ಜಗಳೂರು ಪಟ್ಟಣದ ಲಿಂಗಣ್ಣನಹಳ್ಳಿ ರಸ್ತೆ ವಿಸ್ತರಣೆ ಮತ್ತು ಡಾಂಬರೀಕರಣ ಕಾಮಗಾರಿಗೆ ಶಾಸಕ ಬಿ. ದೇವೇಂದ್ರಪ್ಪ ಭೂಮಿಪೂಜೆ ನೆರವೇರಿಸಿದರು. ಲೋಕೋಪಯೋಗಿ ಎಇಇ ನಾಗರಾಜ್, ಎಇ ಪುರುಷೋತ್ತಮ ರೆಡ್ಡಿ, ಸಿ. ಲೋಕ್ಯಾನಾಯ್ಕಾ, ಪಿಎಸ್‌ಐ ಗಾದಿಲಿಂಗಪ್ಪ, ಗುತ್ತಿಗೆದಾರ ದೀಪಕ್ ಪಟೇಲ್, ಷಂಷೀರ್ ಅಹಮದ್, ಬಿ. ಮಹೇಶ್ವರಪ್ಪ, ಹಟ್ಟಿ ತಿಪ್ಪೇಸ್ವಾಮಿ ಇದ್ದರು. Earth worship
- ಶಾಸಕ ದೇವೇಂದ್ರಪ್ಪ ಹೇಳಿಕೆ
- ಕಾಮಗಾರಿಗಳಿಗೆ ಭೂಮಿಪೂಜೆ
ಜಗಳೂರು: ವಿರೋಧ ಪಕ್ಷಗಳ ಟೀಕೆಗಳಿಗೆ ಪಟ್ಟಣದಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳೇ ಉತ್ತರಿಸುತ್ತವೆ ಎಂದು ಶಾಸಕ ಬಿ. ದೇವೇಂದ್ರಪ್ಪ ಹೇಳಿದರು.
ಪಟ್ಟಣದಲ್ಲಿ ಸೋಮವಾರ ಆರಭಾವಿ- ಚಳ್ಳಕೆರೆ ರಸ್ತೆ ಸರಪಳಿ, ಲಿಂಗಣ್ಣನಹಳ್ಳಿ ರಸ್ತೆ ವಿಸ್ತರಣೆ ಮತ್ತು ಡಾಂಬರೀಕರಣ, ಚಳ್ಳಕೆರೆ ಗೇಟ್‌ನಿಂದ ಮಾರಮ್ಮನ ದೇವಸ್ಥಾನದವರೆಗೆ ರಸ್ತೆ ವಿಸ್ತರಣೆ ಸೇರಿ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಪಂಚ ಗ್ಯಾರಂಟಿಗಳಿಂದ ಲಕ್ಷಾಂತರ ಕುಟುಂಬಗಳು ನೆಮ್ಮದಿಯಿಂದ ಬದುಕುತ್ತಿದ್ದಾರೆ. ಆದರೆ ವಿರೋಧ ಪಕ್ಷದವರು ಮಾತ್ರ ಸುಖಾಸುಮ್ಮನೆ ಆರೋಪ ಮಾಡುತ್ತಿದ್ದಾರೆ. ಕಳೆದ ಎರಡೂವರೆ ವರ್ಷಗಳಲ್ಲಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಹಿಂದೆ ಯಾರೂ ಮಾಡದ ಪ್ರಗತಿಯನ್ನು ಪಟ್ಟಣದ ವಾರ್ಡ್‌ಗಳಲ್ಲಿ ಕೈಗೊಂಡಿದ್ದೇವೆ. ಇವುಗಳು ಕಣ್ಣಿಗೆ ಕಾಣುವುದಿಲ್ಲವೆ ಎಂದು ಪ್ರಶ್ನಿಸಿದರು.
ತಾಲೂಕಿನ ಇತಿಹಾಸದಲ್ಲೇ ಇಷ್ಟೊಂದು ರಸ್ತೆಗಳು ಅಭಿವೃದ್ಧಿಯಾಗಿರಲಿಲ್ಲ. ಗ್ಯಾರಂಟಿಗಳ ಮಧ್ಯೆಯೂ ಕೋಟ್ಯಂತರ ರೂ. ವೆಚ್ಚದಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿವೆ. ಜತೆಗೆ ನೂತನ ಲೇಔಟ್‌ಗಳಲ್ಲಿ ರಸ್ತೆ ಮತ್ತು ಚರಂಡಿಗಳು ನಿರ್ಮಾಣವಾಗುತ್ತಿವೆ ಎಂದರು.
ಲೋಕೋಪಯೋಗಿ ಎಇಇ ನಾಗರಾಜ್, ಎಇ ಪುರುಷೋತ್ತಮ ರೆಡ್ಡಿ, ಸಿ. ಲೋಕ್ಯಾನಾಯ್ಕಾ, ಪಿಎಸ್‌ಐ ಗಾದಿಲಿಂಗಪ್ಪ, ಗುತ್ತಿಗೆದಾರ ದೀಪಕ್ ಪಟೇಲ್, ಷಂಷೀರ್ ಅಹಮದ್, ಬಿ. ಮಹೇಶ್ವರಪ್ಪ, ಹಟ್ಟಿ ತಿಪ್ಪೇಸ್ವಾಮಿ, ಜಿಪಂ ಮಾಜಿ ಸದಸ್ಯೆ ರತ್ನಮ್ಮ, ಗ್ರಾಪಂ ಉಪಾಧ್ಯಕ್ಷ ತಿಪ್ಪೇಸ್ವಾಮಿ, ಕಲ್ಪನಾ, ಸಿಡಿಪಿಒ ಬೀರೇಂದ್ರ ಕುಮಾರ್ ಇತರರಿದ್ದರು.