ಜಗಳೂರು ತಾಲೂಕಿನ ಪಲ್ಲಾಗಟ್ಟೆ- ಜಗಳೂರು ಮಧ್ಯೆ ಕೆಎಸ್‌ಆರ್‌ಟಿಸಿ ಬಸ್ ಪುನಾರಂಭಿಸುವಂತೆ ಆಗ್ರಹಿಸಿ ಗುಡ್ಡದಲಿಂಗಣ್ಣನ ಹಳ್ಳಿ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಅಂಜಿನಪ್ಪ, ಶಾಂತಕುಮಾರ್, ಗೌಡ್ರು ವೀರಬಸಪ್ಪ, ನಾಗರಾಜ್ ಇತರರಿದ್ದರು.protest 
ದಾವಣಗೆರೆ

ಪಲ್ಲಾಗಟ್ಟೆ- ಜಗಳೂರು ಬಸ್ ಸಂಚಾರಕ್ಕೆ ಆಗ್ರಹ protest

ಶೋಭಾ ಕೃಷ್ಣ ಗೌಡ
ಜಗಳೂರು: ಪಲ್ಲಾಗಟ್ಟೆ-ಜಗಳೂರು ಮಾರ್ಗದ ಮಧ್ಯೆ ಶಾಲಾವಧಿಯಲ್ಲಿ ಸಂಚರಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಪುನಾರಂಭಿಸುವಂತೆ ಆಗ್ರಹಿಸಿ ಗುಡ್ಡದಲಿಂಗಣ್ಣಹಳ್ಳಿ ವಿದ್ಯಾರ್ಥಿ ಗಳು, ಗ್ರಾಮಸ್ಥರು ಗುರುವಾರ ಪ್ರತಿಭಟನೆ ನಡೆಸಿದರು.
ಬೆಳಗ್ಗೆ 9 ಗಂಟೆಗೆ ಬಿಡುತ್ತಿದ್ದ ಈ ಬಸ್ ಪಲ್ಲಾಗಟ್ಟೆ, ತಾರೇಹಳ್ಳಿ, ಗೋಡೆ, ಗುಡ್ಡದಲಿಂಗಣ್ಣನಹಳ್ಳಿ ಐನಹಳ್ಳಿ, ಬೈರನಾಯಕನಹಳ್ಳಿ, ಗಿಡ್ಡನಕಟ್ಟೆ ಮಾರ್ಗವಾಗಿ ಜಗಳೂರಿಗೆ ಬರುತ್ತಿತ್ತು. ಕಳೆದ ಎರಡು ತಿಂಗಳಿಂದ ಸಂಚಾರ ಸ್ಥಗಿತಗೊಳಿಸಿದೆ. ಇದರಿಂದ ಶಾಲೆ- ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ ಎಂದು ಗ್ರಾಮಸ್ಥರು ದೂರಿದರು.
ಗ್ರಾಪಂ ಮಾಜಿ ಅಧ್ಯಕ್ಷ ಅಂಜಿನಪ್ಪ ಮಾತನಾಡಿ, ಸುತ್ತಲಿನ ಐದಾರು ಹಳ್ಳಿಯಿಂದ ಪ್ರತಿನಿತ್ಯ150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಜಗಳೂರಿಗೆ ಓಡಾಡುತ್ತಾರೆ ಎಂದು ತಿಳಿಸಿದರು.
ಅನೇಕ ಬಾರಿ ಹೋರಾಟ ಮಾಡಿದ ಪರಿಣಾಮ ಬಸ್ ಸಂಚಾರ ಆರಂಭಿಸಿತ್ತು ಇದೀಗ ಕಾರಣವಿಲ್ಲದೆ ದಿಢೀರ್ ಬಸ್ ನಿಲ್ಲಿಸಲಾಗಿದೆ. ಹೀಗಾದರೆ ಮಕ್ಕಳ ಗತಿ ಏನು? ಬಸ್ ಓಡಿಸಲು ಅಧಿಕಾರಿಗಳಿಗೆ ಏನು ಸಮಸ್ಯೆ? ಎಂದು ಪ್ರಶ್ನಿಸಿದರು.
ಗ್ರಾಮ ಪಂಚಾಯಿತಿ ಸದಸ್ಯ ಶಾಂತಕುಮಾರ್, ಸ್ಥಳೀಯ ಮುಖಂಡರಾದ ಗೌಡ್ರು ವೀರಬಸಪ್ಪ, ನಾಗರಾಜ್ ಸೇರಿ ವಿದ್ಯಾರ್ಥಿಗಳು ಇದ್ದರು.