ಪ್ರಮುಖ ಮುಖ್ಯಾಂಶಗಳು
ತಾಲೂಕಿನ ಗುರುರಾಜಪುರ ಗ್ರಾಮದಲ್ಲಿ ನೂತನ ದ್ವಾರಬಾಗಿಲನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.
"ಸಾರ್ವಜನಿಕರು ಕಟ್ಟುವ ತೆರಿಗೆ ಹಣವನ್ನೇ ಸರ್ಕಾರವು ಮರು ಪಾವತಿ ಮಾಡಿದ ರೀತಿಯಲ್ಲಿ ನಿಮ್ಮ ಖಾತೆಗಳಿಗೆ ಹಣವನ್ನು ಹಾಕುತ್ತಿದೆ. ಆದರೆ, ಈ ಗ್ಯಾರಂಟಿಗಳಿಂದಾಗಿ ಗ್ರಾಮ ಮತ್ತು ಪಟ್ಟಣ ಅಭಿವೃದ್ಧಿ ಆಗಲು ಕಷ್ಟವಾಗಿದೆ. ಜನರು ಇನ್ನಾದರೂ ಎಚ್ಚೆತ್ತುಕೊಳ್ಳಬೇಕಿದೆ, ಸುಂದರ ಗ್ರಾಮದ ಕಲ್ಪನೆಯನ್ನು ಹೊಂದಬೇಕು" ಎಂದು ಅವರು ತಿಳಿಸಿದರು.
"ನನ್ನ ಅಧಿಕಾರಾವಧಿಯಲ್ಲಿ ಪ್ರತಿ ಗ್ರಾಮಕ್ಕೆ ಶುದ್ಧ ಕುಡಿಯುವ ನೀರಿನ ಘಟಕ, ಎಲ್ಲ ಹಳ್ಳಿಗಳಿಗೆ ಶಾಂತಿಸಾಗರದ ನೀರು ಬರುವಂತೆ ಪೈಪ್‌ಲೈನ್ ಮಾಡಿಸಲಾಗಿತ್ತು. ನಾನು ಶಾಸಕನಾಗಿದ್ದ ವೇಳೆಯಲ್ಲಿ ಅಭಿವೃದ್ಧಿ ಹೆಸರಲ್ಲಿ ರಾಜ್ಯದ 10 ತಾಲೂಕುಗಳ ಪೈಕಿ ಚನ್ನಗಿರಿ ಕ್ಷೇತ್ರದ ಹೆಸರು ಬರುವಂತೆ ಮಾಡಿದ್ದೆ" ಎಂದು ಅವರು ತಮ್ಮ ಸಾಧನೆಯನ್ನು ಸ್ಮರಿಸಿದರು.
ಹಿಂದಿನ ಕಾಲದಲ್ಲಿ ಗ್ರಾಮದ ಅಂದವನ್ನು ಕಾಪಾಡಲು ಗ್ರಾಮಸ್ಥರೇ ಸೇರಿ ದ್ವಾರಬಾಗಿಲನ್ನು ನಿರ್ಮಿಸುತ್ತಿದ್ದರು. ಆದರೆ ಈಗ ಸರ್ಕಾರದ ಅನುದಾನದಿಂದಲೇ ಈ ಕೆಲಸಗಳು ಪೂರ್ಣಗೊಳ್ಳುತ್ತಿವೆ ಎಂದು ಮಾಡಾಳು ಹೇಳಿದರು.
ದ್ವಾರಬಾಗಿಲು ಉದ್ಘಾಟನೆ ಪ್ರಯುಕ್ತ ಗ್ರಾಮದಲ್ಲಿ ಮೆರವಣಿಗೆ ಏರ್ಪಡಿಸಲಾಗಿತ್ತು. ಗ್ರಾಮಸ್ಥರು ದಾರಿಗಳಲ್ಲಿ ತಳಿರು ತೋರಣ ಕಟ್ಟಿ ರಂಗೋಲಿ ಹಾಕಿದ್ದರು. ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ನೃತ್ಯ ತಂಡ, ವೀರಗಾಸೆ ತಂಡ ಹಾಗೂ ಕುಂಭಮೇಳ ನಡೆಯಿತು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಜಯಪ್ಪ, ಶಂಕರಪ್ಪ, ಮಂಜುನಾಥ್, ನಾಗರಾಜ್, ಸುರೇಶ್, ಈಶ್ವರ್, ರವಿಕುಮಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.