ರೈತರ ಆತ್ಮಹತ್ಯೆ ತಡೆಗೆ ಶಾಶ್ವತ ಯೋಜನೆಗಳನ್ನು ರೂಪಿಸಲು ಆಗ್ರಹಿಸಿ ರಾಷ್ಟ್ರೀಯ ಕಿಸಾನ್ ಸಂಘದ ಜಿಲ್ಲಾ ಸಮಿತಿ ಪದಾಧಿಕಾರಿಗಳು ಶುಕ್ರವಾರ ದಾವಣಗೆರೆ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಅಲ್ಲಿನ ಶಿರಸ್ತೇದಾರ್‌ಗೆ ಮನವಿ ಸಲ್ಲಿಸಿದರು. ಕೊಂಚೆ ಶಿವರುದ್ರಪ್ಪ, ಡಾ. ಮಲ್ಲಿಕಾರ್ಜುನ್, ಜಿ.ಎಸ್.ತಿಪ್ಪೇಸ್ವಾಮಿ, ಬಿ.ಎನ್.ವಿಜಯಕುಮಾರ್, ಜಿ.ಎಚ್.ಜಯಪ್ರಕಾಶ್ ಇತರರಿದ್ದರು.
- ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ-ಗೊಬ್ಬರ ನೀಡಿ
- ಅಧಿಕಾರಿಗಳ ಸಭೆ ಕರೆದು ಪರಿಹಾರ ಕೈಗೊಳ್ಳಲು ಆಗ್ರಹ
- ರಾಷ್ಟ್ರೀಯ ಕಿಸಾನ್ ಸಂಘದಿಂದ ಡಿಸಿ ಕಚೇರಿಗೆ ಮನವಿ
ದಾವಣಗೆರೆ: ರೈತರ ಆತ್ಮಹತ್ಯೆ ತಡೆಗೆ ಹಾಗೂ ಕೃಷಿ ಕ್ಷೇತ್ರದ ಬಿಕ್ಕಟ್ಟುಗಳ ಪರಿಹಾರಕ್ಕೆ ಶಾಶ್ವತ ಯೋಜನೆಗಳನ್ನು ರೂಪಿಸಲು ಆಗ್ರಹಿಸಿ ರಾಷ್ಟ್ರೀಯ ಕಿಸಾನ್ ಸಂಘದ ಜಿಲ್ಲಾ ಸಮಿತಿ ಪದಾಧಿಕಾರಿಗಳು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಅಲ್ಲಿನ ಶಿರಸ್ತೇದಾರ್‌ಗೆ ಹಾಗೂ ಕೃಷಿ ಇಲಾಖೆಗೆ ತೆರಳಿ ಮನವಿ ಸಲ್ಲಿಸಿದರು.
ರಾಷ್ಟ್ರೀಯ ಅಪರಾಧಗಳ ದಾಖಲೆಗಳ ಬ್ಯೂರೋದ 2024ರ ವರದಿ ಪ್ರಕಾರ ದೇಶದಲ್ಲಿ ರೈತರ ಆತ್ಮಹತ್ಯೆ ಪ್ರಮಾಣ ತಗ್ಗಿದ್ದರೂ, ಕರ್ನಾಟಕದಲ್ಲಿ 2024ರಲ್ಲಿ ಶೇ. 22.61ರಷ್ಟು ಹೆಚ್ಚಿದೆ. ಬೆೆಳೆಗೆ ಸೂಕ್ತ ಆದಾಯ ಸಿಗದಿರುವುದು, ಕಳಪೆ ಬೀಜಗಳ ಬಳಕೆ, ರಸಗೊಬ್ಬರಗಳ ಬೆಲೆ ಏರಿಕೆ, ಅನಿಶ್ಚಿತ ಮಳೆ ಮತ್ತು ಬೆಳೆ ಹಾನಿಯಿಂದಾಗಿ ರೈತರ ಬದುಕು ಚಿಂತಾಜನಕವಾಗಿದೆ ಎಂದು ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೊಂಚೆ ಶಿವರುದ್ರಪ್ಪ ಅಸಮಾಧಾನ ವ್ಯಕ್ತಪಡಿಸಿದರು.
ಅಭಿವೃದ್ಧಿ, ರಸ್ತೆ ವಿಸ್ತರಣೆ ಮತ್ತು ವಾಣಿಜ್ಯ ಸಂಕೀರ್ಣದ ಹೆಸರಿನಲ್ಲಿ ಕೃಷಿ ಭೂಮಿ ನಾಶವಾಗುತ್ತಿದ್ದು, ರೈತರು ಕೃಷಿ ಬಿಟ್ಟು ನಗರಗಳ ಕಡೆಗೆ ವಲಸೆ ಹೋಗುತ್ತಿದ್ದಾರೆ. ಭವಿಷ್ಯದ ಪೀಳಿಗೆ ಮತ್ತು ಯುವಕರಲ್ಲಿ ಕೃಷಿ ಉದ್ಯೋಗದ ಬಗ್ಗೆ ಆಸಕ್ತಿ ಕುಸಿಯುತ್ತಿರುವುದು ಆಹಾರ ಭದ್ರತೆಗೆ ದೊಡ್ಡ ಸವಾಲಾಗಿದೆ ಎಂದು ಹೇಳಿದರು.
ಬಿತ್ತನೆ ಬೀಜ, ತರಕಾರಿ ಬೀಜಗಳು, ಗೊಬ್ಬರ, ಔಷಧ, ಸಾವಯವ ಗೊಬ್ಬರ, ಕೃಷಿ ಯಂತ್ರೋಪಕರಣಗಳನ್ನು ಸಕಾಲಕ್ಕೆ ಎಲ್ಲಾ ವರ್ಗದ ರೈತರಿಗೂ ಕನಿಷ್ಠ ಶೇ.75ರ ರಿಯಾಯಿತಿ ದರದಲ್ಲಿ ನೀಡಬೇಕು. ಆಧಾರ್‌ಕಾರ್ಡ್, ಪಹಣಿ, ಅವಶ್ಯಕ ಬೇಡಿಕೆಗಳನ್ನು ಸಲ್ಲಿಸಿದ ತಕ್ಷಣ ಓಡಾಡಿಸದೆ ಸೌಲಭ್ಯ ಒದಗಿಸಬೇಕು.
ರೈತರ ಜಮೀನುಗಳಿಗೆ ಶಾಶ್ವತ ರಸ್ತೆಗಳನ್ನು ನಕಾಶೆಯಲ್ಲಿ ನಮೂದು ಮಾಡುವುದು. ಮುಂಗಾರು ಅವಧಿ ಪೂರ್ವ ರೈತರ ಸಭೆಗಳನ್ನು ಕರೆದು ಅಗತ್ಯ ಸೌಲಭ್ಯ ಕಾರ್ಯಕ್ರಮ ಅನುಷ್ಠಾನ ಮಾಡಬೇಕು. ಜಿಲ್ಲಾಧಿಕಾರಿ, ಜಂಟಿ ಕೃಷಿ ನಿರ್ದೇಶಕರು, ತೋಟಗಾರಿಕೆ ನಿರ್ದೇಶಕರು, ಜಿಲ್ಲಾವಾರು ರೈತರ, ಮುಖಂಡರ ಅಧಿಕಾರಿಗಳ ಸಭೆ ಕರೆದು ಚರ್ಚಿಸಿ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಂಘದ ಕಾರ್ಯಾಧ್ಯಕ್ಷ ಡಾ. ಮಲ್ಲಿಕಾರ್ಜುನ್, ದಾವಣಗೆರೆ ಜಿಲ್ಲಾಧ್ಯಕ್ಷ ಜಿ.ಎಸ್.ತಿಪ್ಪೇಸ್ವಾಮಿ, ಪ್ರಮುಖರಾದ ಬಿ.ಎನ್.ವಿಜಯಕುಮಾರ್, ಜಿ.ಎಚ್.ಜಯಪ್ರಕಾಶ್, ಕೆ.ಎಸ್. ಶಿವಕುಮಾರ್, ಎಸ್.ಆರ್. ಬಸವರಾಜಪ್ಪ, ಡಿ.ಕೆ.ಪರಮೇಶ್, ರುದ್ರೇಶ್ ಇತರರಿದ್ದರು. ಮಿ, ಬಿ.ಎನ್.ವಿಜಯಕುಮಾರ್, ಜಿ.ಎಚ್.ಜಯಪ್ರಕಾಶ್ ಇತರರಿದ್ದರು.