ಚನ್ನಗಿರಿ ತಾಲೂಕು ನಲ್ಲೂರಿನಲ್ಲಿ ಬುಧವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯಿಂದ ನೂತನ ಜ್ಞಾನವಿಕಾಸ ಯೋಜನಾ ಕೇಂದ್ರವನ್ನು ಸಂಸ್ಥೆ ಯೋಜನಾಧಿಕಾರಿ ಅನ್ನಪೂರ್ಣ ಉದ್ಘಾಟಿಸಿದರು. ಭಾಸ್ಕರ್, ಶಂಕರ್, ಸುಧಾ ಇತರರು ಇದ್ದರು. information
- ಯೋಜನಾಧಿಕಾರಿ ಅನ್ನಪೂರ್ಣ ಹೇಳಿಕೆ
- ಸೀಯರಿಗೆ ಸಂಸ್ಥೆಯಿಂದ ಮಾರ್ಗದರ್ಶನ
ಚನ್ನಗಿರಿ: ಮಹಿಳೆಯರಿಗೆ ಕುಟುಂಬ ನಿರ್ವಹಣೆಯ ಬುದ್ಧಿವಂತಿಕೆ, ಹಣಕಾಸಿನ ವ್ಯವಹಾರ, ಮಕ್ಕಳ ಶಿಕ್ಷಣ, ಪರಿಸರ ಕಾಳಜಿ ಸೇರಿದಂತೆ ಅನೇಕ ರೀತಿಯ ಮಾಹಿತಿ ಒದಗಿಸುವಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಜ್ಞಾನವಿಕಾಸ ಕಾರ್ಯಕ್ರಮ ಸಹಕಾರಿಯಾಗಿದೆ ಎಂದು ಸಂಸ್ಥೆಯ ಯೋಜನಾಧಿಕಾರಿ ಅನ್ನಪೂರ್ಣ ಹೇಳಿದರು. information
ಚನ್ನಗಿರಿ ತಾಲೂಕು ನಲ್ಲೂರು ಗ್ರಾಮದಲ್ಲಿ ಬುಧವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ನೂತನ ಜ್ಞಾನವಿಕಾಸ ಕೇಂದ್ರದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಜ್ಞಾನವಿಕಾಸ ಧರ್ಮಸ್ಥಳದ ಡಾ. ಹೇಮಾವತಿ ವಿ. ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಕಾರ್ಯಕ್ರಮವಾಗಿದೆ. ಮಹಿಳೆಯರು ಸ್ವಾವಲಂಬಿಗಳಾಗಿ ಹಾಗೂ ಸರ್ವತೋಮುಖ ಅಭಿವೃದ್ಧಿ ಹೊಂದಿ ಉತ್ತಮ ಜೀವನ ಕಟ್ಟಿಕೊಳ್ಳಲು ಈ ಯೋಜನೆ ರೂಪಿತವಾಗಿದೆ ಎಂದರು. ಮಹಿಳೆಯರು ಎಲ್ಲ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿದ್ದು, ತಮ್ಮದೇ ವಿಶೇಷತೆಗಳಿಂದ ಗುರುತಿಸಿಕೊಂಡಿದ್ದಾರೆ. ಅಭಿವೃದ್ಧಿ ಹೊಂದಲು ಅನೇಕ ಮಾರ್ಗಗಳಿವೆ, ಅವುಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು. ಮಹಿಳೆಯರನ್ನು ಸ್ವಾವಲಂಬಿಗಳಾಗಿಸುವಲ್ಲಿ ನಮ್ಮ ಸಂಸ್ಥೆ ಸಂಘಗಳ ರಚನೆ ಮಾಡಿ ಅವುಗಳ ಮೂಲಕ ಸ್ತ್ರೀಯರಿಗೆ ಸಹಕಾರ ನೀಡುವ ಕೆಲಸ ಮಾಡುತ್ತಿದೆ. ಇದರ ಪ್ರಯೋಜನವನ್ನು ಪ್ರತಿಯೊಬ್ಬ ಮಹಿಳೆ ಪಡೆಯಬೇಕಿದೆ ಎಂದರು.
ಜ್ಞಾನವಿಕಾಸ ಯೋಜನೆ ಸಮನ್ವಯಾಧಿಕಾರಿ ಸವಿತಾ ಮಾತನಾಡಿ, ಜೀವನದಲ್ಲಿ ಆರೋಗ್ಯವೇ ದೊಡ್ಡ ಆಸ್ತಿ, ಮಹಿಳೆ ಯರು ಉತ್ತಮ ಆರೋಗ್ಯ ಹೊಂದಬೇಕು. ಆಗ ಮಾತ್ರ ನಿಮ್ಮ ಕುಟುಂಬ ಸ್ವಸ್ಥವಾಗಲಿದೆ ಎಂದರು. ಜ್ಞಾನವಿಕಾಸ ಯೋಜನೆ ಮಹಿಳೆಯರಿಗೆ ಸ್ವಾವಲಂಬನೆ, ಆರೋಗ್ಯ, ಕಾನೂನು ಅರಿವು, ಉಳಿತಾ ಜತೆಗೆ ಸರ್ಕಾರದ ಯೋಜನೆಗಳ ಸಂಪೂರ್ಣ ಮಾಹಿತಿ ನೀಡುತ್ತಿದೆ. ಮಹಿಳಾ ಸಂಘ ಮತ್ತು ಗುಂಪು ರಚಿಸಿ ವಿವಿಧ ವಿಷಯಗಳ ತರಬೇತಿ ನೀಡಲಾಗುತ್ತದೆ. ಧಾರವಾಡದಲ್ಲಿ ಮಹಿಳಾ ಜ್ಞಾನವಿಕಾಸ ತರಬೇತಿ ಕೇಂದ್ರ ಸ್ಥಾಪಿಸಲಾಗಿದೆ ಎಂದು ಹೇಳಿದರು. ವಲಯದ ಮೇಲ್ವಿಚಾರಕ ಭಾಸ್ಕರ್, ನಲ್ಲೂರು ಗ್ರಾಪಂ ಮಾಜಿ ಸದಸ್ಯ ಶಂಕರ್, ಸೇವಾ ಪ್ರತಿನಿಧಿ ಸುಧಾ, ಒಕ್ಕೂಟದ ಸದಸ್ಯರು ಇದ್ದರು.