜಾ ನಂದಿಹಳ್ಳಿ ಆರೋಪಿಸಿದರು. Magnet
ತಾಲೂಕಿನ ಸಲಗನಹಳ್ಳಿ ಮತ್ತು ಷಂಶಿಪುರ ಗ್ರಾಮದಲ್ಲಿ ಕೆಪಿಎಸ್ ಮ್ಯಾಗ್ನೆಟ್ ಯೋಜನೆಯಡಿ ಶಾಲೆ ಮುಚ್ಚುವುದನ್ನು ಖಂಡಿಸಿ ಸಲಗನಹಳ್ಳಿಯಲ್ಲಿ ಗುರುವಾರ ಗ್ರಾಮಸ್ಥರೊಂದಿಗೆ ಪ್ರತಿಭಟನೆ ನಡೆಸಿ ಮಾತನಾಡಿದರು.
1946ರಲ್ಲಿ ಸ್ಥಾಪಿಸಿದ ಷಂಶಿಪುರ ಸರ್ಕಾರಿ ಶಾಲೆಗೆ 80ವರ್ಷ ತುಂಬಿದೆ. ಶಾಲೆಯ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಶಾಲೆಗೆ ಅಭಿವೃದ್ಧಿಯ ಕೊಡುಗೆ ನೀಡಬೇಕಿತ್ತು. ಆದರೆ, ಅದಕ್ಕೆ ವಿರುದ್ಧವಾಗಿ ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಹೆಸರಿನಲ್ಲಿ ಶಾಲೆಗೆ ಬೀಗ ಜಡಿಯಲಾಗುತ್ತಿದೆ ಎಂದರು.
ಊರಿನಲ್ಲಿ ಶಾಲೆಗಳಿದ್ದರೆ ಬಡವರ ಮಕ್ಕಳು ಶಿಕ್ಷಣ ವಂತರಾಗುತ್ತಾರೆ. ಪ್ರಪಂಚವನ್ನು ವಸ್ತುನಿಷ್ಠವಾಗಿ ಅರಿಯುವ ಸಾಮರ್ಥ್ಯ ಗಳಿಸಿ ಸಮಸ್ಯೆಗಳನ್ನು ಪ್ರಶ್ನಿಸುತ್ತಾರೆ. ಇದಕ್ಕೆ ಸರ್ಕಾರ ಅಂಜುತ್ತಿದೆ. ಸರ್ಕಾರದ ಅನ್ಯಾಯಗಳ ವಿರುದ್ಧ ಮುಂದೆ ಹೋರಾಟ ಗಳಾಗುತ್ತವೆ ಎಂಬ ಆತಂಕದಲ್ಲಿ ಶಾಲೆಗಳನ್ನು ಮುಚ್ಚಲು ಮುಂದಾಗಿದೆ ಎಂದು ಆರೋಪಿಸಿದರು. ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ಸದಸ್ಯ ಅನಿಲ್ ಮಾತನಾಡಿ, ಹಸಿವು, ಬಡತನ, ನಿರುದ್ಯೋಗ, ರೈತರ ಆತ್ಮಹತ್ಯೆ ಹೀಗೆ ಅನೇಕ ಸವಾಲುಗಳನ್ನು ದೇಶ ಎದುರಿಸುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯ ಸಲಗನ ಹಳ್ಳಿ ಅಧ್ಯಕ್ಷ ವಿಜಯಕುಮಾರ, ಷಂಶಿಪುರ ಅಧ್ಯಕ್ಷ ಎಸ್. ಜಿ. ರೇವಣಸಿದ್ದಪ್ಪ, ಕಾರ್ಯದರ್ಶಿಗಳಾದ ಬಸವರಾಜ, ಕೆಂಚಮ್ಮ, ಗ್ರಾಮಸ್ಥರಾದ ರಾಜಪ್ಪ ಮರಾಠಿ, ಗುರುಮೂರ್ತಿ, ವೈ.ಜಿ. ಕಾಂತೇಶ, ಚಂದ್ರಶೇಖರ್, ಮಹೇಂದ್ರಪ್ಪ, ಎಚ್.ಎಸ್. ಶ್ರೀನಿವಾಸ ಇತರರು ಇದ್ದರು.